ಸಿಂಧನೂರು: ನಗರದ ಟಿಎಪಿಸಿಎಂಎಸ್ ಆವರಣದಲ್ಲಿ ಮಂಗಳವಾರ 4 ಜೋಳ ಖರೀದಿ ಕೇಂದ್ರಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರ್ದೇಶಕ ಉಪ ನಿರ್ದೇಶಕ ನಜೀರ್ ಅಹ್ಮದ್ ವಿದ್ಯುಕ್ತವಾಗಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಜೋಳ ಖರೀದಿ ಕೇಂದ್ರಗಳಲ್ಲಿ ಜೋಳ ಕೊಡಬೇಕೆಂದರೆ ಶೇ 13ರಷ್ಟು ತೇವಾಂಶ ದಾಟಬಾರದು. ಕಸ ಕಡ್ಡಿ ಇದ್ದರೆ ಸ್ವಚ್ಛಗೊಳಿಸಿ ಹಾಕಬೇಕು. ಒಟ್ಟು 36 ಖರೀದಿ ಕೇಂದ್ರಗಳಲ್ಲಿ 130 ಲಾರಿಗಳ ವ್ಯವಸ್ಥೆ ಮಾಡಲಾಗಿದೆ. ಖರೀದಿಯಾದ ಜೋಳ ಸಂಗ್ರಹಿಸಲು 9 ದಾಸ್ತಾನು ಮಳಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ. ನಿಯಮಗಳ ಪ್ರಕಾರ ರೈತರು ಜೋಳವನ್ನು ಖರೀದಿ ಕೇಂದ್ರಗಳಿಗೆ ತರಬೇಕು’ ಎಂದು ಹೇಳಿದರು.

ತಹಶೀಲ್ದಾರ ಅರುಣ್ ದೇಸಾಯಿ ಮಾತನಾಡಿ, ‘ಬ್ಲಾಕ್ ಆದ ಎಫ್.ಐ.ಡಿಯಿಂದ ಜೋಳ ಖರೀದಿ ಮಾಡಿಕೊಳ್ಳಬಾರದು. ಹಾಗೇನಾದರೂ ಮಾಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಟಿಎಪಿಸಿಎಂಎಸ್ ನಿರ್ದೇಶಕ ಪಂಪನಗೌಡ ಬಾದರ್ಲಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ, ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಮಾತನಾಡಿದರು.

ಆಹಾರ ಇಲಾಖೆ ಜಿಲ್ಲಾ ವ್ಯವಸ್ಥಾಪಕ ಬಾನುಪ್ರಕಾಶ, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಪ್ಪ ರಡ್ಡೆರ, ಕಾರ್ಯದರ್ಶಿ ಹನುಮರಡ್ಡಿ, ಪಿಎಸಿಎಸ್ ಅಧ್ಯಕ್ಷ ಅಮರೇಶ, ಕೃಷಿಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹೊನ್ನನಗೌಡ ಬೆಳಗುರ್ಕಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರುದ್ರಗೌಡ, ಎಪಿಎಂಸಿ ಸಹಾಯಕ ಕಾರ್ಯದರ್ಶಿ ನಾಗರತ್ನ, ಆಹಾರ ಇಲಾಖೆ ಶಿರಸ್ತೇದಾರ ಆನಂದ, ಗೊಡಾನ್ ವ್ಯವಸ್ಥಾಪಕ ದೌಲಸಾಬ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.