ಕೊರ್ತಕುಂದ: ರಥೋತ್ಸವ ಸಂಭ್ರಮ

ಶಕ್ತಿನಗರ: ರಾಯಚೂರು ತಾಲ್ಲೂಕಿನ ಕೊರ್ತಕುಂದ ಗ್ರಾಮದಲ್ಲಿ ಶನಿವಾರ ರಂಗನಾಥ ಸ್ವಾಮಿ ದೇವರ ರಥೋತ್ಸವ ನಡೆಯಿತು.
ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದು ನೈವೇದ್ಯ, ಕಾಯಿ–ಕ ರ್ಪೂರ ಅರ್ಪಿಸಿದರು. ತಾಲ್ಲೂಕಿನ ಸಗಮಕುಂಟ, ಕೊರ್ತಕುಂದಾ, ಶಿವವಿ ಲಾಸನಗರ, ಯರಗುಂಟ, ಮಾ ಮಡದೊಡ್ಡಿ, ಗಂಜಳ್ಳಿ, ಶಕ್ತಿನಗರ, ಡಿ.ಯದ್ಲಾಪುರ, ದೇವಸೂಗೂರು ಸೇರಿ ಸುತ್ತಲಿನ ಗ್ರಾಮಗಳ ಭಕ್ತರು ರಥಕ್ಕೆ ಬಾಳೆಹಣ್ಣು ಅರ್ಪಿಸಿದರು. ಅದಕ್ಕೂ ಮುನ್ನ ರಂಗನಾಥ ಸ್ವಾಮಿ ರಥದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಉತ್ಸವ ಮೂರ್ತಿಗೆ ಭಕ್ತರು ಪೂಜೆ ಸಲ್ಲಿಸಿದರು. 31ರವರೆಗೆ ಜಾತ್ರಾ ಮಹೋತ್ಸವ ಜರುಗಲಿದೆ. 27ರಂದು ಉತ್ಸವ ಮತ್ತು 28 ರಂದು ಬ್ರಹ್ಮೋತ್ಸವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.