ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕ ಸಂಘಟನೆಗಳಿಂದ ಧರಣಿ

Last Updated 27 ನವೆಂಬರ್ 2020, 4:17 IST
ಅಕ್ಷರ ಗಾತ್ರ

ಸಿಂಧನೂರು: ಕೇಂದ್ರ ಸರ್ಕಾರದ ರೈತ, ಕಾರ್ಮಿಕ ಮತ್ತು ಜನವಿರೋಧಿ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಜೆಸಿಟಿಯು ತಾಲ್ಲೂಕು ಘಟಕ ವಿವಿಧ ಕಾರ್ಮಿಕ ಸಂಘಟನೆಗಳ ಬೆಂಬಲದೊಂದಿಗೆ ಗುರುವಾರ ನಗರದ ಮುಖ್ಯರಸ್ತೆಗಳಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತೆಯರು, ಹಮಾಲಿ ಕಾರ್ಮಿಕರು, ಎಲ್‍ಐಸಿ ನೌಕರರು ಪ್ರತಿಭಟನಾ ಮೆರವಣಿಗೆ ನಡೆಸಿ, ಇಲ್ಲಿನ ಮಿನಿವಿಧಾನಸೌಧ ಕಚೇರಿಯ ಮುಂಭಾಗದಲ್ಲಿ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಸವರಾಜ ಏಕ್ಕಿ, ಬಸವರಾಜ ಬಾದರ್ಲಿ, ಹಾಜಿಸಾಬ ಆಯನೂರು ಸಂಗಡಿಗರು ಕ್ರಾಂತಿಗೀತೆ ಹಾಡಿದರು.

ರಸ್ತೆ ಸಂಚಾರ ತಡೆದು ಪ್ರತಿಭಟನೆ: ಇಲ್ಲಿನ ಶ್ರಮಜೀವಿ ಎಪಿಎಂಸಿ ಹಮಾಲರ ಸಂಘ (ಟಿಯುಸಿಐ)ದ ಪ್ರಮುಖರ ಸಹ ಕೇಂದ್ರ ಮತ್ತ ರಾಜ್ಯ ಸರ್ಕಾರದ ರೈತ, ಜನ ವಿರೋಧಿ ನೀತಿಗಳನ್ನು ಖಂಡಿಸಿ ರಸ್ತೆ ತಡೆದ ಪ್ರತಿಭಟನೆ ನಡೆಸಿದರು. ಇದರಿಂದ ವಾಹನಗಳ ಸಂಚಾರದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಯಿತು.

ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ಶೇಕ್ಷಾಖಾದ್ರಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಚಂದ್ರಶೇಖರ ಗೊರಬಾಳ, ಎಐಯುಟಿಯುಸಿ ಮುಖಂಡ ಭೀಮರಾಯ ವಕೀಲ, ಎಐಸಿಸಿಟಿಯು ಮುಖಂಡ ನಾಗರಾಜ್ ಪೂಜಾರ್, ಶೇಖರಗೌಡ ಬಳಗಾನೂರು, ಅಂಗನವಾಡಿ ಫೆಡರೇಶನ್ ಜಿಲ್ಲಾ ಘಟಕದ ಕಾರ್ಯದರ್ಶಿ ಸಾವಿತ್ರಿ, ತಾಲ್ಲೂಕು ಘಟಕದ ಅಧ್ಯಕ್ಷೆ ಗಿರಿಜಮ್ಮ , ಯಂಕಪ್ಪ ಕೆಂಗಲ್, ಹುಲಗಯ್ಯ ಎಲ್‍ಐಸಿ, ಎಸ್.ದೇವೇಂದ್ರಗೌಡ, ಶ್ರೀನಿವಾಸ ಬುಕ್ಕನಹಟ್ಟಿ, ಹೊನ್ನೂರಪ್ಪ ಕುಂಬಾರ, ಅನ್ವರ್‌ಪಾಷಾ, ಪರಶು ರಾಮ ತಿಡಿಗೋಳ, ಬಸವರಾಜ ಕೊಂಡೆ ಹಾಗೂಟಿಯುಸಿಐ ರಾಜ್ಯ ಸಮಿತಿ ಸದಸ್ಯರಾದ ಎಂ.ಗಂಗಾಧರ, ಚಿನ್ನಪ್ಪ ಕೊಟ್ರಿಕಿ, ಮಾಬುಸಾಬ ಬೆಳ್ಳಟ್ಟಿ, ಕೆ.ಅಯ್ಯನಗೌಡ, ಮಹಾದೇವಪ್ಪಗೌಡ, ಲಕ್ಷ್ಮಮ್ಮ ಸುಕಾಲಪೇಟೆ, ದುರುಗಪ್ಪ ಕಾರಲಕುಂಟಿ, ಹುಲುಗಪ್ಪ ಬಳ್ಳಾರಿ, ಹನುಮೇಶ ಉಪ್ಪಾರ, ಆದಿ ನಗನೂರು ಹಾಗೂ ಇತರರು ಇದ್ದರು.

ಅಂಗಡಿಗಳು ಬಂದ್‌: ಬಂದ್‌ನಿಂದಾಗಿ ಸಿಂಧನೂರು ನಗರದಲ್ಲಿ ಬೆಳಿಗ್ಗೆಯಿಂದ 10 ಗಂಟೆಯವರೆಗೆ ಬಸ್ ಡಿಪೋ ಮತ್ತು ಬಸ್ ನಿಲ್ದಾಣದಿಂದ ಬಸ್‍ಗಳು ಹೊರಗೆ ಬರಲಿಲ್ಲ.

ಎಪಿಎಂಸಿ, ಅಪ್ನಾಮಂಡಿ ಮಾರುಕಟ್ಟೆ, ಸುಕಾಲಪೇಟೆ ರಸ್ತೆಯಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರ-ವಹಿವಾಟು ಸ್ಥಗಿತಗೊಂಡಿತ್ತು. ಮಧ್ಯಾಹ್ನ ನಂತರ ಅಂಗಡಿಗಳು ತೆರೆದವು.

ಆಸ್ಪತ್ರೆ, ಮೆಡಿಕಲ್ ಶಾಪ್, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT