ಹಟ್ಟಿ ಚಿನ್ನದ ಗಣಿ : ಹಟ್ಟಿ ಚಿನ್ನದ ಗಣಿ ಕಂಪನಿ ಆಸ್ಪತ್ರೆಯ ಗುಣಮಟ್ಟ ಮತ್ತು ಆರೋಗ್ಯ ಸೇವೆಗಳನ್ನು ಮೇಲ್ದರ್ಜೆಗೇರಿಸುವ ಕುರಿತು ಆಸ್ಪತ್ರೆ ಸುಧಾರಣೆ ಸಮಿತಿ ಸಭೆಯನ್ನು ಬುಧವಾರ ಸಂಜೆ ಹಟ್ಟಿ ಚಿನ್ನದ ಗಣಿ ಆಸ್ಪತ್ರೆಯ ಕಾರ್ಯಾಲಯದಲ್ಲಿ ನಡೆಸಲಾಯಿತು.

ಸಿಐಟಿಯು ಸಂಘಟನೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾರ್ಮಿಕರು ಹಾಗೂ ಅವರ ಕುಟುಂಬಸ್ಥರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿ, ಆರೋಗ್ಯ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮತ್ತು ಸುಧಾರಿತವಾಗಿ ಒದಗಿಸಲು ಹಲವು ಮಹತ್ವದ ಶಿಫಾರಸುಗಳನ್ನು ಮಂಡಿಸಲಾಯಿತು.

ಆಸ್ಪತ್ರೆಯಲ್ಲಿ ಕಾಯಂ ಫಿಜಿಷಿಯನ್ ಹಾಗೂ ಹೃದ್ರೋಗ ತಜ್ಞರನ್ನು ನೇಮಕ ಮಾಡುವುದು, ತುರ್ತು ಚಿಕಿತ್ಸಾ ಘಟಕ(ಐಸಿಯು) ಸ್ಥಾಪನೆ, ವೆಂಟಿಲೇಟರ್ಯುಕ್ತ ಅಂಬುಲೆನ್ಸ್ ಖರೀದಿ, ಉತ್ತಮ ನೈರ್ಮಲ್ಯಯುಕ್ತ ಪರಿಸರ ನಿರ್ಮಾಣ, ಗುಣಮಟ್ಟದ ಔಷಧ ಹಾಗೂ ಪೌಷ್ಟಿಕ ಆಹಾರ ಒದಗಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ಕಾರ್ಮಿಕರ ತಂದೆ-ತಾಯಿಗಳಿಗೆ ಪ್ರತ್ಯೇಕ ರೆಫರಲ್ ಚಿಕಿತ್ಸೆ ಸೌಲಭ್ಯ, ಉಚಿತ ಆಂಬುಲೆನ್ಸ್ ವ್ಯವಸ್ಥೆ, ಆಸ್ಪತ್ರೆಯಲ್ಲಿ ಉನ್ನತ ದರ್ಜೆಯ ಸ್ಕ್ಯಾನಿಂಗ್ ಸೌಲಭ್ಯ, ವಾರ್ಡ್ಗಳಲ್ಲಿ ಬಿಸಿ ನೀರಿನ ವ್ಯವಸ್ಥೆ, ರೋಗಿಗಳು ಮತ್ತು ಸಹಾಯಕರಿಗೆ ಊಟದ ಕೋಣೆ ನಿರ್ಮಾಣ, ಡೇ-ಕೇರ್ ರೋಗಿಗಳಿಗೆ ನೆರಳು ಮತ್ತು ಆಸನ ವ್ಯವಸ್ಥೆ ಮಾಡಿಕೊಡುವಂತೆ ಆಗ್ರಹಿಸಲಾಯಿತು.

ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸ್ಟಾಫ್ ನರ್ಸ್ಗಳು ಮತ್ತು ಗುತ್ತಿಗೆ ಆಧಾರದ ನೌಕರರಿಗೆ ರಿಸ್ಕ್ ಅಲೋವನ್ಸ್ ನೀಡುವುದು, ತುರ್ತು ಚಿಕಿತ್ಸಾ ಘಟಕದಲ್ಲಿ ಚಾಲಕರಿಗೆ ವಿಶ್ರಾಂತಿ ಕೊಠಡಿ ನಿರ್ಮಿಸುವುದು, ಆರ್ಒ ಘಟಕ ಅಳವಡಿಸುವುದು ಸೇರಿದಂತೆ ಮೂಲಸೌಲಭ್ಯ ಒದಗಿಸಬೇಕು ಎಂದು ಮನವಿ ಸಲ್ಲಿಸಲಾಯಿತು.

ಮುಖ್ಯವೈದ್ಯಾಧಿಕಾರಿ ಡಾ.ವಸಂತ ಕುಮಾರ, ಹಣಕಾಸು ವಿಭಾಗದ ಗೌರವ ಕಾರ್ಯದರ್ಶಿ ಬಾಬುರಾವ, ಡಾ.ಸಂತೋಷ ಎನ್., ಡಾ.ಪ್ರಶಾಂತ ನಾವದಗಿ, ಸಿಬ್ಬಂದಿ ಮತ್ತು ಕಾರ್ಮಿಕ ಸಂಘದ ಕಾರ್ಯದರ್ಶಿ ವೆಂಕೋಬ್ ಮಿಯ್ಯಾಪೂರ, ಸಮಿತಿಯ ಸದಸ್ಯರಾದ ದುರುಗಪ್ಪ, ಫಕೃದ್ದೀನ್, ಸೋಮಣ್ಣ ನಾಯಕ್, ಆಸ್ಪತ್ರೆಯ ಸಿಬ್ಬಂದಿ ಕೃಷ್ಣಾ, ರೇಷ್ಮಾ, ಮಹ್ಮದ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-32-1644796669

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.