ಭೂ ಸಂತ್ರಸ್ತರಿಗೆ ಉದ್ಯೋಗ ನೀಡಲು ಬುದ್ದಿನ್ನಿ ಗ್ರಾಮಸ್ಥರ ಮನವಿ

7

ಭೂ ಸಂತ್ರಸ್ತರಿಗೆ ಉದ್ಯೋಗ ನೀಡಲು ಬುದ್ದಿನ್ನಿ ಗ್ರಾಮಸ್ಥರ ಮನವಿ

Published:
Updated:
ರಾಯಚೂರಿನಲ್ಲಿ ಸೋಮವಾರ ಭೂ ಸಂತ್ರಸ್ತರಿಗೆ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿ ಬುದ್ದಿನ್ನಿ ಗ್ರಾಮಸ್ಥರು ಹೆಚ್ಚುವರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು

ರಾಯಚೂರು: ಜಿಲ್ಲೆಯ ಮಾನ್ವಿ ತಾಲ್ಲೂಕಿನ ಬುದ್ದಿನ್ನಿ ಗ್ರಾಮದ ಗಣಿಗಾರಿಕೆಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತ ಕುಟುಂಬದವರಿಗೆ ಉದ್ಯೋಗ ನೀಡಬೇಕು ಹಾಗೂ ಸ್ಪೋಟ ಮಾಡುವುದು ತಡೆಗಟ್ಟಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.

ಗಣಿ ಆರಂಭದಲ್ಲಿ ಅಂದಿನ ಆಡಳಿತಾಧಿಕಾರಿ, ಶಾಸಕ ಹಾಗೂ ಸಂಸದರು ಉದ್ಯೋಗ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದರೂ, ಇದುವರೆಗೆ ಭರವಸೆ ಈಡೇರಿಸಲ್ಲ. ಆದ್ದರಿಂದ ಕೂಡಲೇ ಉದ್ಯೋಗ ನೀಡಬೇಕು ಎಂದು ಆಗ್ರಹಿಸಿದರು.

ಭೂಮಿಯ ಕೆಳಮೈನ ಅದಿರು ತೆಗೆಯಲು ಸಿಡಿಮದ್ದುಗಳಿಂದ ಸ್ಪೋಟಗಳು ಮಾಡುವುದರಿಂದ ಮನೆಗಳಿಗೆ ಧಕ್ಕೆಯಾಗುತ್ತಿದೆ. ಅಲ್ಲದೇ ಸ್ಪೋಟದ ನಂತರ ಬರುವ ವಿಷದ ಗಾಳಿಯಿಂದ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಿದೆ. ಆದರೆ, ಆಡಳಿತ ಮಂಡಳಿ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ದೂರಿದರು.

ಭೂಮಿ ಕಳೆದುಕೊಂಡು ಕುಟುಂಬಗಳ ಪೈಕಿ ತಲಾ ಒಬ್ಬರಿಗೆ ಉದ್ಯೋಗ ನೀಡಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗ್ರಾಮಸ್ಥರಾದ ಸಿದ್ಧಣ್ಣ ದಢೇಸುಗೂರು, ಯಂಕನಗೌಡ, ಉಮೇಶ ಬುದ್ದಿನ್ನಿ, ಬಸನಗೌಡ ಪೋಲಿಸ್ ಪಾಟೀಲ್, ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮಣ, ದುರಗಣ್ಣ ಆಂಜನೇಯ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !