ಕಕ್ಕೇರಾ: ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ 2026-27ನೇ ಸಾಲಿನ ಬಜೆಟ್ ಮಂಡನೆ ಸಭೆಯಲ್ಲಿ ಪುರಸಭೆ ಅಧ್ಯಕ್ಷ ಪರಮಣ್ಣ ಕಮತಗಿ ಅವರು ₹3.92 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.

ಎಸ್ಸಿ, ಎಸ್ಟಿ ಅಭಿವೃದ್ಧಿ ನಿಧಿಗೆ ₹20 ಲಕ್ಷ ಹಾಗೂ ಅಂಗವಿಕಲ ಅಭಿವೃದ್ಧಿಗೆ ₹5 ಲಕ್ಷ ಮೀಸಲಾಗಿದೆ. ಆಯವ್ಯಯದಲ್ಲಿ ಪಟ್ಟಣದ ಸೌಂದರ್ಯೀಕರಣ, ಕುಡಿಯುವ ನೀರು, ಒಳಚರಂಡಿ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳಿಗೆ ಹಾಗೂ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಿ ಕಾಮಗಾರಿ ಕೈಗೊಳ್ಳಲು ನಿಗದಿ ಮಾಡಿದ್ದು, ಅನುಮೋದನೆಯ ಬಾಕಿ ಇದೆ ಎಂದು ಸಭೆಯಲ್ಲಿ ಹೇಳಿ ಸದಸ್ಯರೊಂದಿಗೆ ಆಯವ್ಯಯದ ಕುರಿತು ಚರ್ಚಿಸಲಾಯಿತು.

ಸದಸ್ಯರಾದ ವೆಂಕಟೇಶನಾಯಕ ಜಹಗೀರದಾರ, ಪರಶುರಾಮ ಗೋವಿಂದರ್ ಮಾತನಾಡಿ,‘ಕಕ್ಕೇರಾ ವ್ಯಾಪ್ತಿಯ ನಿಂಗಾಪೂರ, ಹಿರೇಹಳ್ಳ ಸಮೀಪ ಹಾಗೂ ಪೀರಗಾರದೊಡ್ಡಿ ಹತ್ತಿರ ಎರಡು ವರ್ಷಗಳ ಹಿಂದೆ ನಿರ್ಮಾಣವಾದ ಸ್ವಾಗತ ಕಮಾನುಗಳಿಗೆ ಹೆಸರು ಬರೆಸಲು ಒತ್ತಾಯಿಸಿದಾಗ ಪುಣ್ಯಕ್ಷೇತ್ರ ಸೋಮನಾಥ ದೇವರ ನಾಡಿಗೆ ಸ್ವಾಗತ ಎಂದು ಬರೆಸಲು ಬಜೆಟ್ನಲ್ಲಿ ತೀರ್ಮಾನಿಸಲಾಯಿತು.

ಮಲ್ಲು ದಂಡಿನ್, ನಿಂಗಪ್ಪನಾಯ್ಕ್ ಮಾತನಾಡಿ,‘ನಮ್ಮ ವಾರ್ಡ್ಗಳಲ್ಲಿ ಮಾಡಿದ ಕೆಲಸಗಳಿಗೆ 2 ವರ್ಷವಾದರೂ ಬಿಲ್ ಆಗದೇ ಯಾವುದೇ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ಪುರಸಭೆ ಬದಲು ಗ್ರಾಮ ಪಂಚಾಯಿತಿ ಆಗಿದ್ದರೆ ಎಷ್ಟೋ ಅನುಕೂಲವಾಗುತ್ತಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣಕ್ಕೆ ಮಂಜೂರಾದ ಪೊಲೀಸ್ ಠಾಣೆ ಹಾಗೂ ಡಿಗ್ರಿ ಕಾಲೇಜು ನಿರ್ಮಾಣಕ್ಕೆ ಜಾಗ, ಅಂಚೆ ಕಚೇರಿಗೆ ನಿವೇಶನ ಮತ್ತು ಪಟ್ಟಣದ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಸಾಮಾನ್ಯ ಸಭೆಗೆ ಶಾಸಕರು ಹಾಗೂ ಸಂಸದರನ್ನು ಕರೆಸಲು ಸದಸ್ಯರು ಮುಖ್ಯಾಧಿಕಾರಿಗೆ ಆಗ್ರಹಿಸಿದರು.

ಈ ವೇಳೆ ಉಪಾಧ್ಯಕ್ಷ ಜೆಟ್ಟೆಪ್ಪ ದಳಾರ, ಮುಖ್ಯಾಧಿಕಾರಿ ವೆಂಕಟೇಶ ತೇಲಂಗ್, ಪುರಸಭೆ ಸದಸ್ಯರು, ನಾಮನಿರ್ದೇಶಿತ ಸದಸ್ಯರು ಸೇರಿದಂತೆ ಪುರಸಭೆ ಸಿಬ್ಬಂದಿಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-30-252731497

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.