ಹುಣಸಗಿ: ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿರುವ ಎಚ್ಪಿ ಗ್ಯಾಸ್ ವಿತರಣಾ ಕೇಂದ್ರಕ್ಕೆ ಸರಿಯಾಗಿ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ. ಇದರಿಂದ ತೊಂದರೆ ಅನುಭವಿಸುವಂತಾಗಿದೆ ಎಂಬ ಮಾತುಗಳು ಗ್ರಾಹಕರಿಂದ ಕೇಳಿ ಬರುತ್ತಿದೆ.

ಕಳೆದ ಕೆಲವು ದಿನಗಳಿಂದ ಈ ತೊಂದರೆಯಾಗುತ್ತಿದ್ದು ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಲಿ ಎಂದು ಒತ್ತಾಯಿಸಿದ್ದಾರೆ.

ನಿತ್ಯದ ಕೆಲಸಗಳನ್ನು ಬಿಟ್ಟು ಹಗಲು ರಾತ್ರಿ ಎನ್ನದೇ ಖಾಲಿ ಸಿಲಿಂಡರ್ನೊಂದಿಗೆ ಸರದಿಯಲ್ಲಿ ಕಾಯುವಂತಾಗಿದೆ. ಆದರೂ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ ಎಂದು ಕೆಲವರು ದೂರಿದರು.

‘ಬಿಸಿಲು ಅಧಿಕವಾಗಿದ್ದರಿಂದಾಗಿ ಅಲ್ಲಲ್ಲಿ ಮುಳ್ಳು ಕಂಟಿಗಳ ನೆರಳಿನ ಆಸರೆಯಲ್ಲಿ ಕಾಲ ಕಳೆಯುವಂತಾಗಿದೆ’ ಎಂದು ಸಮಸ್ಯೆಯ ತೀವ್ರತೆಯ ಕುರಿತು ಕೊಡೇಕಲ್ಲ ಗ್ರಾಮದ ಮಶಾಕಸಾಬ್ ತಿಳಿಸಿದರು.

ಕೊಡೇಕಲ್ಲ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೂ ಇಲ್ಲಿಂದಲೇ ಸಿಲಿಂಡರ್ ಪೂರೈಕೆಯಾಗುತ್ತಿದೆ. ಸುಮಾರು 15 ಸಾವಿರ ಗ್ರಾಹಕರಿದ್ದಾರೆ. ಆದರೆ ನಾಲ್ಕು ದಿನಕ್ಕೆ ಒಮ್ಮೆ ಕೇವಲ 342 ಸಿಲಿಂಡರ್ ತುಂಬಿದ ವಾಹನ ಬರುತ್ತದೆ. ಕಳೆದ ನಾಲ್ಕು ದಿನದಿಂದಲೂ ಇನ್ನೂ ವಾಹನ ಬಂದಿಲ್ಲ ಎಂದು ಎಚ್.ಪಿ. ಗ್ಯಾಸ್ ಎಜನ್ಸಿಯ ಸ್ಥಳೀಯ ಸಿಬ್ಬಂದಿ ಬಸವರಾಜ ಅಂಗಡಿ ಮಾಹಿತಿ ನೀಡಿದರು.

ಈ ಹಿಂದೆ 21 ದಿನಕ್ಕೊಮ್ಮೆ ಸಿಲಿಂಡರ್ ಬುಕ್ ಆಗುತ್ತಿತ್ತು. ಈಗ 45 ದಿನಗಳ ಬಳಿಕ ಬುಕ್ ಆಗುತ್ತದೆ ಎಂದು ಮಾಹಿತಿ ಇದೆ. ಆದರೆ ಬುಕ್ ಮಾಡಿ ಒಂದು ವಾರವಾದರೂ ಇಂದಿಗೂ ನಮಗೆ ಸಿಲಿಂಡರ್ ಸಿಗುತ್ತಿಲ್ಲ ಎಂದು ಸರದಿಯಲ್ಲಿ ನಿಂತಿದ್ದ ಹಗರಟಗಿ ಗ್ರಾಮದ ಪವಾಡಬಸ್ಸು ಅಸಮಾಧಾನ ವ್ದಕ್ತಪಡಿಸಿದರು.

ಈ ಕುರಿತು ಅಧಿಕಾರಿಗಳು ಗಮನ ಹರಿಸಿ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಲಿ ಎಂದು ಕರವೇ ಕೊಡೇಕಲ್ಲ ವಲಯಾಧ್ಯಕ್ಷ ರಮೇಶ ದೊರಿ ಒತ್ತಾಯಿಸಿದ್ದಾರೆ.

ಸಿಲಿಂಡರ್ ಕೊರತೆಯ ಬಿಸಿ ಹೊಟೇಲ್ ಉದ್ಯಮಕ್ಕೂ ತಟ್ಟಿದ್ದು ಕೆಲ ಹೋಟೆಲ್ ಬಂದ್ ಆಗುತ್ತಿವೆ. ಇನ್ನು ಕೆಲ ದೋಸೆ ಮಾಡುವದನ್ನು ನಿಲ್ಲಿಸಲಾಗಿದೆ. ಅಲ್ಲದೇ ಹೋಟೆಲ್ನಲ್ಲಿ ಗಾಳಿ ಯಂತ್ರದದ ಕಟ್ಟಿಗೆ ಒಲೆ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ. ಇದರಿಂದ ಶೇ10–15 ರಷ್ಟು ಬೆಲೆ ಏರಿಕೆ ಅನಿವಾರ್ಯವಾಗಿದೆ ಎನ್ನುತ್ತಾರೆ ಹುಣಸಗಿಯ ಮಕರಂದ ಹೋಟೇಲ್ನ ಸಂತೋಷ ಬಳಿ ಹಾಗೂ ಕೃಷ್ಣ ಭವನದ ವಿಜಯಕುಮಾರ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-30-1799795661

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.