ಗುರುವಾರ , ನವೆಂಬರ್ 14, 2019
19 °C

ಮುದಗಲ್‌: ಆತಂಕ ಹುಟ್ಟಿಸಿದ ಚಿರತೆ

Published:
Updated:

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮದುಗಲ್‌ ಹೋಬಳಿಯ ಆದಾಪುರದಲ್ಲಿ ಎತ್ತಿನ ಮೇಲೆ ಚಿರತೆ ದಾಳಿ ಮಾಡಿದ್ದು, ಕೂಡಲೇ ರೈತರು ಗಮನಿಸಿ ದೊಣ್ಣೆಯಿಂದ ಹೊಡೆದು ಓಡಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.

ಎರಡು ವಾರಗಳಲ್ಲಿ ಮೂರನೇ ಬಾರಿ ಚಿರತೆ ಪ್ರತ್ಯಕ್ಷವಾಗಿದ್ದು, ರೈತರು ನಿರಾತಂಕದಿಂದ ಜಮೀನುಗಳಿಗೆ ಹೋಗಿ ಬರದಂತಾಗಿದೆ. ಚಿರತೆ ಹಿಡಿಯುವುದಕ್ಕಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಬೋನ್‌ ತಂದುಕೊಂಡು ಕಾರ್ಯಾಚರಣೆ ನಡೆಸುತ್ತಿದ್ದರೂ ಸಿಗುತ್ತಿಲ್ಲ.

ಆದಾಪುರ, ಆಮದಿಹಾಳ, ಹೂನೂರು ಹಾಗೂ ಸುತ್ತಲಿನ ಗ್ರಾಮಗಳ ಕಲ್ಲಿನ ಗುಡ್ಡಗಾಡುಗಳಲ್ಲಿ ಚಿರತೆ ತಪ್ಪಿಸಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಮುದಗಲ್‌ ಪಟ್ಟಣದ ಸುತ್ತಮುತ್ತ ಮಾತ್ರ ಹಸಿರು ಗುಡ್ಡಗಾಡು ಪ್ರದೇಶವಿದ್ದು, ಆಗಾಗ ಚಿರತೆಗಳು ಕಾಣಿಸುತ್ತಿವೆ. ಎರಡು ವರ್ಷಗಳ ಹಿಂದೆ, ಮುದಗಲ್‌ ಪಟ್ಟಣದ ಹೊರವಲಯದಲ್ಲಿ ಚಿರತೆಯೊಂದು ಸತ್ತು ಬಿದ್ದಿರುವುದು ಪತ್ತೆಯಾಗಿತ್ತು.

ಪ್ರತಿಕ್ರಿಯಿಸಿ (+)