ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರದ ವಿರುದ್ಧ ತೆಲಂಗಾಣ ರೈತರ ಪ್ರತಿಭಟನೆಗೆ ಕರ್ನಾಟಕ ಪೊಲೀಸರ ತಡೆ

Last Updated 24 ಜೂನ್ 2021, 8:46 IST
ಅಕ್ಷರ ಗಾತ್ರ

ರಾಯಚೂರು: ತುಂಗಭದ್ರಾ ನದಿಗೆ ಮಾನ್ವಿ ತಾಲ್ಲೂಕು ರಾಜಲಬಂಡ ತಿರುವು ನಾಲಾ ಯೋಜನೆ ಬಳಿ ಆಂಧ್ರಪ್ರದೇಶ ಸರ್ಕಾರವು ನಿರ್ಮಿಸುತ್ತಿರುವ ಕಾಲುವೆ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುವುದಕ್ಕಾಗಿ ಬರುತ್ತಿದ್ದ ತೆಲಂಗಾಣ ರಾಜ್ಯದ ರೈತರನ್ನು ಕರ್ನಾಟಕ ಪೊಲೀಸರು ಗಡಿಗ್ರಾಮ ಕೊತ್ತದೊಡ್ಡಿಯಲ್ಲಿ ಬುಧವಾರ ತಡೆದರು.

ರಾಜಲಬಂಡ ತಿರುವು ನಾಲಾದ ನೀರು ಮೂರು ರಾಜ್ಯಗಳಿಗೂ ಹಂಚಿಕೆಯಾಗಿದೆ. ನದಿಯ ಆಚೆಗೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಗೆ ಇದುವರೆಗೂ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಪಡೆಯುತ್ತಿದ್ದರು. ಈಗ ಕಾಲುವೆ ನಿರ್ಮಾಣಕ್ಕೆ ಮುಂದಾಗಿರುವುದು ನದಿಯ ಈ ಭಾಗದಲ್ಲಿ ನೀರು ಪಡೆಯುತ್ತಿರುವ ತೆಲಂಗಾಣದ ರೈತರನ್ನು ಕೆರಳಿಸಿದೆ. ಆದರೆ ಕರ್ನಾಟಕದಿಂದ ಯಾವುದೇ ಪ್ರತಿರೋಧ ವ್ಯಕ್ತವಾಗಿಲ್ಲ.

ಮಾನ್ವಿ ತಾಲ್ಲೂಕಿನ ರಾಜಲಬಂಡ ಬಳಿಯಿಂದ ತೆಲಂಗಾಣದ ಮೆಹಬೂಬ್ ನಗರ ಮತ್ತು ಗದ್ವಾಲ್ ಜಿಲ್ಲೆಗಳಿಗೆ ಕಾಲುವೆ ಮೂಲಕ ನೀರು ಹರಿಯುತ್ತದೆ. ಇದಕ್ಕೆ ಹೊಂದಿಕೊಂಡು ಇನ್ನೊಂದು ಕಾಲುವೆ ಇದ್ದು, ರಾಯಚೂರು ತಾಲ್ಲೂಕಿನ ಗಿಲ್ಲೇಸುಗೂರು ಹಾಗೂ ಯರಗೇರಾ ಹೋಬಳಿಯ ಕೆಲವು ಭಾಗಕ್ಕೆ ನೀರು ಹರಿಯುತ್ತದೆ.

ತೆಲಂಗಾಣ ರೈತರು ಮತ್ತು ಕರ್ನಾಟಕ ಪೊಲೀಸರ ನಡುವೆ ಮಾತುಕತೆ
ತೆಲಂಗಾಣ ರೈತರು ಮತ್ತು ಕರ್ನಾಟಕ ಪೊಲೀಸರ ನಡುವೆ ಮಾತುಕತೆ

ಅಖಂಡ ಆಂಧ್ರಪ್ರದೇಶ ಮತ್ತು ಕರ್ನಾಟಕ ಜಂಟಿಯಾಗಿ ನಿರ್ಮಿಸಿರುವ ತಿರುವು ನಾಲಾ ಯೋಜನೆಯಲ್ಲಿ ಶೇ40 ರಷ್ಟು ಕರ್ನಾಟಕದ ಪಾಲಿದೆ. ಇನ್ನುಳಿದ ಪಾಲಿನಲ್ಲಿ ಆ ಎರಡೂ ರಾಜ್ಯಗಳಿಗೆ ನೀರು ಹಂಚಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT