ಕವಿತಾಳ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಮೂಲಕ ಬಡತನ ಮತ್ತು ಅಂಗವಿಕಲತೆ ಸಾಧನೆಗೆ ಅಡ್ಡಿಯಾಗದು ಎನ್ನುವುದನ್ನು ನಿರೂಪಿಸಿದ್ದಾರೆ.

ಕಲಾ ವಿಭಾಗದಲ್ಲಿ ಶೇ 96 ಅಂಕ ಪಡೆದು ಅಂಧ ವಿದ್ಯಾರ್ಥಿಗಳ ಪೈಕಿ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಸಂಜನಾ ಅವರಿಗೆ ಎರಡು ಕಣ್ಣು ಕಾಣಿಸುವುದಿಲ್ಲ. ಕಾಣದ ಕಣ್ಣುಗಳಿಗಿಂತ ಕೇಳಿಸಿಕೊಳ್ಳುವ ಮನಸ್ಸು ಶಕ್ತಿಶಾಲಿ ಎನ್ನುವುದನ್ನು ಸಂಜನಾ ಸಾಬೀತು ಪಡಿಸಿದ್ದಾರೆ. ಕಣ್ಣು ಕಾಣದಿದ್ದರೂ ಕಲಿಕೆಯಲ್ಲಿ ಯಾವತ್ತೂ ಹಿಂದೆ ಬೀಳದ ಸಂಜನಾ ಅಂಧತ್ವ ಎನ್ನುವುದು ದೌರ್ಬಲ್ಯವಲ್ಲ ಸಾಧನೆಯ ಹಾದಿಯಲ್ಲಿ ಒಂದು ಸಣ್ಣ ಕಲ್ಲು ಎಂದು ತೋರಿಸಿಕೊಟ್ಟಿದ್ದು ಪದವಿ ಪೂರೈಸಿ ಕೆಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದಾರೆ.

‘ಕಣ್ಣು ಕಾಣಿಸದಿದ್ದರೂ ಅವಳು ಸದಾ ಸ್ವಾವಲಂಬಿ. ಪಾಮನಕಲ್ಲೂರು ಗ್ರಾಮದಿಂದ ನಿತ್ಯ ಆಕೆಯ ಸ್ನೇಹಿತೆಯ ಜೊತೆಗೆ ಕವಿತಾಳದ ಕಾಲೇಜಿಗೆ ತೆರಳಿ ಅಭ್ಯಾಸ ಮಾಡಿದ್ದಾಳೆ. ಅವಳ ಕಠಿಣ ಪರಿಶ್ರಮದ ಫಲವಾಗಿ ಶೇ 96 ಅಂಕ ಗಳಿಸಿದ್ದಾಳೆ’ ಎಂದು ಸಂಜನಾ ತಂದೆ ಮರಿಸ್ವಾಮಿ ಹೇಳಿದರು.

ವಾಣಿಜ್ಯ ವಿಭಾಗದಲ್ಲಿ ಶೇ 94.84 ಅಂಕ ಪಡೆದ ಅಫ್ಸಾನಾ ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ನತದೃಷ್ಟೆ. ಕೈಯಲ್ಲಿ ಪುಸ್ತಕ ಹಿಡಿಯುವ ವಿದ್ಯಾರ್ಥಿ ದೆಸೆಯಲ್ಲಿ ಹೂವಿನ ಹಾರಗಳನ್ನು ಕಟ್ಟುತ್ತಾ ಡಬ್ಬಾ ಅಂಗಡಿಯಲ್ಲಿ ತಾಯಿಯ ಬೆವರ ಹನಿಗಳಿಗೆ ಹೆಗಲಾದ ಅಪ್ಪಟ ಶ್ರಮಜೀವಿ. ಸ್ವತಃ ಹೂವಿನ ಹಾರಗಳನ್ನು ಕಟ್ಟಿ ಅದರಿಂದ ಬಂದ ಆದಾಯದಲ್ಲಿ ಕಾಲೇಜು ಶುಲ್ಕ ಪಾವತಿಸಿದ ಅಫ್ಸಾನಾ ಇದೀಗ ಚಾರ್ಟೆರ್ಡ್ ಅಕೌಂಟೆಂಟ್ (ಸಿಎ) ಆಗುವ ಕನಸು ಹೊತ್ತಿದ್ದಾರೆ.

‘ಹೂವಿನ ಹಾರ ಕಟ್ಟುವುದು ಮತ್ತು ಡಬ್ಬಾ ಅಂಗಡಿ ವ್ಯವಹಾರ ಸೇರಿ ನಿತ್ಯ ₹ 300 ಆದಾಯದಲ್ಲಿ ಕುಟುಂಬ ನಿರ್ವಹಣೆ ಮತ್ತು ಇಬ್ಬರು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಕಷ್ಟವಾಗುತ್ತಿದೆ. ಯಾರಾದರೂ ನೆರವು ನೀಡಿದರೆ ಸಹಾಯವಾಗುತ್ತದೆ’ ಎಂದು ಅಫ್ಸಾನಾ ತಾಯಿ ಮಹಿಬೂಬಬಿ ತಿಳಿಸಿದರು.

ಇಬ್ಬರೂ ವಿದ್ಯಾರ್ಥಿಗಳು ನಿರಂತರ ಅಧ್ಯಯನದಿಂದ ಉತ್ತಮ ಅಂಕ ಗಳಿಸಿದ್ದಾರೆ ಬಡತನ ಮತ್ತು ದೈಹಿಕ ಅಂಗವಿಕಲತೆ ಮೆಟ್ಟಿ ನಿಂತು ಮಾದರಿಯಾಗಿದ್ದಾರೆ
ಮಹಾಂತಮ್ಮ, ಉಪನ್ಯಾಸಕಿ ಸರ್ಕಾರಿ ಪಿಯು ಕಾಲೇಜು ಕವಿತಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.