ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾ.3ರಿಂದ ಗೌಡನಭಾವಿಯಲ್ಲಿ ಕಟ್ಟೆ ಬಸವೇಶ್ವರ ಜಾತ್ರಾ ಮಹೋತ್ಸವ

Last Updated 28 ಫೆಬ್ರುವರಿ 2022, 2:56 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಮಸ್ಕಿ: ತಾಲ್ಲೂಕಿನ ಗೌಡನಭಾವಿ ಗ್ರಾಮದಲ್ಲಿ ಕಟ್ಟೆಬಸವೇಶ್ವರ ಜಾತ್ರೆ ಹಾಗೂ ಪಲ್ಲಕ್ಕಿ ಮಹೋತ್ಸವವು ಮಾರ್ಚ್‌ 3 ರಿಂದ 14 ವರೆಗೂ ನಡೆಯಲಿದೆ.

ಪ್ರತಿದಿನ ಸಂಜೆ 7 ರಿಂದ 9 ವರೆಗೂ ಪುರಾಣ ಪ್ರವಚನ. ಮೌನಯೋಗಿ ಉಟಕನೂರ ಬಸವಲಿಂಗ ಶಿವಯೋಗಿಗಳ ಲೀಲಾಮೃತ ಚರಿತ್ರೆಯ ಪುರಾಣ.ಉಟಕನೂರ ಮರಿಬಸವರಾಜ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಹಾಗೂ ಗೌಡನಬಾವಿ ನಾಗಪ್ಪ ತಾತನವರ ಸಾನಿಧ್ಯದಲ್ಲಿ ನೆರವೇರುವುದು.

101 ಜೋಡಿಗಳ ಸಾಮೂಹಿಕ ವಿವಾಹ ನೆರವೇರಲಿದ್ದು, ಮಾರ್ಚ್‌ 10 ರೊಳಗಾಗಿ ಹೆಸರು ನೋಂದಾಯಿಸಬೇಕು. ವಧು 18 ವರ್ಷ ಹಾಗೂ ವರ 21 ವರ್ಷ ಕಡ್ಡಾಯ ಮೀರಿರಬೇಕು. ವಯಸ್ಸು, ವಾಸಸ್ಥಳ ಪ್ರಮಾಣಪತ್ರಗಳು ಹಾಗೂ ನಾಲ್ಕು ಭಾವಚಿತ್ರಗಳನ್ನು ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಮಾರ್ಚ್‌ 13 ರಂದು ಅಹೋರಾತ್ರಿ ಭಜನಾ ಕಾರ್ಯಕ್ರಮ. ಮಾರ್ಚ್‌ 12 ರಿಂದ 15 ರವರೆಗೂ ಪ್ರತಿದಿನ ರಾತ್ರಿ 10.30 ರಿಂದ ’ನರನಾಗರು‘ ಸಾಮಾಜಿಕ ನಾಟಕ ಪ್ರದರ್ಶನ ನಡೆಯುವುದು. ಭಕ್ತರೆಲ್ಲ ಭಾಗವಹಿಸುವಂತೆ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT