’ವಿದ್ಯಾರ್ಥಿಗಳಲ್ಲಿ ಶಾಲಾ ನೈರ್ಮಲ್ಯದ ಅರಿವು’

7
ಶೌಚಾಲಯ ನಿರ್ಮಾಣಕ್ಕೆ ಶ್ರಮಿಸಿದ ಪ್ರೇರಕರಿಗೆ ಸನ್ಮಾನ ಕಾರ್ಯಕ್ರಮ

’ವಿದ್ಯಾರ್ಥಿಗಳಲ್ಲಿ ಶಾಲಾ ನೈರ್ಮಲ್ಯದ ಅರಿವು’

Published:
Updated:
Prajavani

ರಾಯಚೂರು: ಜಿಲ್ಲೆಯಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನಿಂದ ಎಲ್ಲಾ ಶಾಲೆಳ ಮಕ್ಕಳಿಗೆ ಶಾಲಾ ನೈರ್ಮಲ್ಯ ಹಾಗೂ ವೈಯಕ್ತಿಕ ಸ್ವಚ್ಚತೆಯ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸ್ವಾಮಿ ವಿವೇಕಾನಂದ ಯೂತ್‌ಮೂವ್ ಮೆಂಟ್ ಜಿಲ್ಲಾ ಘಟಕದ ಅಧಿಕಾರಿ ಅಪ್ರೋಜ್ ಪಾಷಾ ಹೇಳಿದರು.

ತಾಲ್ಲೂಕಿನ ಶಾಖವಾದಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆ, ಜಿಲ್ಲಾ ಪಂಚಾಯಿತಿಯಿಂದ ಈಚೆಗೆ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನಾಚಾರಣೆ ಮತ್ತು ವಿಶ್ವ ಶೌಚಾಲಯ ದಿನಾಚಾರಣೆಯ ಪ್ರಯುಕ್ತ ರಾಯಚೂರು ತಾಲ್ಲೂಕಿನ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವಚ್ಚ ಭಾರತ ಯೋಜನೆಯ ಸಫಲತೆಗಾಗಿ ಶೌಚಾಲಯ ಕಟ್ಟಿಸಿಕೊಡುವುದು ಮತ್ತು ಬಳಸಲು ಪ್ರೇರೇಪಿಸುವ ಮೂಲಕ ಸಾರ್ವಜನಿಕ ವಲಯದಲ್ಲಿ ಕಾರ್ಯನಿರತವಾಗಿರುವ ಪ್ರೇರೇಪಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

 ಆರು ವರ್ಷಗಳೊಂದ ಸಂಸ್ಥೆಯು ರಾಯಚೂರು ಜಿಲ್ಲೆಯಲ್ಲಿ ನೀರು, ನೈರ್ಮಲ್ಯ ಮತ್ತು ಶುಚಿತ್ವದ ವಿಚಾರವಾಗಿ ಹಲವಾರು ಕಾರ್ಯಗಳನ್ನು ಮಾಡುತ್ತಿದೆ. ಜಿಲ್ಲೆಯನ್ನು ಬಯಲು ಮಲ ವಿಸರ್ಜನೆ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಶ್ರಮಿಸುತ್ತಿದೆ. ಎಲ್ಲಾ ಗ್ರಾಮಗಳಲ್ಲೂ ಪ್ರತಿಯೊಂದು ಕುಟುಂಬವೂ ಶೌಚಾಲಯವನ್ನು ಕಟ್ಟಿಸಿಕೊಂಡು ಬಳಸುವಂತೆ ಮಾಡಿ ಇಡೀ  ಸಮುದಾಯದಲ್ಲಿ ಬದಲಾವಣೆ ತರುವಂತೆ ಪ್ರಯತ್ನ ಹಾಕಲಾಗಿದೆ. ಈ ಕಾರ್ಯಕ್ರಮದ ಮೂಲಕ ಪ್ರೇರಕರಿಗೆ ಮತ್ತಷ್ಟು ಉತ್ತೇಜನ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ ಪರಮೇಶಪ್ಪ, ‘ಗ್ರಾಮೀಣ ಭಾಗದಲ್ಲಿ ಶೌಚಾಲಯ ಇಲ್ಲದ ಮನೆಗಳ ಮಹಿಳೆಯರ ಪರಿಸ್ಥಿತಿ ಬಗ್ಗೆ ನನಗೆ ತಿಳಿದಿದೆ. ಪ್ರತಿ ಕುಟುಂಬದಲ್ಲೂ ಶೌಚಾಲಯ ಕಟ್ಟಿಸಿಕೊಂಡು ಅದನ್ನು ಬಳಸುವಂತೆ ಆಗಬೇಕು. ಇನ್ನೂ ಸಾಕಷ್ಟು ಗ್ರಾಮಗಳಲ್ಲಿ ಬಯಲು ಮಲ ವಿಸರ್ಜನೆಗೆ ಹೋಗುತ್ತಿರುವುದು ಕಂಡುಬರುತ್ತಿದೆ. ಎಲ್ಲರೂ ಸೇರಿ ಅವರಿಗೆ ಸೂಕ್ತ ಸಲಹೆ ಮತ್ತು ಮಾಹಿತಿಯನ್ನು ನೀಡಿ ಅವರೆಲ್ಲರೂ ಶೌಚಾಲಯ ಬಳಸುವಂತೆ ಮಾಡಬೇಕು. ಅದಕ್ಕೆ ಗ್ರಾಮಸ್ಥರು, ಅಧಿಕಾರಿಗಳು ಹಾಗೂ ಸಂಸ್ಥೆ ಸಹಕಾರ ನೀಡಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವೈ.ಎಂ.ಮಹಮ್ಮದ್ ಯೂಸೂಫ್ ಮಾತನಾಡಿ, ಗ್ರಾಮಗಳಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಸಮರ್ಪಕ ಕ್ರಮ ಕೈ ಗೊಳ್ಳುವ ಅಗತ್ಯವಿದೆ. ದುಡಿದ ಹಣವನ್ನೆಲ್ಲಾ ಆಸ್ಪತ್ರೆಗಳಿಗೆ ಖರ್ಚು ಮಾಡುವುದರಿಂದ ಆರ್ಥಿಕವಾಗಿ ಹಿಂದುಳಿಯುತ್ತಾ ಹೋಗುತ್ತೇವೆ. ಆದ್ದರಿಂದ ಸಂಸ್ಥೆಯವರು ಶಾಖವಾದಿ ಗ್ರಾಮದಿಂದಲೇ ಸೂಕ್ತ ಕಸವಿಲೇವಾರಿ ಮಾಡಲು ಪಂಚಾಯಿತಿ ಅಭಿವೃಧ್ಧಿ ಅಧಿಕಾರಿ, ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಚರ್ಚಿಸಿ ಅದನ್ನು ಪ್ರಾರಂಭಿಸಿ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡಬೇಕು ಎಂದು ತಿಳಿಸಿದರು.

ನಿಸ್ವಾರ್ಥ ಸೇವೆ ಮಾಡುವ ಪ್ರತಿಯೊಬ್ಬರನ್ನು ಗೌರವಿಸಿ ಪ್ರೋತ್ಸಾಹ ನೀಡುವಂತಹಾ ಕಾರ್ಯಕ್ರಮ ಇದಾಗಿದೆ. ಮುಂದೆಯೂ ಸಂಸ್ಥೆ ಈ ರೀತಿಯ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಲಿ ಎಂದು ಹಾರೈಸಿದರು.

ವೈಯಕ್ತಿಕ ಶೌಚಾಲಯಕ್ಕೆ ಸುಂದರವಾಗಿ ಬಣ್ಣ ಬಳಿಸಿದವರಿಗೆ ಗ್ರಾಮ ಪಂಚಾಯಿತಿಯಿಂದ ಕೊಡುವ ನಗದು ಬಹುಮಾನವನ್ನು ಜಿಲ್ಲಾ ಪಂಚಾಯಿತಿಯ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ ಪರಮೇಶಪ್ಪ, ಉಪಕಾರ್ಯದರ್ಶಿ ವೈ.ಎಂ.ಮಹಮ್ಮದ್ ಯೂಸೂಫ್, ಯೋಜನಾ ನಿರ್ದೇಶಕ ಶರಣಬಸವ ಅವರು ವಿತರಿಸಿದರು.

ಶಾಖವಾದಿ ಪಂಚಾಯಿತಿ ಅಧ್ಯಕ್ಷ ಮೆಹಬೂಬ್ ಮತ್ತು ಪಂಚಾಯಿತಿ ಅಭಿವೃಧ್ಧಿ ಅಧಿಖಾರಿ ಅಣ್ಣಾರವ್ ಹಾಗೂ ವಿವಿಧ ಪಂಚಾಯಿತಿಗಳಿಂದ ಆಗಮಿಸಿದ್ದ ಪ್ರೇರಕರು, ಪಿಡಿಒಗಳು, ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳು, ಗ್ರಾಮಸ್ಥರು ಹಾಗೂ ಸಂಸ್ಥೆಯ ಸಿಬ್ಬಂದಿ ಇದ್ದರು.

ಮತದಾರರ ದಿನಾಚಾರಣೆಯ ಪ್ರಯುಕ್ತ ಎಲ್ಲರೂ ಮತದಾನ ಮಾಡುವ ಪ್ರಮಾಣವಚನ ಮಾಡಲಾಯಿತು. ಈ ಕಾರ್ಯಕ್ರಮವನ್ನು  ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಶರಣಬಸವ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !