ಸೋಮವಾರ, ಡಿಸೆಂಬರ್ 6, 2021
22 °C
ಸಿಂಧನೂರು: ವಿದ್ಯಾರ್ಥಿಗಳು- ಪೊಲೀಸರ ನಡುವೆ ವಾಗ್ವಾದ

ಹೆಚ್ಚುವರಿ ಬಸ್‍ ಸೌಲಭ್ಯಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ತಾಲ್ಲೂಕಿನ ಗ್ರಾಮೀಣಗಳಿಗೆ ಹೆಚ್ಚುವರಿ ಬಸ್‍ಗಳ ಸಂಚಾರ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ವಿವಿಧ ಗ್ರಾಮಗಳ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಗರದ ಬಸ್ ನಿಲ್ದಾಣದಲ್ಲಿ ಮಂಗಳವಾರ ಏಕಾಏಕಿ ಬಸ್‍ಗಳ ಮುಂದೆ ಮಲಗಿ, ಅಡ್ಡ ಕುಳಿತು ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟಿಸಿದರು.

ವಿದ್ಯಾರ್ಥಿಗಳು ಬಸ್‌ ಸಂಚಾರ ತಡೆದು ಡಿಪೊ ವ್ಯವಸ್ಥಾಪಕರ ವಿರುದ್ಧ ಘೋಷಣೆ ಕೂಗಿದರು.

ಮಾಹಿತಿ ತಿಳಿಯುದ್ದಂತೆ ಸ್ಥಳಕ್ಕೆ ಬಂದ ಸಬ್‍ಇನ್‌ಸ್ಪೆಕ್ಟರ್‌ ಬಸವರಾಜ ಸೇರಿದಂತೆ ಕಾನ್‍ಸ್ಟೆಬಲ್‍ಗಳು ವಿದ್ಯಾರ್ಥಿ ಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟರು. ಆದರೆ ವಿದ್ಯಾರ್ಥಿಗಳು ಮತ್ತು ಪೊಲೀಸರು ಸುಮಾರು ಅರ್ಧ ಗಂಟೆಗಳ ಕಾಲ ಪರಸ್ಪರ ವಾಗ್ವಾದ ನಡೆಸಿದರು. ಪೊಲೀಸರು ಎಷ್ಟೇ ಸಮಜಾಯಿಸಿದರೂ ವಿದ್ಯಾರ್ಥಿಗಳು ಕೇಳದೆ ಹೆಚ್ಚುವರಿ ಬಸ್ ಬಿಡುವಂತೆ ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ಬಂದ ಸರ್ಕಲ್ ಇನ್‌ಸ್ಪೆಕ್ಟರ್‌ ಉಮೇಶ ಕಾಂಬಳೆ ವಿದ್ಯಾರ್ಥಿ ಗಳ ಸಮಸ್ಯೆ ಎಂದು ಆಲಿಸಿದರು.

‘ಮಾವಿನಮಡ್ಗು, ಸಿದ್ರಾಂಪುರ, ಚನ್ನಳ್ಳಿ, ರಾಮತ್ನಾಳ, ಬನ್ನಿಗನೂರು, ಕನ್ನಾರಿ, ದಿದ್ದಗಿ, ಬಳಗಾನೂರು, ಬೂದಿಹಾಳ, ಅರಳಹಳ್ಳಿ, ದಢೇ ಸುಗೂರು, ಉಪ್ಪಳ, ಕೆಂಗಲ್ ಮತ್ತಿತರ ಗ್ರಾಮಗಳಿಗೆ ಒಂದೊಂದೇ ಬಸ್ ಸಂಚಾರ ಮಾಡುತ್ತಿರುವುದರಿಂದ ತೊಂದರೆಯಾಗಿದೆ. ಒಂದೊಂದು ಮಾರ್ಗದಲ್ಲಿ ಸುಮಾರು 250 ವಿದ್ಯಾರ್ಥಿಗಳಿದ್ದು, ಒಂದೇ ಬಸ್‍ನಲ್ಲಿ ಎಲ್ಲರೂ ಬರಲು ಹೇಗೆ ಸಾಧ್ಯ‘ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.

ನಗರದ ಕಾಲೇಜುಗಳಿಗೆ ಪ್ರತಿನಿತ್ಯ ತಡವಾಗಿ ಬಂದು ಉಪನ್ಯಾಸಕರಿಂದ ಬೈಯಿಸಿಕೊಳ್ಳಬೇಕಾಗಿದೆ. ಹೀಗಾಗಿ ಹೆಚ್ಚುವರಿ ಬಸ್ ಸಂಚಾರ ಬಿಡುವಂತೆ ಅನೇಕ ಬಾರಿ ಡಿಪೊ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದಾಗ್ಯೂ ಸ್ಪಂದಿಸಿಲ್ಲ’ ಎಂದು ವಿದ್ಯಾರ್ಥಿಗಳಾದ ಅಪ್ಪಯ್ಯ, ಗಾಯಿತ್ರಿ, ಶಾರದಾ, ರೇಣುಕಾ, ರಮೇಶ, ಬಸವರಾಜ, ಲಕ್ಷ್ಮಿ, ಶಕುಂತಲಾ, ಶಬನಾ, ರುಕ್ಸಾನಾ ಆಪಾದಿಸಿದರು.

ಆಗ ಡಿಪೊ ವ್ಯವಸ್ಥಾಪಕ ಪ್ರಕಾಶ ದೊಡ್ಡಮನಿ ಅವರನ್ನು ಕರೆಯಿಸಿ ವಿದ್ಯಾರ್ಥಿಗಳಿಂದ ಮನವಿ ಸಲ್ಲಿಸಿದರು. ನಾಳೆಯಿಂದ ಅವಶ್ಯತೆಗೆ ಅನುಗುಣವಾಗಿ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚುವರಿ ಬಸ್ ಸಂಚಾರ ಬಿಡಲಾಗುವುದು ಎಂದು ಭರವಸೆ ನೀಡಿದರು. ದೇವರೆಡ್ಡಿ ಹಾಗೂ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು