ಮಂಜುನಾಥ ಎನ್ ಬಳ್ಳಾರಿ

ಕವಿತಾಳ: ಬೇಸಿಗೆ ಬಿಸಿಲಿನ ತಾಪಕ್ಕೆ ಹನಿ ನೀರಿಗಾಗಿ ಪರಿತಪಿಸುವ ಪಕ್ಷಿಗಳ ದಾಹ ತಣಿಸಲು ಮರದ ಕೊಂಬೆಗಳಿಗೆ ನೀರು ತುಂಬಿದ ಬಾಟಲಿಗಳನ್ನು ಕಟ್ಟಿದ ವಿದ್ಯಾರ್ಥಿಗಳ ಕಾಳಜಿ ಇದೀಗ ಸಾರ್ವಜನಿಕರ ಗಮನ ಸೆಳೆದಿದೆ.

ಸಮೀಪದ ಮಲ್ಲದಗುಡ್ಡ ಗ್ರಾಮದ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಆರುಷಿ, ಉದಯಕುಮಾರ ಮತ್ತು 5ನೇ ತರಗತಿಯ ಅಭಿಷೇಕ ಪಕ್ಷಿಗಳಿಗೆ ನೀರುಣಿಸಲು ಕಾಳಜಿ ವಹಿಸಿದ್ದಾರೆ.

ಕುಡಿದು ಬಿಸಾಡಿದ ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಗಳು ಮತ್ತು ಗಾರೆ ಕೆಲಸ ನಡೆದ ಜಾಗದಲ್ಲಿ ಬಿದ್ದ ನಿರುಪಯುಕ್ತ ಕಬ್ಬಿಣದ ತಂತಿಯನ್ನು ತಂದು, ಅವುಗಳನ್ನು ಬಳಸಿ ರಸ್ತೆ ಬದಿ ಸಾರ್ವಜನಿಕ ಸ್ಥಳಗಳಲ್ಲಿನ ಮರದ ಕೊಂಬೆಗಳಿಗೆ ನೀರು ತುಂಬಿದ ಬಾಟಲಿಗಳನ್ನು ಕಟ್ಟುವ ಮೂಲಕ ಹಕ್ಕಿಗಳ ದಾಹ ತಣಿಸುವ ಸಾಹಸ ಮಾಡಿದ್ದಾರೆ.

ಪ್ಲಾಸ್ಟಿಕ್ ಬಾಟಲಿಗಳನ್ನು ಅರ್ಧ ಭಾಗಕ್ಕೆ ತುಂಡರಸಿ ಅವುಗಳ ತಳ ಭಾಗದಲ್ಲಿ ತಂತಿ ಬಿಗಿದು ಜೋಕಾಲಿ ರೀತಿ ನೀರು ತುಂಬಿದ ಬಾಟಲಿಗಳನ್ನು ಅದರಲ್ಲಿಟ್ಟು ಮರದ ಕೊಂಬೆಗಳಿಗೆ ಕಟ್ಟುತ್ತಿದ್ದಾರೆ. ಮರಗಳ ಮೇಲೆ ಹತ್ತಿ ಎತ್ತರದ ಕೊಂಬೆಗಳಿಗೆ ಕಟ್ಟುವುದರಿಂದ ಸಾರ್ವಜನಿಕರು ಓಡಾಡುತ್ತಿದ್ದರೂ ಪಕ್ಷಿಗಳು ನೀರು ಕುಡಿಯುತ್ತವೆ ಎನ್ನುವ ಈ ಮಕ್ಕಳು, ಅದೊಂದು ಆಟದ ರೀತಿಯಲ್ಲಿ ಪಕ್ಷಿಗಳಿಗೆ ನೀರುಣಿಸಿ ಸಂತಸ ಪಡುತ್ತಿದ್ದಾರೆ.

‘ಬೇಸಿಗೆ ಅವಧಿಯಲ್ಲಿ ಶಾಲೆಗಳಿಗೆ ರಜೆ ನೀಡಿದ ಹಿನ್ನೆಲೆಯಲ್ಲಿ ಕೆಲ ಮಕ್ಕಳು ಬೇಸಿಗೆ ಶಿಬಿರಕ್ಕೆ ಹೋಗುವುದನ್ನು ಮತ್ತು ಬಹುತೇಕ ಮಕ್ಕಳು ಕ್ರಿಕೆಟ್ ಆಟದಲ್ಲಿ ತೊಡಗಿರುವುದನ್ನು ನಾವು ಕಾಣುತ್ತೇವೆ. ಆದರೆ, ಮಲ್ಲದಗುಡ್ಡ ಗ್ರಾಮದಲ್ಲಿ ಮೂವರು ವಿದ್ಯಾರ್ಥಿಗಳು ಪಕ್ಷಿಗಳ ನೀರಿನ ದಾಹ ತಣಿಸಲು ರಣ ಬಿಸಿಲೂ ಲೆಕ್ಕಿಸದೇ ಸ್ವಯಂ ಪ್ರೇರಣೆಯಿಂದ ತಮ್ಮನ್ನು ತೊಡಗಿಸಿಕೊಂಡಿರುವುದು ಮಾದರಿಯಾಗಿದೆ ಎಂದು ಬಾಲಸ್ವಾಸ್ಥ್ಯ ಯೋಜನೆ ವೈದ್ಯಾಧಿಕಾರಿ ಡಾ.ಶ್ರೀಧರ ಇಲ್ಲೂರು ತಿಳಿಸಿದರು.

‘ಮನೆ ಮುಂದಿನ ಆವರಣದಲ್ಲಿ ನೀರು ತುಂಬಿದ ಪಾತ್ರೆಗಳನ್ನಿಟ್ಟಿದ್ದು ಪಕ್ಷಿಗಳು ಅಲ್ಲಿಗೆ ಬಂದು ನೀರು ಕುಡಿಯವುದನ್ನು ಕಂಡಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ ಮರದ ಮೇಲೆ ಕೂಡುವ ಪಕ್ಷಿಗಳಿಗೆ ನೀರುಣಿಸಬೇಕು ಎನ್ನುವ ಉದ್ದೇಶದಿಂದ ಈ ರೀತಿ ನಿರುಪಯುಕ್ತ ಬಾಟಲಿಗಳನ್ನು ತಂದು ನೀರಿನ ವ್ಯವಸ್ಥೆ ಮಾಡುತ್ತಿದ್ದೇವೆ. ಈ ಬಗ್ಗೆ ಪಾಲಕರು ಸೇರಿದಂತೆ ಯಾರೂ ತಮಗೆ ಹೇಳಿ ಕೊಟ್ಟಿಲ್ಲ’ ಎಂದು ಮಕ್ಕಳು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-32-100433729

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.