ಹುಣಸಗಿ: ತಾಲ್ಲೂಕಿನಲ್ಲಿ ನಾರಾಯಣಪುರ ಎಡದಂಡೆ ಕಾಲುವೆಗೆ ಮಾರ್ಚ್ ಅಂತ್ಯದ ವರೆಗೂ ಕಾಲುವೆಗೆ ನೀರು ಹರಿಸಿದ್ದರಿಂದಾಗಿ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟಾಗಿ ಇರಲಿಲ್ಲ. ನೀರು ಸ್ಥಗಿತವಾದ ಬಳಿಕ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ.

ತಾಲ್ಲೂಕಿನ ಅಗ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಗತೀರ್ಥ ಗ್ರಾಮದಲ್ಲಿ ಸುಮಾರು 400ಕ್ಕೂ ಅಧಿಕ ಮನೆಗಳಿದ್ದು, ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಎದರುರಾಗಿದ್ದು, ಇಂದಿಗೂ ಪರಿಹಾರವಾಗಿಲ್ಲ ಎಂದು ಗ್ರಾಮಸ್ಥರಾದ ರಾಮನಗೌಡ ಹೊಸಮನಿ, ಶಿವಣ್ಣ ಪೂಜಾರಿ ದೂರಿದ್ದಾರೆ.

‘ಗ್ರಾಮದಲ್ಲಿ ಒಂದು ಕೊಳವೆ ಬಾವಿ ಇತ್ತು. ಕಾಲುವೆಗೆ ನೀರು ಸ್ಥಗಿತವಾದ ಬಳಿಕ ಈ ಕೊಳವೆ ಬಾವಿ ಬತ್ತಿ ಹೋಗಿದ್ದರಿಂದಾಗಿ ಗ್ರಾಮದಲ್ಲಿ ಹನಿ ನೀರಿಗೂ ಪರದಾಡುವಂಥಾಗಿದೆ. ನೀರು ಬೇಕೆಂದರೆ ನಿತ್ಯವೂ ಪಕ್ಕದ ಮೂರು ಕಿಮಿ ದೂರದಲ್ಲಿರುವ ಸದಬ ಹಾಗೂ ಅಗ್ನಿ ಗ್ರಾಮಕ್ಕೆ ತೆರಳುವುದು ನಮಗೆ ಅನಿವಾರ್ಯವಾಗಿದೆ. ಅಲ್ಲಿ ಹೋದರೂ ಅಲ್ಲಿನ ಗ್ರಾಮಸ್ಥರು ಕೊಳವೆಬಾವಿ ಹಾಳಾದರೇ ಏನು ಮಾಡುವುದು ಎನ್ನುವ ಬೈಗುಳ ಸಾಮಾನ್ಯವಾಗಿದೆ’ ಎನ್ನುತ್ತಾರೆ ಮಹಿಳೆಯರಾದ ಮಾಳಮ್ಮ ದೊಡ್ಡಮನಿ, ಹಣಮವ್ವ ಕೋಳೂರ ಗ್ರಾಮಸ್ಥರು.

‘ಈ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹೇಳಿದರೂ ಕೂಡಾ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಒಬ್ಬರ ಮೇಲೆ ಒಬ್ಬರು ಹಾಕುತ್ತಿದ್ದಾರೆ’ ಎಂದು ಮಹಾಂತಗೌಡ ಆಲಾಳ ಆರೋಪಿಸಿದರು.

‘ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಯಾವುದೇ ಹಣಕಾಸಿನ ತೊಂದರೆ ಇಲ್ಲ ಎಂಬ ಮಾತುಗಳು ಸರ್ಕಾರದಿಂದ ಕೇಳಿ ಬರುತ್ತವೆ. ಹೀಗಾಗಿ ನಮ್ಮ ಗ್ರಾಮದ ಸಮಸ್ಯೆ ಪರಿಹರಿಸಲು ಹೊಸ ಕೊಳವೆ ಬಾವಿ ಕೊರಸಿ ಶಾಶ್ವತ ಸಮಸ್ಯೆ ಪರಿಹರಿಸಲಿ’ ಎಂಬುದು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸಿದ್ದಪ್ಪ ದೊಡ್ಡಮನಿ ಅವರ ಆಗ್ರಹವಾಗಿದೆ.

‘ಗ್ರಾಮದಲ್ಲಿ ಖಾಸಗಿ ವ್ಯಕ್ತಿ ಮಡ್ಡಿಯವರ ಒಂದು ಕೊಳವೆ ಬಾವಿ ಇದೆ. ಆ ಬಾವಿ ಕೂಡಾ ನಿತ್ಯ ಗ್ರಾಮಕ್ಕೆ ಸರಬರಾಜು ಆಗುತ್ತಿರುವ ಪೈಪ್ಲೈನ್ಗೆ ಸಮೀಪದಲ್ಲಿಯೇ ಇದೆ. ಆದರೆ ಸೂಕ್ತ ವ್ಯವಸ್ಥೆ ಮಾಡುವಲ್ಲಿ ಅಧಿಕಾರಿಗಳು ಮುಂದಾಗುತ್ತಿಲ್ಲ’ ಎಂದು ದೂರಿದರು.

ಈ ಕುರಿತು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸಣ್ಣ ನಾಯಕ ಮಾಹಿತಿ ನೀಡಿ ಮಾತನಾಡಿ, ‘ಈಗಾಗಲೇ ಗ್ರಾಮದಲಿರುವ ಖಾಸಗಿ ವ್ಯಕ್ತಿ ಕೊಳವೆ ಬಾವಿಯಿಂದ ನೀರು ಸರಬರಾಜು ಮಾಡಲು ಮುಂದಾಗಿದೆ. ಆದರೆ ಕೊಳವೆ ಬಾವಿಗೆ ಅಳವಡಿಸಲಾಗಿದ್ದ ಮೋಟರ್ನ ನೀರಿನ ರಭಸಕ್ಕೆ ಅಲ್ಲಲ್ಲಿ ಪೈಪ್ಗಳು ಒಡೆಯುತ್ತಿವೆ. ಇನ್ನೆರಡು ದಿನದಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-30-117949767

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.