ಜಾಲಹಳ್ಳಿ: ಸಮೀಪದ ಮುಂಡರಗಿ ಗ್ರಾಮದ ನಿವಾಸಿ ನಿರ್ಗತಿಕ ಮಹಿಳೆ ರೇಣುಕಮ್ಮ ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ವಾತ್ಸಲ್ಯ ಯೋಜನೆಯಡಿ ನಿರ್ಮಿಸಿದ ಮನೆಯನ್ನು ಸಂಸ್ಥೆಯ ಕೊಪ್ಪಳ ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ಗುರುವಾರ ಹಸ್ತಾಂತರ ಮಾಡಿದರು.

ನಂತರ ಅವರು ಮಾತನಾಡಿ, ‘ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿಗೆ ಸಂಸ್ಥೆ ಗ್ರಾಮೀಣ ಪ್ರದೇಶದ ಬಡವರಿಗೆ ಆದ್ಯತೆ ನೀಡಿ, ಸಮಾಜದ ಅತ್ಯಂತ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುತ್ತಿದೆ. ಈ ಗ್ರಾಮದ ಮಹಿಳೆ ರೇಣುಕಮ್ಮ ಅವರಿಗೆ ಮನೆ ಮಾತ್ರ ಅಲ್ಲದೇ ಪ್ರತಿ ತಿಂಗಳು ₹1000 ಹಣ ಕೂಡ ನೀಡಲಾಗುತ್ತಿದೆ’ ಎಂದರು.

ಇದೇ ರೀತಿ ದೇವದುರ್ಗ ತಾಲ್ಲೂಕಿನಲ್ಲಿ ಇಲ್ಲಿವರೆಗೆ ಸುಮಾರು 48 ವಾತ್ಸಲ್ಯ ಮನೆಗಳನ್ನು ನಿರ್ಮಿಸಿ ವಿತರಣೆ ಮಾಡಲಾಗಿದೆ. ಕಳೆದ ಇಪ್ಪತ್ತು ದಿನಗಳ ಹಿಂದೆಯೇ ಮನೆ ನಿರ್ಮಿಣಕ್ಕೆ ಭೂಮಿ ಪೂಜೆ ಕೈಗೊಳ್ಳಲಾಗಿತ್ತು ಎಂದರು.

ಈ ಸಂದರ್ಭದಲ್ಲಿ ರಾಯಚೂರು ಜಿಲ್ಲಾ ನಿರ್ದೇಶಕ ರಾಘವೇಂದ್ರ ಪಟಗಾರ, ಪಿಎಸ್ಐ ವೈಶಾಲಿ ಝಳಕಿ, ಮುಂಡರಗಿ ಗ್ರಾಮದ ಶಿವರಾಯ ದೇವಸ್ಥಾನದ ನರಸಣ್ಣ ತಾತಾ, ಯೋಜನಾಧಿಕಾರಿ ವೇಣುಗೋಪಾಲ, ಶರಣಪ್ಪ, ಬಾಲಯ್ಯ, ಅಶ್ವಿನಿ, ಭರತ ಕುಮಾರ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-32-1884147163

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.