ಗುರುವಾರ , ನವೆಂಬರ್ 14, 2019
19 °C

ರಾಯಚೂರು | ಉಕ್ಕಿ ಹರಿಯುತ್ತಿರುವ ಕೃಷ್ಣಾ, ತುಂಗಭದ್ರಾ

Published:
Updated:

ರಾಯಚೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ ಹೊರಬಿಡುವ ನೀರಿನ ಪ್ರಮಾಣವು ಬೆಳಿಗ್ಗೆ 8ರಿಂದ 2,28,180 ಕ್ಯುಸೆಕ್ ಅಡಿಗೆ ಏರಿಕೆಯಾಗಿದೆ.

ಕಲಬುರ್ಗಿ, ಬೀದರ್ - ರಾಯಚೂರು ನಡುವೆ ಸಂಪರ್ಕ ಕಲ್ಪಿಸುವ ಹೂವಿನಹೆಡಗಿ ಸೇತುವೆ ಮೇಲೆ ನೀರು ನುಗ್ಗಿದ್ದು, ಮುನ್ನಚ್ಚರಿಕೆ ಕ್ರಮವಾಗಿ ವಾಹನಗಳ ಸಂಪರ್ಕ ಕಡಿತಗೊಳಿಸಲಾಗಿದೆ.

ತುಂಗಭದ್ರಾ ನದಿ ಪ್ರವಾಹ ಕೂಡಾ ಏರುಗತಿಯಲ್ಲಿದೆ. ಬೆಳಿಗ್ಗೆಯಿಂದ 1,05,860 ಕ್ಯುಸೆಕ್ ನೀರು ಬರುತ್ತಿದ್ದು, ಈ ಪ್ರಮಾಣವು 1.5 ಕ್ಯುಸೆಕ್ ಅಡಿವರೆಗೂ ಏರಿಕೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. 

ನದಿತೀರಗಳಲ್ಲಿ ವಿವಿಧ ಇಲಾಖೆಗಳ ಸಿಬ್ಬಂದಿ ಇರುವ ರಕ್ಷಣಾ ತಂಡಗಳು ಕಟ್ಟೆಚ್ಚರ ವಹಿಸಿವೆ. ನಡುಗಡ್ಡೆಗಳಿರುವ ಕಡೆಗೆ ವಿಪತ್ತು ನಿರ್ವಹಣೆಗಾಗಿ ಬೋಟ್‌ಗಳನ್ನು ತರಿಸಲಾಗಿದೆ.
 

ಪ್ರತಿಕ್ರಿಯಿಸಿ (+)