ಹಟ್ಟಿ ಚಿನ್ನದ ಗಣಿ: ಸ್ಧಳೀಯ ಹಟ್ಟಿ ಚಿನ್ನದ ಗಣಿ ಕಂಪನಿಯ ಸೆಂಟ್ರಲ್ ಶಾಷ್ಟ್ನ ರಾತ್ರಿ ಪಾಳಯ ಕೆಲಸಕ್ಕೆ ಹೋಗುವಾಗ ವಿದ್ಯುತ್ ಸಂಕರ್ಪ ಕಡಿತವಾಗಿ ಲಿಫ್ಟ್ನ ಒಳಗಡೆ ಇದ್ದ ಕಾರ್ಮಿಕರು ಪರದಾಡಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.

ಲಿಫ್ಟ್ನ ಒಳಗಡೆ ಇದ್ದ ಕಾರ್ಮಿಕರಾದ ಆದಪ್ಪ, ನಾಗರಡ್ಡಿ, ಶ್ರೀಕಾಂತ, ಖಾಜಾಹುಸೇನ, ಬಸವರಾಜ, ಇಮಾಮ್ ಸಾಬ್, ಮೊಗಲಪ್ಪ ಹಾಗೂ ಹನುಮಂತ ಸಿಲುಕಿ ಹಾಕಿಕೊಂಡ ಕಾರ್ಮಿಕರು. ಹನುಮಂತ ಎನ್ನುವ ಕಾರ್ಮಿಕ ಉಸಿರಾಟ ತೊಂದರೆಯಾಗಿ ತಲೆ ಸುತ್ತು ಬಂದು ಬಿದ್ದು ಹೋಗಿದ್ದರು.

ನಾಲ್ಕು ಘಂಟೆಗಳ ಕಾಲ ಲಿಫ್ಟ್ನಲ್ಲಿ ಸಿಲುಕಿ ಗಾಳಿ, ನೀರಿಲ್ಲದೆ ಕಾರ್ಮಿಕರು ಪರದಾಡಿದ್ದಾರೆ. ವಿಷಯ ತಿಳಿದು ಸ್ಧಳಕ್ಕೆ ಗಣಿ ಕಂಪನಿಯ ಅಧಿಕಾರಿಗಳು ಭೇಟಿ ನೀಡಿ ಲಿಫ್ಟ್ ಸರಿಪಡಿಸಿ ಒಳಗಡೆ ಸಿಲುಕಿದ್ದ ಕಾರ್ಮಿಕರನ್ನು ಹೊರ ತಂದಿದ್ದಾರೆ. ಹನುಮಂತ ಎನ್ನುವ ಕಾರ್ಮಿಕನಿಗೆ ತಲೆ ಸುತ್ತು ಬಂದಿದ್ದರಿಂದ ಗಣಿ ಕಂಪನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಸ್ಧಳಕ್ಕೆ ಆಗಮಿಸಿದ ಕಾರ್ಮಿಕ ಮುಖಂಡರು: ಲಿಫ್ಟ್ನಲ್ಲಿ ಸಿಲುಕಿ ಹಾಕಿಕೊಂಡು ಆಸ್ಪತ್ರೆಗೆ ಸೇರಿದ ಕಾರ್ಮಿಕರನ್ನು ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಕಾರ್ಮಿಕ ಮುಖಂಡರು ಭೇಟಿಯಾಗಿ, ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಸೂಕ್ತ ಚಿಕಿತ್ಸೆ ನೀಡುವಂತೆ ಎಂದು ವೈದ್ಯರಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.