ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಬಂದ್‌ ಬೆಂಬಲಿಸಿ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

Last Updated 8 ಜನವರಿ 2019, 12:07 IST
ಅಕ್ಷರ ಗಾತ್ರ

ರಾಯಚೂರು:ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಹಾಗೂ ಕಾರ್ಮಿಕ ನೀತಿಗಳನ್ನು ವಿರೋಧಿಸಿ ಎಡಪಕ್ಷಗಳು ನೀಡಿರುವ ಭಾರತ್‌ ಬಂದ್‌ ಕರೆಯನ್ನು ಬೆಂಬಲಿಸಿ ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ ಸಂಯೋಜಿತ ವಿವಿಧ ಕಾರ್ಮಿಕ ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು.

ಜೆಸಿಟಿಯು ಸದಸ್ಯರು ಬೈಕ್‌ ರ‍್ಯಾಲಿ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ನಗರದ ವಿವಿಧೆಡೆ ಸಂಚರಿಸಿ ಬಂದ್‌ ಬೆಂಬಲಿಸುವಂತೆ ವ್ಯಾಪಾರಿಗಳಿಗೆ ಕೋರಿದರು. ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಆನಂತರ ಟಿಪ್ಪು ಸುಲ್ತಾನ್‌ ಉದ್ಯಾನದಲ್ಲಿ ಧರಣಿ ನಡೆಸಿದರು. ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷೆ ಎಚ್‌. ಪದ್ಮಾ, ಎಐಟಿಯುಸಿ ಕಾರ್ಯದರ್ಶಿ ಬಾಷುಮಿಯಾ, ಜಿಲ್ಲಾ ಸಂಚಾಲಕ ಎನ್‌.ಎಸ್‌. ವೀರೇಶ, ಡಿ.ಎಸ್‌.ಶರಣಬಸವ, ಎಂ.ರವಿ, ತಿಮ್ಮಪ್ಪಸ್ವಾಮಿ, ಬಸವರಾಜ ಗಾರಲದಿನ್ನಿ ಇದ್ದರು.

ಬ್ಯಾಂಕ್‌ ನೌಕರರು:ಕೇಂದ್ರ ಸರ್ಕಾರದ ವಿರುದ್ಧ ಬ್ಯಾಂಕ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ನಗರದ ಕಾರ್ಪೋರೇಷನ್‌ ಬ್ಯಾಂಕ್‌ ಶಾಖೆಯ ಎದುರು ಪ್ರತಿಭಟನೆ ನಡೆಸಿದರು.

ಬ್ಯಾಂಕುಗಳ ವಿಲೀನಿಕರಣ ಕೈಬಿಡಬೇಕು ಹಾಗೂ ನೌಕರರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿದರು. ನೌಕರರ ಸಂಘಟನೆಗಳ ಮುಖಂಡರಾದ ಗೋವಿಂದರಾವ್‌, ಸಚಿನ್‌, ಅಲ್ಲಾವುದ್ದೀನ್‌ ಇದ್ದರು.

ಅಂಚೆ ಕಚೇರಿ: ಹಳೇ ಪಿಂಚಣಿ ಪದ್ಧತಿ ಜಾರಿ ಮಾಡುವಂತೆ ಒತ್ತಾಯಿಸಿ ಅಂಚೆ ಕಚೇರಿ ನೌಕರರು ಪ್ರಧಾನಶಾಖೆ ಎದುರು ಮಂಗಳವಾರ ಧರಣಿ ನಡೆಸಿದರು.

ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ಮಾಡಿ, ಹಂಗಾಮಿ ಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದರು. ಮುಖಂಡರಾದ ಬಸವರಾಜ ದೊರೆ, ಅನಿಲಕುಮಾರ್‌, ಚಿತ್ರಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT