‘ಅನ್ಯ ಭಾಷೆ ವ್ಯಾಮೋಹ ಬಿಡಿ’

ಹಟ್ಟಿಚಿನ್ನದಗಣಿ: ‘ಕನ್ನಡಿಗರು ಅನ್ಯ ಭಾಷೆ ವ್ಯಾಮೋಹ ಬಿಟ್ಟು ಕನ್ನಡ ಭಾಷೆಯನ್ನು ಬೆಳೆಸಬೇಕು’ ಎಂದು ಹಟ್ಟಿ ಪಟ್ಟಣದ ಹಿರಿಯ ಮುಖಂಡ ಗುಂಡಪ್ಪಗೌಡ ಪೊಲೀಸ್ ಪಾಟೀಲ ಸಲಹೆ ನೀಡಿದರು.
ಹಟ್ಟಿ ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಕರುನಾಡ ವಿಜಯಸೇನೆ, ಕರವೇ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಮಾತನಾಡಿದರು.
ಮಾತೃಭಾಷೆ, ನಾಡು ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಯುವಕರ ಕೈಯಲ್ಲಿದೆ. ಸರ್ಕಾರ ಕೇಂದ್ರ ಸರ್ಕಾರದ ಹುದ್ದೆಗಳಿಗೆ ನೇಮಕ ಮಾಡುವಾಗ ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಕನ್ನಡ ಭಾಷೆ ಉಳಿಯಬೇಕಾದರೆ, ಸಂಘಟನೆಗಳು ಬಲಗೊಳ್ಳಬೇಕಿದೆ ಎಂದರು.
ಕರುನಾಡ ವಿಜಯಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಸಿ.ಚಂದ್ರಶೇಖರ ನಾಯಕ, ನರಸಪ್ಪ ಯಾದವ ಹಾಗೂ ಹನುಮಂತರೆಡ್ಡಿ ಮಾತನಾಡಿದರು.
ಹಟ್ಟಿ ಠಾಣೆಯ ಪಿಎಸ್ಐ ರಾಮಲಿಂಗಪ್ಪ, ಕೆ.ವಿ. ಕಳ್ಳಿಮಠ, ಮೌನೇಶ ಕಾಕಾಮಗರ, ಬುಜ್ಜನಾಯಕ, ಮಾಸ್ಟರ್ ಗುಂಡಪ್ಪಗೌಡ ಗುರಿಕಾರ, ವೈದ್ಯರಾದ ಲಕ್ಷ್ಮಿಕಾಂತ, ಮಹೇಂದ್ರ, ಶೇಖ್ ಹುಸೇನ್ ಸೌದಾಗಾರ್, ಪಿಡಿಒ ಬಸವಾರಾಜ, ಶ್ರೀನಿವಾಸ, ಕರುನಾಡ ವಿಜಯಸೇನೆ ಹಟ್ಟಿ ಘಟಕದ ಅಧ್ಯಕ್ಷ ಸಿದ್ದು ಮುದುಗಲ್ ಸೇರಿದಂತೆ ಇತರರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.