ಶಕ್ತಿನಗರ: ಆಧಾರ್ ಜೋಡಣೆ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕೆ ಕಲ್ಮಲಾ ಹೋಬಳಿಯ ಜೆ.ಮಲ್ಲಾಪುರ ವ್ಯಾಪ್ತಿಯ ಗ್ರಾಮ ಆಡಳಿತಾಧಿಕಾರಿ ರಂಗ ಬಸವರಾಜ ಅವರಿಗೆ ಜಿಲ್ಲಾಧಿಕಾರಿ ಪ್ರಶಂಶನಾ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದ್ದಾರೆ.
ರಂಗ ಬಸವರಾಜ ಅವರು ರೈತರ ಸಹಕಾರ ಪಡೆದು ಹನುಮಾಪುರ, ಹೆಂಬೆರಾಳ, ತಿಮ್ಮಾಪುರ ಹಾಗೂ ಶ್ರೀನಿವಾಸಪುರ ಗ್ರಾಮದ ಪಹಣಿಗಳಿಗೆ ಆಧಾರ್ ಜೋಡಣೆ ಮಾಡಿಸಿದ್ದಾರೆ.