ಗುರುವಾರ , ಜನವರಿ 27, 2022
20 °C

ಜೆಡಿಎಸ್ ತೊರೆದು ಕಾಂಗ್ರೆಸ್‍ ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿಂಧನೂರು: ತಾಲ್ಲೂಕಿನ ಕಲ್ಲೂರು ಗ್ರಾಮದ ಜೆಡಿಎಸ್ ಮುಖಂಡ ವೆಂಕೋಬ ಜಿನ್ನದ ಸೇರಿದಂತೆ ಅನೇಕ ಬೆಂಬಲಿಗರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ ನೇತೃತ್ವದಲ್ಲಿ ಬುಧವಾರ ಕಾಂಗ್ರೆಸ್ ಸೇರ್ಪಡೆಯಾದರು.

ಈ ವೇಳೆ ಮಾತನಾಡಿದ ಜಿನ್ನದ, ‘ಜೆಡಿಎಸ್‌ನಲ್ಲಿ ನಿಷ್ಠಾವಂತರಾಗಿ ಬೆಲೆ ಇಲ್ಲ. ನಾಟಕ ಮಾಡುವವರಿಗೆ ಶಾಸಕ ವೆಂಕಟರಾವ್ ನಾಡಗೌಡರು ಮಣೆ ಹಾಕುತ್ತಿದ್ದಾರೆ. ಕೆಲವರ ಮಾತುಗಳೆ ನಾಡಗೌಡರಿಗೆ ವೇದವಾಕ್ಯಗಳಾಗಿವೆ.  ಉಳಿದವರ ಮಾತುಗಳನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಹೀಗಾಗಿ, ಅವರ ವರ್ತನೆಗೆ ಬೇಸತ್ತು, ಕಾಂಗ್ರೆಸ್‍ ಸೇರ್ಪಡೆ ಆಗಿದ್ದೇವೆ’ ಎಂದರು.

ಬಾಬುಗೌಡ ಬಾದರ್ಲಿ ಮಾತನಾಡಿ ‘ನೀರಿನ ವಿಷಯದಲ್ಲಿ ಸುಳ್ಳು ಹೇಳಿ ರೈತರಿಗೆ ಮೋಸ ಮಾಡಿದ ಅಧಿಕಾರಕ್ಕೆ ಬಂದಿರುವ ವೆಂಕಟರಾವ್ ನಾಡಗೌಡ ಅವರನ್ನು ಜೆಡಿಎಸ್ ಕಾರ್ಯಕರ್ತರು ನಂಬುತ್ತಿಲ್ಲ. ಕ್ಷೇತ್ರದ ಜನರ ಆಶೋತ್ತರ, ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸುವಲ್ಲಿ ಸಂಪೂರ್ಣವಾಗಿ ವಿಫಲ ವಾಗಿ ದ್ದಾರೆ. ಮುಂಬರುವ ವಿಧಾನಸಭಾ ಚುನಾವ ಣೆಯಲ್ಲಿ ನಾಡಗೌಡರನ್ನು ಸೋಲಿಸಿ ಜನರು ತಕ್ಕ ಪಾಠ ಕಲಿಸು ವರು‘ ಎಂದು ಹೇಳಿದರು.
ಮುಖಂಡರಾದ ವೀರಭದ್ರಪ್ಪಗೌಡ ಬೆಳ್ಳಿಗನೂರು, ಅಮರೇಗೌಡ ಬೊಮ್ಮ ನಾಳ, ಬಸವರಾಜ ನಿಟ್ಟೂರು, ಶಿವನಗೌಡ ಎಲೆಕೂಡ್ಲಿಗಿ, ಭೀಮರಾಯಗೌಡ ಭಾವಿಕಟ್ಟಿ, ನರ ಸರೆಡ್ಡಿ ಭಾವಿಕಟ್ಟಿ, ಆದನಗೌಡ ಸಾಹು ಕಾರ, ಗ್ರಾ. ಪಂ. ಸದಸ್ಯರಾದ ಬಸನ ಗೌಡ, ಹನುಮಂತ, ಸಾಬಮ್ಮ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.