ರಾಯಚೂರು: ‘ಸಾರ್ವಜನಿಕರ ಆಸ್ತಿ ರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆಯಲ್ಲಿ ಪೊಲೀಸರು ವಿಶ್ರಾಂತಿ ಇಲ್ಲದಂತೆ ತೊಡಗಿಸಿಕೊಂಡಿದ್ದಾರೆ. ಇದರಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗಿದೆ‘ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಹೇಳಿದರು.

ಪೊಲೀಸ್ ಇಲಾಖೆಯ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೊಲೀಸ್ ಧ್ವಜ ದಿನ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ದಿನವನ್ನು ಏಪ್ರಿಲ್ 2 ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಆಚರಿಸಲಾಗುತ್ತಿದೆ‘ ಎಂದು ತಿಳಿಸಿದರು.

‘2025-26ನೇ ಸಾಲಿನ ಸಾಲಿನಲ್ಲಿ ಆರೋಗ್ಯ ಭಾಗ್ಯ ಯೋಜನೆಡಿಯಲ್ಲಿ ಒಟ್ಟು 227 ಜನ ನಿವೃತ್ತ ಪೊಲೀಸ್ ಸಿಬ್ಬಂದಿ ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ ನಿವೃತ್ತ ಪೊಲೀಸ್ ಅಧಿಕಾರಿಗಳ ನಿಧಿಯಿಂದ 82 ಜನ ನಿವೃತ್ತ ಸಿಬ್ಬಂದಿಯ ವೈದ್ಯಕೀಯ ಚಿಕಿತ್ಸೆಗಾಗಿ ಒಟ್ಟು ₹9,13,812 ಪಾವತಿಸಲಾಗಿದೆ’ ಎಂದರು.

‘ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ನಿವೃತ್ತ ಪೊಲೀಸ್ ಅಧಿಕಾರಿಗಳ ನಿಧಿಯಿಂದ 15 ಜನ ನಿವೃತ ಪೊಲೀಸ್ ಸಿಬ್ಬಂದಿಗೆ ಶವ ಸಂಸ್ಕಾರಕ್ಕಾಗಿ ಒಟ್ಟು ₹1,50 ಲಕ್ಷ ಪಾವತಿಸಲಾಗಿದೆ.

ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ 955 ಜನರು ಪ್ರಯೋಜನ ಪಡೆದುಕೊಂಡಿದ್ದಾರೆ’ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯ ಅಂಗವಾಗಿ ಒಂದು ನಿಧಿ ಸ್ಥಾಪಿಸಲಾಗಿದೆ ಈ ನಿಧಿಗಾಗಿ ಪೊಲೀಸ್ ಧ್ವಜಗಳನ್ನು ಮಾರಾಟ ಮಾಡಿ ಹಣ ಸಂಗ್ರಹಿಸಲಾಗುವುದು. ಈ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿಗಳ ಹಾಗೂ ಕರ್ತವ್ಯದಲ್ಲಿರುವ ಸಿಬ್ಬಂದಿ ಕಲ್ಯಾಣ ಕಾರ್ಯಕ್ರಮಗಳಿಗೆ ಉಪಯೋಗಿಸಲಾಗುತ್ತಿದ್ದು, ಎಲ್ಲರೂ ಈ ನಿಧಿಗೆ ಸಹಾಯ ಧನವನ್ನು ನೀಡಿ ಕಲ್ಯಾಣ ಕಾರ್ಯಕ್ರಮಗಳಿಗೆ ಸಹಕರಿಸಬೇಕು‘ ಎಂದು ಮನವಿ ಮಾಡಿದರು.

ಮುಖ್ಯ ಅತಿಥಿಯಾಗಿದ್ದ ನಿವೃತ್ತ ಪಿಎಸ್ಐ ಬಸವರಾಜ ಮಾತನಾಡಿ, ‘ ಧ್ವಜವು ಶಿಸ್ತು, ಕರ್ತವ್ಯ ನಿಷ್ಠೆ, ಕಾನೂನು ಪಾಲನೆ, ರಕ್ಷಣೆಯ ಸಂಕೇತವಾಗಿದೆ‘ ಎಂದು ಬಣ್ಣಿಸಿದರು.

‘1965ರ ಏಪ್ರಿಲ್ 2ರಂದು ಕರ್ನಾಟಕದಲ್ಲಿ ಪೋಲೀಸ್ ಪಡೆ ಅಧಿಕೃತವಾಗಿ ರಚೆನಯಾದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತಿದೆ. ಸಾರ್ವಜನಿಕರು ಮತ್ತು ಪೋಲೀಸರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಸಹ ಅಗತ್ಯವಾಗಿದೆ‘ ಎಂದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಜಿ.ಹರೀಶ, ಡಿವೈಎಸ್ಪಿ ಪ್ರಮಾನಂದ ಘೋಡಕೆ, ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್, ಸಿಪಿಐ ಸಾಬಯ್ಯ, ಸೋಮಶೇಖರ, ಹನುಮಂತ ನಾಯಕ, ಮಹಾದೇವ ಪಂಚಮುಖಿ, ಬಸವರಾಜ ತೇರಿ, ಈರೇಶ ನಾಯಕ, ಬಸಪ್ಪ ಬಿಳಿಗೇರಿ, ಅಮರೇಶ ಜಗರಕಲ್, ರಂಗನಾಥ ಕೋಟೆ, ಪಿಎಎಸ್ಐಗಳಾದ ತಿಮ್ಮಣ್ಣ ನಾಯಕ, ಹುಲಿಗೇಶ, ಸಣ್ಣವೀರೇಶ, ಸಿದ್ದಪ್ಪ, ಮಹಮ್ಮದ್ ಇಸಾಕ್, ಉದಯ ಕುಮಾರ, ಬಾಹುಬಲಿ, ಶ್ರೀಕಾಂತ, ಬೀರಣ್ಣ, ನಾರಾಯಣ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಪೊಲೀಸ ತುಕಡಿಗಳಿಂದ ಫಥ ಸಂಚಲನ ನಡೆಯಿತು. ಯಂಕಪ್ಪ ನೇತೃತ್ವದ ತಂಡ ಪೊಲೀಸ್ ಬ್ಯಾಂಡ್ ನುಡಿಸಿತು. ಮಲ್ಲಿಕಾರ್ಜುನ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.