ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ ಉಳಿವಿನಲ್ಲಿ ಸಮುದಾಯದ ಉಳಿವು; ಸಾಹಿತಿ ಪವನ್‍ಕುಮಾರ

Last Updated 16 ಮೇ 2022, 3:25 IST
ಅಕ್ಷರ ಗಾತ್ರ

ಕಾರಟಗಿ: ಕನ್ನಡ ಭಾಷೆ ಕನ್ನಡಿಗರ ಅಸ್ಮಿತೆಯಾಗಿದ್ದು, ಭಾಷೆಯ ಉಳಿವಿನಲ್ಲಿಜನಸಮುದಾಯದ ಉಳಿವಿದೆ ಎಂದು ಸಾಹಿತಿ ಪವನ್‍ಕುಮಾರ ಗುಂಡೂರು ಹೇಳಿದರು.

ಪಟ್ಟಣದ ಖಾಸಗಿ ಕಲ್ಯಾಣ ಮಂಟ ಪದಲ್ಲಿ ಭಾನುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‌

ಭಾಷೆ ಜನರಲ್ಲಿ ಸಾಮರಸ್ಯ ಮೂಡಿಸಬೇಕು. ಸಾಹಿತ್ಯ ಪರಿಷತ್ತು ಬದಲಾದರೂ ಪಾವಿತ್ರ್ಯತೆ ಬದಲಾಗಿಲ್ಲ. ತಾಲ್ಲೂಕಿನ ವಿವಿಧ ಸಾಂಸ್ಕೃತಿಕ ವಿಷಯ ಗಳು ಒಳಗೊಂಡ ಪುಸ್ತಕ ಹೊರತರ ಬೇಕು. ಸಾಹಿತ್ಯಾಸಕ್ತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಸವರಾಜ ದಢೇಸುಗೂರು, ನೆಲ– ಜಲ ಹಾಗೂ ಭಾಷೆಯ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು. ಭಾಷೆಗೆ ಧಕ್ಕೆ ಉಂಟಾದಾಗ ಸಂರಕ್ಷಣೆಗೆ ಶ್ರಮಿಸಬೇಕು ಎಂದರು.

ನಿಕಟಪೂರ್ವ ಕಸಾಪ ಅಧ್ಯಕ್ಷ ಅಧ್ಯಕ್ಷ ಚನ್ನಬಸಪ್ಪ ವಕ್ಕಳದ ನೂತನ ಅಧ್ಯಕ್ಷ ಶರಣಪ್ಪ ಕೋಟ್ಯಾಳ ಅವರಿಗೆ ಕನ್ನಡ ಧ್ವಜ ಹಸ್ತಾಂತರಿಸಿದರು. ಚನ್ನಬಸಪ್ಪ ಆಸ್ಪರಿಯವರ `ಸಂತೆಯೊಳಗಣಮೌನ', ಸೋಮು ಕುದರಿಹಾಳ ಸಂಪಾದಕತ್ವದ `ಅಕ್ಷರ ಬೆಳಕು' ಮಕ್ಕಳ ಶೈಕ್ಷಣಿಕ ಮಾಸ ಪತ್ರಿಕೆ ಹಾಗೂ ಕಸಾಪ ಸಾಮಾಜಿಕ ಜಾಲತಾಣಗಳ ಲೋಕಾರ್ಪಣೆ ಮಾಡಲಾಯಿತು.

ಹಿರೇಮಠದ ಮರುಳಸಿದ್ಧಯ್ಯಸ್ವಾಮಿ, ತಲೇಖಾನ ಮಠದ ವೀರಭದ್ರಯ್ಯಸ್ವಾಮಿ ಸಾನಿಧ್ಯ ವಹಿಸಿದ್ದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶರಣೇಗೌಡ ಪೊಲೀಸ್‌ ಪಾಟೀಲ, ಪುರಸಭೆ ಸದಸ್ಯೆ ಸೌಮ್ಯ ಮಹೇಶ ಕಂದಗಲ್, ಪದಾಧಿಕಾರಿಗಳಾದ ಚಂದ್ರಶೇಖರ ಗಣವಾರಿ, ಮಂಜುನಾಥ ಚಿಕೇನಕೊಪ್ಪ,ಶಿವಲೀಲಾ ಅಯೋಧ್ಯ, ಪ್ರಮುಖರಾದ ಗುರುಸಿದ್ಧಪ್ಪ ಯರಕಲ್, ನಾಗರಾಜ ಬಿಲ್ಗಾರ್, ಮಂಜುನಾಥ ಮಸ್ಕಿ, ರತ್ನಾ ಯಾಪಲಪರ್ವಿ, ವಿಜಯಲಕ್ಷ್ಮಿ ಮೇಲಿನಮನಿ, ಹೊನ್ನೂರಪ್ಪ ಮಡಿವಾಳರ್,ಬಿ. ಕಾಶಿವಿಶ್ವನಾಥ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸರ್ದಾರ ಅಲಿ, ಮಾರೇಶ ವಿಭೂತಿ, ದ್ಯಾಮಣ್ಣ ಬೆನಕನಟ್ಟಿ, ಯಮನಪ್ಪ, ಮಂಜುನಾಥ ಮಸ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT