ಶುಕ್ರವಾರ, ಮಾರ್ಚ್ 31, 2023
32 °C

ಸರ್ಕಾರಿ ಆಸ್ಪತ್ರೆಗೆ ಅಧಿಕಾರಿಗಳ ತಂಡ ಭೇಟಿ: ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೋರಣದಿನ್ನಿ (ಕವಿತಾಳ): ‘ರಕ್ತಹೀನತೆ ಮತ್ತು ಗಂಟಲುವಾಳ (ಥೈರಾಯಿಡ್‍) ಮತ್ತಿತರ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವೈದ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಬಾಹ್ಯ ಆರೋಗ್ಯ ಕಾರ್ಯಕರ್ತರಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ’ ಎಂದು ಮಾದರಿ ಗ್ರಾಮೀಣ ಆರೋಗ್ಯ ಸಂಶೋಧನಾ ಘಟಕದ ಮೇಲ್ವಿಚಾರಕ ಡಾ.ವೆಂಕಟೇಶ್ವರ ಪ್ರಸಾದ್ ಹೇಳಿದರು.

ಮಸ್ಕಿ ತಾಲ್ಲೂಕಿನ ತೋರಣದಿನ್ನಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿದ್ದ ಅವರು ಮಹಿಳೆಯರು ಮತ್ತು ಮಕ್ಕಳಿಂದ ಮಾಹಿತಿ ಪಡೆದು ಮಾತನಾಡಿ, ‘ಗರ್ಭಿಣಿ, ಬಾಣಂತಿ, ಎದೆಹಾಲು ಉಣಿಸುವ ತಾಯಂದಿರು ಮತ್ತು 6 ರಿಂದ 12 ವರ್ಷದ ಮಕ್ಕಳಲ್ಲಿ ರಕ್ತಹೀನತೆ ಮತ್ತು ಗಂಟಲುವಾಳ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಜನರು ಬಳಕೆ ಮಾಡುವ ಉಪ್ಪಿನಲ್ಲಿನ ಅಯೋಡಿನ್‍ ಅಂಶ ಕುರಿತು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲಾಗುತ್ತದೆ’ ಎಂದರು.

ಡಾ.ರವಿ ಮಾತನಾಡಿ,‘ಗ್ರಾಮೀಣ ಭಾಗದ ಮಹಿಳೆಯರು ಮತ್ತು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ರಕ್ತಹೀನತೆ ಮತ್ತಿತರ ಆರೋಗ್ಯ ಸಮಸ್ಯೆಗಳ ಕುರಿತು ಚೆನ್ನೈನ ಐಸಿಎಂಆರ್‌ ತಂಡದ ಅಧಿಕಾರಿಗಳು ಅಧ್ಯಯನ ನಡೆಸುತ್ತಿದ್ದು ಇಲ್ಲಿನ ಮಾಹಿತಿ ಸಂಗ್ರಹಿಸಿ ಕಳುಹಿಸಲಾಗುವುದು’ ಎಂದರು.

ರಿಮ್ಸ್‌ ಆಸ್ಪತ್ರೆಯ ಡಾ.ಪ್ರಥಮ, ಡಾ.ಪ್ರಫುಲ್ಲ, ಡಾ.ರಾಘವೇಂದ್ರ, ಡಾ.ಪೃಥ್ವಿ ಮಹಾಂತೇಶ ಕೋಟಿ, ಶ್ರೀನಿವಾಸ, ಶೋಭಾ, ಶರಣಮ್ಮ, ಅಶ್ವಿನಿ, ಪುಟ್ಟಬಾಯಿ, ರಾಜೇಶ್ವರಿ ಮತ್ತು ಮೋನಮ್ಮ ಮತ್ತಿತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.