ಜಾಲಹಳ್ಳಿ: ‘ಪಟ್ಟಣದ ಪ್ರತಿಯೊಂದು ಬೀದಿಯಲ್ಲಿ ಮದ್ಯ ಅಕ್ರಮವಾಗಿ ಮಾರಾಟ ಮಾಡು ತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕು’ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಈರಪ್ಪ ನಾಯಕ ಅರಕೇರಿ ಒತ್ತಾಯಿಸಿದರು.

ಇಲ್ಲಿಯ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅಧ್ಯಕ್ಷೆ ವಿಜಯಲಕ್ಷ್ಮಿ ತೋಟದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಎಲ್ಲಾ ಸದಸ್ಯರು ಒಪ್ಪಿಗೆ ಸೂಚಿಸಿ, ನಿರ್ಣಯ ಕೈಗೊಂಡರು.

‘ಪಟ್ಟಣದಲ್ಲಿ ಏಪ್ರಿಲ್ 2ರಂದು ಲಕ್ಷ್ಮಿ ರಂಗನಾಥ ಸ್ವಾಮಿ ರಥೋತ್ಸವ ಜರುಗಲಿದೆ. ನಂತರ 10 ದಿನಗಳ ಕಾಲ ಜಾನುವಾರು ಜಾತ್ರೆ ನಡೆಯಲಿದೆ. ಗುಳೆ ಹೋಗಿರುವವರೂ ಬರುವುದ ರಿಂದ ವಿವಿಧ ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಸ್ವಚ್ಛತೆ ಕಾಪಾಡಬೇಕು’ ಎಂದು ಕೆಲ ಸದಸ್ಯರು ಸಭೆಯ ಗಮನಕ್ಕೆ ತಂದರು.

ಪಿಡಿಒ ನರಸಪ್ಪ ಮಾತನಾಡಿ,‘15ನೇ ಹಣಕಾಸಿನ ಅನುದಾನ ಬಂದಿಲ್ಲ. ವಸೂಲಿ ಮಾಡಿದ ಕರದಲ್ಲಿಯೇ ಎಲ್ಲಾ ವ್ಯವಸ್ಥೆ ಮಾಡಲು ತೊಂದರೆಯಾಗುತ್ತದೆ’ ಎಂದು ತಿಳಿಸಿದರು.

‘ತಹಶೀಲ್ದಾರ್ ಅವರಿಗೆ ಪತ್ರ ಬರೆದು ಜಾತ್ರೆಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಲು ಮನವಿ ಮಾಡಬೇಕು’ ಎಂದು ನಿರ್ಣಯ ಕೈಗೊಳ್ಳಲಾಯಿತು.

ಬಡಾವಣೆಗಳವರು ಶೇ 100ರಷ್ಟು ನಿಯಮಗಳನ್ನು ಪಾಲಿಸಿದ ನಂತರವೇ ಇ-ಸ್ವತ್ತು ನೀಡಬೇಕು ಎಂದರು.

ಕಾರ್ಯದರ್ಶಿ ಅಯ್ಯಪ್ಪ, ಗ್ರಾ.ಪಂ ಸದಸ್ಯರಾದ ಮಕ್ತೂಮ್ ಪಾರಶಿ, ಅಯ್ಯಪ್ಪ ಸ್ವಾಮಿ, ಅಬ್ದುಲ್ ರಹಿಮಾನ್, ಸೊಲಬಣ್ಣ ಹರಗುಂದಿ, ರಜಿಯಾ ಬೇಗಂ ಉದ್ದಾರ್, ಕುಮಾರ ಚಪ್ಪಳಕಿ, ಶಿವಮಾನ್ಯ ನಾಯಕ ತ್ಯಾಪ್ಲಿ ಹಾಗೂ ಮಲ್ಲಪ್ಪ ಸೌದ್ರಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-32-1177040953

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.