ಜಾಲಹಳ್ಳಿ: ಪಟ್ಟಣದ ವಾರ್ಡ್ ಸಂಖ್ಯೆ–3 ಮತ್ತು 5ರ ವ್ಯಾಪ್ತಿಯ ಜನರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಕಲ್ಯಾಣ ಕರ್ನಾಟಕ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ತಲಾ ₹15 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳು ಬಂದ್ ಆಗಿವೆ.

ಅಂಬೇಡ್ಕರ್ ವೃತ್ತದ ಪಕ್ಕದ ಗ್ರಂಥಾಲಯದ ಹತ್ತಿರ ಇರುವ ಘಟಕ ಹಾಗೂ ಬಸಲಿಂಗಪ್ಪ ಬಾವಿ ಹತ್ತಿರ ಇರುವ ಘಟಕ ಬಂದ್ ಆಗಿ ವರ್ಷಗಳೇ ಕಳೆದರೂ ದುರಸ್ತಿ ಮಾಡಿಸಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಪಟ್ಟಣದ 6 ಕಡೆ ತಲಾ ₹15 ಲಕ್ಷ ವೆಚ್ಚದಲ್ಲಿ ಘಟಕಗಳನ್ನು ಸ್ಥಾಪಿಸಲಾಗಿದೆ. ಮೂರು ಘಟಕಗಳು ಮಾತ್ರ ಸುಸ್ಥಿತಿಯಲ್ಲಿವೆ. ಅದರೆ, ಒಂದು ಘಟಕದ ಯಂತ್ರಗಳನ್ನು ಕಳವು ಮಾಡಲಾಗಿದೆ. ವರ್ಷಗಳೇ ಕಳೆದರೂ ಇಲ್ಲಿವರೆಗೆ ಪೊಲೀಸರಿಗೆ ದೂರು ಸಹ ನೀಡಿಲ್ಲ.ಅ ಸ್ಥಳದಲ್ಲಿ ಯಂತ್ರಗಳನ್ನು ಸಹ ಮರು ಸ್ಥಾಪನೆ ಮಾಡಿಲ್ಲ. ಅಲ್ಲಿನ ಜನತೆಗೆ ಯಾವುದೇ ವ್ಯವಸ್ಥೆಯನ್ನು ಕೂಡ ಮಾಡಿಲ್ಲ.

ಎಲ್ಲಾ ಘಟಕಗಳನ್ನು ಗ್ರಾ.ಪಂ ನಿರ್ವಹಣೆ ಮಾಡದೇ ಖಾಸಗಿ ವ್ಯಕ್ತಿಗಳಿಗೆ ನಿರ್ವಹಣೆಗೆ ನೀಡಲಾಗಿದೆ. ಅವರು ಪ್ರತಿ ಒಂದು ಕೊಡ ನೀರಿಗೆ ₹10 ವಸೂಲಿ ಮಾಡುತ್ತಾರೆ. ತಕ್ಷಣ ಬಂದ್ ಆದ ಘಟಕಗಳನ್ನು ದುರಸ್ತಿ ಮಾಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.