ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳ ಪುನಶ್ಚೇತನ ಅವಶ್ಯಕ : ವೀರೇಂದ್ರ

Last Updated 26 ಜುಲೈ 2022, 12:18 IST
ಅಕ್ಷರ ಗಾತ್ರ

ಸಿರವಾರ: ‘ಅಂತರ್ಜಲ ವೃದ್ಧಿಗೆ ಕೆರೆಗಳ ಪು‌ನಶ್ಚೇತನ ಅಗತ್ಯ. ಇದಕ್ಕೆ ಅಮೃತ ಸರೋವರ ಯೋಜನೆ ಸಹಕಾರಿ’ ಎಂದು ಚಾಗಭಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ವೀರೇಂದ್ರ ಹೇಳಿದರು.

ತಾಲ್ಲೂಕಿನ ಚಾಗಭಾವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಲಾಪುರ ಕ್ಯಾಂಪ್‌ನಲ್ಲಿ ಅಮೃತ ಸರೋವರ ಯೋಜನೆಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ,‘ಅಂತರ್ಜಲ ವೃದ್ಧಿಗೆ ಅಮೃತ ಸರೋವರ ಯೋಜನೆಯಡಿ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೆರೆ ಪುನಶ್ಚೇತನ ಮಾಡಿ ಗ್ರಾಮಕ್ಕೆ ಶುದ್ಧ ನೀರು ಒದಗಿಸಲಾಗುವುದು’ ಎಂದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಕರಿಯಮ್ಮ, ಶಾಂತಮ್ಮ, ಹುಲಿಗೆಮ್ಮ, ತಾಲ್ಲೂಕು ಪಂಚಾಯಿತಿ ಐಇಸಿ ಸಂಯೋಜಕ ರಾಜೇಂದ್ರಕುಮಾರ, ಮುಖಂಡರಾದ ಎಂ.ಶ್ರೀನಿವಾಸ, ಸೂರ್ಯನಾರಾಯಣ ರಾವ್, ಎಂ.ರಾಧಾಕೃಷ್ಣ, ಕೆ.ಮಾರ್ಕಂಡಯ್ಯ, ವೈ.ಸತ್ಯನಾರಾಯಣ, ಪಟ್ಟಾಭಿರಾಮ, ವಿ.ರವಿ, ಜಿ.ಸತ್ಯನಾರಾಯಣ, ವೆಂಕಟರಾವ್, ಪವನಕುಮಾರ, ಬಿ.ಹನುಮೇಶ, ಕೆ.ಪವನಕುಮಾರ ಹಾಗೂ ಎಲ್.ವಿ.ಸುರೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT