ಗುರುವಾರ , ನವೆಂಬರ್ 21, 2019
20 °C

ರಾಯಚೂರು: ಕರ್ನಾಟಕ-ಒನ್ ಕೇಂದ್ರ ಉದ್ಘಾಟಿಸಿದ ಶ್ರೀರಾಮುಲು

Published:
Updated:
Prajavani

ರಾಯಚೂರು: ಎಲ್ಲಾ ನಾಗರಿಕ ಸೇವೆಗಳನ್ನು ಒಂದೇ ಸೂರಿನಡಿ ನೀಡುವುದೇ ಕರ್ನಾಟಕ ಒನ್ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, ಸಾರ್ವಜನಿಕರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು.

ನಗರದ ಹಳೇ ತಹಶಿಲ್ದಾರ್ ಕಚೇರಿಯ ಜಿಲ್ಲಾ ಜನಸೇವಾ ಸ್ಪಂದನಾ ಕೇಂದ್ರದಲ್ಲಿ ‘ಕರ್ನಾಟಕ-ಒನ್’ ನೂತನ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಒನ್ ಕೇಂದ್ರಗಳಲ್ಲಿ ನೀಡುವ ಸೇವೆಗಳಿಗೆ ಯಾವುದೇ ರೀತಿಯ ಸರಹದ್ದಿನ ನಿರ್ಬಂಧನೆ ಇರುವುದಿಲ್ಲ. ರಾಯಚೂರು ನಗರದ ಎಲ್ಲಾ ನಾಗರೀಕರು ಈ ಕೇಂದ್ರದ ಮೂಲಕ ಸೇವೆಗಳನ್ನು ಪಡೆಯಬಹುದಾಗಿದೆ ಎಂದರು.

ಈ ಕೇಂದ್ರದಲ್ಲಿ ವಿದ್ಯುತ್, ಬಿಎಸ್‌ಎನ್‌ಎಲ್, ಸೆಲ್‌ಒನ್, ಪೊಲೀಸ್ ಇಲಾಖೆ, ಪಿಯುಸಿ, ಬೆಂಗಳೂರು ವಿಶ್ವವಿದ್ಯಾಲಯ, ಪಾಸ್ ಪೋರ್ಟ್, ಸಾರಿಗೆ ಇಲಾಖೆ, ಆಧಾರ್, ವಿವಿಧ ಸರ್ಕಾರಿ ಇಲಾಖೆಗಳು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಎಸ್‌ಎಸ್‌ಎಲ್‌ಸಿ, ಇಇಎಸ್‌ಎಲ್, ಕಂದಾಯ ಇಲಾಖೆ(ನಾಡಕಚೇರಿ) ಮತ್ತು ಆರೋಗ್ಯ ಇಲಾಖೆಗಳ ವಿವಿಧ ಸೇವೆಗಳನ್ನು ಈ ಕೇಂದ್ರದಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.

ಶಾಸಕ ಡಾ.ಎಸ್. ಶಿವರಾಜ್ ಪಾಟೀಲ, ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಮತ್ತು ಕರ್ನಾಟಕ ಒನ್ ಕೇಂದ್ರದ ಅಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)