ಸಿಂಧನೂರು: ಸೌಹಾರ್ದ ಸಹಕಾರಿಗಳಿಗೆ ಆರ್ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮತದಾನದ ಹಕ್ಕು ನೀಡುವಂತೆ ರಾಯಚೂರು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಒತ್ತಾಯಿಸಿದರು.

ನಗರದ ಕನಕದಾಸ ಕಲ್ಯಾಣ ಮಂಪಟದಲ್ಲಿ ಈಚೆಗೆ ನಡೆದ ರಾಯಚೂರು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ನಾಲ್ಕನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆರ್ಡಿಸಿಸಿ ಬ್ಯಾಂಕಿನಲ್ಲಿ ಷೇರುದಾರರಾಗಿದ್ದರೂ ವಾರ್ಷಿಕ ಸಾಮಾನ್ಯ ಮಹಾಸಭೆಗಳಿಗೆ ಹಾಜರಾಗಿಲ್ಲ ಎನ್ನುವ ನೆಪಹೊಡ್ಡಿ ಉದ್ದೇಶ ಪೂರ್ವಕವಾಗಿಯೇ ಮತದಾನದ ಹಕ್ಕು ಕೊಡುತ್ತಿಲ್ಲ. ತುಂಗಭದ್ರ ಪತ್ತಿನ ಸೌಹಾರ್ದದಿಂದ ತಾವೇ ಎರಡು ಬಾರಿ ಸಾಮಾನ್ಯ ಮಹಾಸಭೆಗೆ ಹಾಜರಾಗಿದ್ದು, ತಮಗೆ ಮತದಾನದ ಹಕ್ಕು ನೀಡಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ಪ್ರಯೋಜನವಾಗಿಲ್ಲ. ಇಂತಹ ಸಮಸ್ಯೆಗಳಿಗೆ ಸೌಹಾರ್ದ ಸಹಕಾರಿ ಒಕ್ಕೂಟದ ಮೂಲಕ ಗಟ್ಟಿಧ್ವನಿ ಎತ್ತಬೇಕಿದೆ. ಅಲ್ಲದೇ ರಾಜ್ಯಮಟ್ಟದ ಮಹಾಮಂಡಳ ಗಮನಕ್ಕೂ ತರಲಾಗುವುದು ಎಂದರು.

ನಿರ್ದೇಶಕ ರಾಜಶೇಖರ ಬಿ. ಮಾತನಾಡಿ, ಸಹಕಾರಿಗಳಿಗೆ ಆದಾಯ ತೆರಿಗೆ ಇಲಾಖೆಯಿಂದ ಪದೇ ಪದೇ ನೋಟಿಸ್ ನೀಡಿ ತೊಂದರೆ ಕೊಡುತ್ತಿದೆ. ಈ ಬಗ್ಗೆ ಏನಾದರೂ ಮಾತನಾಡಿದರೆ ಕೋರ್ಟ್ಗೆ ಹೋಗಿ ಎಂದು ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ಕೊಡುತ್ತಾರೆ. ಸಮಯವೇ ನೀಡದೇ ಏನೇನೋ ಮಾಹಿತಿ ಕೇಳುತ್ತಾರೆ. ಸಕಾಲದಲ್ಲಿ ನೀಡದಿದ್ದರೆ ಮತ್ತೊಂದು ನೋಟೀಸ್ ಕೊಡುತ್ತಾರೆ. ಇದರ ವಿರುದ್ದ ಸಂಘಟಿತ ಹೋರಾಟ ಮಾಡಬೇಕಿದೆ ಎಂದರು.

ಆರ್ಡಿಸಿಸಿ ಬ್ಯಾಂಕ್ಗೆ ಷೇರು ನೀಡುವ ಮೂಲಕ ಸದಸ್ಯರಾಗಬಹುದು. ಸತತ ಮೂರು ಬಾರಿ ಸಾಮಾನ್ಯ ಮಹಾಸಭೆಗಳಿಗೆ ಹಾಜರಾಗಿ ಹಾಜರಾದ ಪತ್ರವಿದ್ದರೆ ಮತದಾನದ ಹಕ್ಕ ತಿರಸ್ಕರಿಸಲು ಬರುವದಿಲ್ಲ. ಈ ಬಗ್ಗೆ ಎಲ್ಲಾ ಸಹಕಾರಿಗಳು ಗಮನ ಹರಿಸಬೇಕು ಎಂದರು.

ನಿರ್ದೇಶಕ ನಲ್ಲಾ ವೆಂಕಟೇಶ್ವರರಾವ್ ವಾರ್ಷಿಕ ಸಾಮಾನ್ಯಸಭೆಯ ನೋಟಿಸ್ ಓದಿ ದಾಖಲಿಸಿದರು. ನಿರ್ದೇಶಕರಾದ ಅಂದಾನಪ್ಪ ಗುಂಡಳ್ಳಿ, ಚುಕ್ಕಿ ಸೂಗಪ್ಪ ಸಾಹುಕಾರ, ಹೆಚ್.ಕುಮಾರೆಪ್ಪ, ಈಶ್ವರಪ್ಪ ನಾಗಲೀಕರ, ಮಲ್ಲನಗೌಡ ಪಾಟೀಲ್, ಅಮರೇಗೌಡ ನಕ್ಕುಂದಿ, ಬಸವರಾಜ ಆರ್.ಮಾನವಿ, ಲಿಂಗರಾಜ ಪಾಟೀಲ್, ಪ್ರಬಾರಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಹುಸೇನಸಾಬ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.