ಕವಿತಾಳ: ಪಟ್ಟಣದ 12ನೇ ಶತಮಾನದ ಪ್ರಾಚೀನ ತ್ರಯಂಭಕೇಶ್ವರ ದೇವಸ್ಥಾನ ಹಲವು ವೈಶಿಷ್ಟಗಳಿಂದ ಕೂಡಿದೆ. ಪ್ರತಿ ವರ್ಷ ಯುಗಾದಿ ಹಬ್ಬದಂದು ಸೂರ್ಯ ರಶ್ಮಿ ನೇರವಾಗಿ ಗರ್ಭಗುಡಿ ಪ್ರವೇಶಿಸುತ್ತದೆ.

ಈ ಕೌತುಕ ನೋಡಲು ಸೂರ್ಯೋದಯಕ್ಕೂ ಮುಂಚೆ ದೇವಸ್ಥಾನಕ್ಕೆ ಆಗಮಿಸುವ ಭಕ್ತರು, ಪೂಜೆ ಸಲ್ಲಿಸುವುದು ವಾಡಿಕೆ. ಹೊಸ ವರ್ಷದ ದಿನ ಸೂರ್ಯ ರಶ್ಮಿ ತ್ರಯಂಭಕ ಮೂರ್ತಿ ಸ್ಪರ್ಷಿಸುವುದನ್ನು ನೋಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ವರ್ಷಪೂರ್ತಿ ಒಳ್ಳೆಯದಾಗಲಿ ಎಂದು ಭಕ್ತರು ಸಂಕಲ್ಪ ಮಾಡುತ್ತಾರೆ.

ತ್ರಯಂಭಕೇಶ್ವರ ದೇವಸ್ಥಾನ 800 ವರ್ಷಗಳ ಇತಿಹಾಸ ಹೊಂದಿದೆ. ಇಡೀ ಭರತ ಖಂಡದಲ್ಲಿ ಒಂದೇ ಪಾಣಿ ಬಟ್ಟಲಿನಲ್ಲಿ ಮೂರು ಲಿಂಗಗಳಿರುವ ದೇವಸ್ಥಾನಗಳು ಕೇವಲ ಎರಡು ಇದ್ದು, ಒಂದು ಮಹಾರಾಷ್ಟ್ರದ ನಾಸಿಕ್, ಇನ್ನೊಂದು ಕವಿತಾಳದಲ್ಲಿ ಎನ್ನುತ್ತವೆ ಇತಿಹಾಸದ ಪುಟಗಳು.

ಕಳಿಂಗ ಮಾದರಿಯ ಕೂಡು ವಿಧಾನದಲ್ಲಿ ನಿರ್ಮಾಣವಾದ ದೇವಸ್ಥಾನದಲ್ಲಿ ಕ್ರಿಸ್ತಶಕ 1217ರಲ್ಲಿ ತ್ರಯಂಬಕೇಶ್ವರ ಮೂರ್ತಿ ಪ್ರತಿಷ್ಠಾಪನೆಯಾದ ಬಗ್ಗೆ ಶಾಸನಗಳಲ್ಲಿ ಉಲ್ಲೇಖವಿದೆ. ಸೇವಣನೆಂಬ ಅರಸನ ಆಡಳಿತಕ್ಕೆ ಒಳಪಟ್ಟ ಈ ಪ್ರದೇಶದಲ್ಲಿ ಶಂಕರ ರಾಶಿ ಪಂಡಿತ ಎನ್ನುವರು ಸ್ಥಾನಚಾರ್ಯರಾಗಿದ್ದರು. ಆಗ ಊರಿಗೆ ಸೂರ್ಯಗ್ರಹಣ ದೋಷ ಉಂಟಾಯಿತೆಂದು, ಅದರ ನಿವಾರಣೆಗಾಗಿ ಪ್ರತಿಯೊಬ್ಬರಿಂದ ಒಂದೊಂದು ಗದ್ಯಾಣವನ್ನು ಸಂಗ್ರಹಿಸಿ ದೇವಸ್ಥಾನ ನಿರ್ಮಿಸಲಾಗಿದೆ ಎನ್ನುವ ಮಾಹಿತಿ ಇದೆ.

ನೂರು ಶೆಟ್ಟಿ ಗುತ್ತರು ಎನ್ನುವ ಮನೆತನದ ರಾಚಶೆಟ್ಟಿ ಹಾಗೂ ಭಾಚಶೆಟ್ಟಿ ಸಹೋದರರು ಮಂದಿರದ ನಂದಾ ದೀವಿಗೆ ಸಲುವಾಗಿ ಗಾಣವನ್ನು ದತ್ತಿ ಕೊಟ್ಟಿದ್ದಾರೆ ಮತ್ತು ಹೂವು ತೋಟಕ್ಕಾಗಿ ಭೂಮಿಯನ್ನು ದಾನ ನೀಡಿದ ಬಗ್ಗೆ ಶಾಸನಗಳಿಂದ ತಿಳಿಯುತ್ತದೆ.

ಕರುನಾಮ ಸಂವತ್ಸರದಿಂದ ಜಾತ್ರೆ ನಡೆಯುತ್ತದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ. ಯುಗಾದಿ ಪಾಡ್ಯದಿಂದ 9 ದಿನಗಳಿಗೆ ರಾಮನವಮಿಯಂದು ಜಾತ್ರೆ ನಡೆಯುತ್ತದೆ. ಎಲ್ಲಾ ಜಾತಿ–ಜನಾಂಗದವರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಪಟ್ಟಣ ಸೇರಿ ಸುತ್ತಲಿನ ಹಳ್ಳಿಗಳ ಜನ ಜಾತ್ರೆಗೆ ಆಗಮಿಸುತ್ತಾರೆ. ‘ಶಿವರಾತ್ರಿ ಮತ್ತು ಯುಗಾದಿ ಹಬ್ಬದಂದು ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಕುಂಕುಮಾರ್ಚನೆ ಮಹಾಮಂಗಳತಿ ಸೇರಿ ವಿಶೇಷ ಪೂಜೆಗಳನ್ನು ನೆರವೇರಿಸಲಾಗುವುದು’ ಎಂದು ಅರ್ಚಕ ಸಿದ್ದಯ್ಯಸ್ವಾಮಿ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260319-32-520732223

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.