ಕವಿತಾಳ: ‘ಯೂರಿಯಾ, ಡಿಎಪಿ ರಸಗೊಬ್ಬರ ಮಾರಾಟ ಮಾಡದಂತೆ ರಸಗೊಬ್ಬರ ಮಾರಾಟಗಾರರಿಗೆ ಕೃಷಿ ಇಲಾಖೆ ನೀಡಿದ ಆದೇಶ ರೈತರಿಗೆ ಸಮಸ್ಯೆ ತಂದೊಡ್ಡಿದೆ’ ಎನ್ನುವ ಆರೋಪ ಕೇಳಿ ಬಂದಿದೆ.

ಬೇಸಿಗೆ ಅವಧಿಯಲ್ಲಿ ಜಮೀನುಗಳಲ್ಲಿ ಯಾವುದೇ ಬೆಳೆ ಇಲ್ಲದಿರುವಾಗಲೂ ಯೂರಿಯಾ, ಡಿಎಪಿ ಮಾರಾಟ ಮಾಡಿರುವುದು ದಾಸ್ತಾನು ಪರಿಶೀಲನೆ ವೇಳೆ ಕಂಡು ಬಂದಿದೆ. ಕಾನೂನು ಬಾಹಿರವಾಗಿ ದಾಸ್ತಾನು, ಮಾರಾಟ ಹಿನ್ನೆಲೆಯಲ್ಲಿ ಇಲಾಖೆಯ ಮುಂದಿನ ಆದೇಶದ ವರೆಗೆ ಯೂರಿಯಾ ಮತ್ತು ಡಿಎಪಿ ರಸಗೊಬ್ಬರ ಮಾರಾಟ ಮಾಡದಂತೆ ಆದೇಶದಲ್ಲಿ ಸೂಚಿಸಲಾಗಿದೆ.

‘ತೋಟಗಾರಿಕೆ ಬೆಳೆಗಳಿಗೆ ಡಿಎಪಿ ರಸಗೊಬ್ಬರದ ಅಗತ್ಯವಿದೆ. ರಸಗೊಬ್ಬರ ಕೊರತೆಯಿಂದ ಲಕ್ಷಾಂತರ ವೆಚ್ಚ ಮಾಡಿ ಬೆಳೆದ ದಾಳೆಂಬೆ, ಪಪ್ಪಾಯ ಮತ್ತಿತರ ತೋಟಗಾರಿಕೆ ಬೆಳೆಗಳ ರಕ್ಷಣೆಗೆ ಹಿನ್ನೆಡೆಯಾಗುತ್ತಿದೆ. ರಸಗೊಬ್ಬರದ ಅಗತ್ಯತೆ ಕುರಿತು ಮಾಹಿತಿ ನೀಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎನ್ನುವುದು ರೈತರ ಆರೋಪ.

‘ಕವಿತಾಳ ಮತ್ತು ಪಾಮನಕಲ್ಲೂರು ಹೋಬಳಿ ವ್ಯಾಪ್ತಿಯಲ್ಲಿ ಅಂದಾಜು 40 ಹೆಕ್ಟೇರ್ ಪಪ್ಪಾಯ, 70 ಹೆಕ್ಟೇರ್ ದಾಳಿಂಬೆ, 10 ಹೆಕ್ಟೇರ್ ಮಲ್ಲಿಗೆ, 2 ಹೆಕ್ಟೇರ್ ಸುಗಂಧರಾಜ ಮತ್ತು 30 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತರಕಾರಿ ಬೆಳೆಯಾಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ನೀಲಕಂಠ ತಿಳಿಸಿದರು.

‘ಅಂದಾಜು 8 ಎಕರೆ ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗಿದೆ ನಿಯಮಿತವಾಗಿ ಪ್ರತಿ ವಾರಕ್ಕೊಮ್ಮೆ ರಸಗೊಬ್ಬರದ ಅಗತ್ಯವಿದೆ, ಇದೀಗ ರಸಗೊಬ್ಬರ ಕೊರತೆಯಿಂದ ತೀವ್ರ ಸಮಸ್ಯೆಯಾಗಿದೆ, ಬೇಸಿಗೆ ರಣ ಬಿಸಿಲಿನಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದೇವೆ, ಗೊಬ್ಬರ ಕೊರತೆ ಮತ್ತಷ್ಟು ಸಮಸ್ಯೆ ತಂದೊಡ್ಡಿದೆ, ರೈತರ ಪಹಣಿಯಲ್ಲಿನ ಬೆಳೆ ನಮೂದು ಆಧರಿಸಿ ರಸಗೊಬ್ಬರ ವಿತರಣೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ರೈತ ಬಲವಂತರಾಯ ವಟಗಲ್ ಆಗ್ರಹಿಸಿದರು.

‘ರಸಗೊಬ್ಬರ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಎಫ್ಐಡಿ ಕಡ್ಡಾಯಗೊಳಿಸಿದೆ, ಅನಧಿಕೃತ ಸಂಗ್ರಹ, ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯುವಲ್ಲಿ ಇಲಾಖೆಯ ಈ ಕ್ರಮ ಸರಿಯಾಗಿದೆ ಆದರೆ ಪೂರ್ವ ತಯಾರಿ ಇಲ್ಲದೆ ಈ ರೀತಿ ಆದೇಶದಿಂದ ನೂರಾರು ರೈತರು ಸಮಸ್ಯೆ ಎದುರಿಸುವಂತಾಗಿದೆ, ಮಳೆ ಸುರಿದ ಹಿನ್ನೆಲೆಯಲ್ಲಿ ದಾಳಿಂಬೆ ಬೆಳೆಗೆ ರಸಗೊಬ್ಬರದ ಅಗತ್ಯವಿದ್ದು ವಿತರಣೆಗೆ ಅಧಿಕಾರಿಗಳು ಮುಂದಾಗಬೇಕು ಎಂದು ಬಲವಂತರಾಯ ಒತ್ತಾಯಿಸಿದರು.

‘ಸಬ್ಸಿಡಿ ದುರುಪಯೋಗ ಹಾಗೂ ರಸಗೊಬ್ಬರ ಅಧಿಕ ಪ್ರಮಾಣದ ಬಳಕೆಯಿಂದ ಮಣ್ಣಿನ ಫಲವತ್ತತೆ ನಾಶವಾಗುವುದನ್ನು, ಉಂಟಾಗುವ ದುಷ್ಪರಿಣಾಮ ತಡೆಯಲು ಮಾರಾಟ ಮಳಿಗೆಗಳ ಮ್ಯಾಪಿಂಗ್ ಮಾಡಲಾಗುತ್ತಿದ್ದು ಸಮಸ್ಯೆ ಶೀಘ್ರ ಬಗೆಹರಿಯಲಿದೆ’ ಎಂದು ಕೃಷಿ ಇಲಾಖೆ ಸಿಬ್ಬಂದಿ ಹೇಳಿದರು.

ಸರ್ಕಾರದ ನಿರ್ಧಾರಕ್ಕೆ ಮಾರಾಟಗಾರರ ವಿರೋಧ

ಸೋಮವಾರ ರಸಗೊಬ್ಬರ ಮಾರಾಟ ಮಳಿಗೆ ಬಂದ್ಗೆ ಕರೆ

ಎಫ್ಐಡಿ ವ್ಯವಸ್ಥೆಗೆ ಕಾಲಾವಕಾಶ ನೀಡಲು ಆಗ್ರಹ

ಅಧಿಕಾರಿಗಳ ಸಭೆ ಕರೆಯಲಾಗಿದ್ದು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಜೈ ಕಿಸಾನ್ ತಂತ್ರಾಂಶ ಬಳಿಸಿ ತೋಟಗಾರಿಕೆ ಬೆಳೆ ಬೆಳೆದ ರೈತರಿಗೆ ರಸಗೊಬ್ಬರ ನೀಡಲು ಅವಕಾಶವಿದೆ
ಗುರುನಾಥ, ಸಹಾಯಕ ಕೃಷಿ ನಿರ್ದೇಶಕ ಮಾನ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.