ಲಿಂಗಸುಗೂರು: ತಾಲ್ಲೂಕಿನ 24 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೆಲ ಗ್ರಾಮಗಳಿಗೆ ಬಾಡಿಗೆ ಜಲಮೂಲವೇ ಆಸರೆಯಾಗಿದೆ.

ತಾಲ್ಲೂಕಿಗೆ ಬಸವಸಾಗರ ಜಲಾಶಯ ಹತ್ತಿರ ಇದೆ. ಕೃಷ್ಣಾ ನದಿಯೂ ಹರಿಯುತ್ತಿದೆ. ಆದರೂ ಪರದಾಟ ತಪ್ಪುತ್ತಿಲ್ಲ.

ತಾಲ್ಲೂಕಿನ ಚಿತ್ತಾಪುರ, ಹಾಲಭಾವಿ, ಹಾಲಭಾವಿ ತಾಂಡಾ, ಪೈದೊಡ್ಡಿ, ಶೀಲಹಳ್ಳಿ, ಆದಾಪುರ, ದೇವರಭೂಪುರ, ಹಾಲವರ್ತಿ ತಾಂಡಾ, ಆಶಿಹಾಳ, ಆಶಿಹಾಳ ತಾಂಡಾ, ಕೋಮನೂರು, ಯಲಗಟ್ಟಾ, ರೋಡಲಬಂಡಾ, ಗೌಡೂರು, ಹೊಸೂರು, ಮರಳಿ, ಚುಕನಟ್ಟಿ, ಹಿರೇನಗನೂರು, ಆನ್ವರಿ, ಅಡವಿಭಾವಿ, ಗುಂಡಸಾಗರ, ವ್ಯಾಕರನಾಳ, ಛತ್ತರ, ನಾಗಲಾಪುರ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಈ ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಅಧಿಕಾರಿಗಳು ಗುರುತಿಸಿದ ಗ್ರಾಮಗಳು ಮಾತ್ರವಲ್ಲದೆ, ಹಂಚಿನಾಳ, ಮಾವಿನಬಾವಿ ಗ್ರಾಮಗಳ ಜನತೆಗೆ ತೆರೆದ ಬಾವಿ ನೀರೇ ಆಸರೆಯಾಗಿದೆ. ಬಿಸಿಲಿನ ಪ್ರಖರತೆ ಹೆಚ್ಚಾದಂತೆ ಬಾವಿಯಲ್ಲಿನ ನೀರಿನ ಮಟ್ಟ ಕುಸಿಯುತ್ತಿದ್ದರಿಂದ ಗ್ರಾಮಸ್ಥರಿಗೆ ನೀರಿನ ಆತಂಕ ಎದುರಿಸುವಂತಾಗಿದೆ.

ಹಂಚಿನಾಳದಲ್ಲಿ ಎರಡು ಶುದ್ಧ ನೀರಿನ ಘಟಕಗಳನ್ನು ಅಳವಡಿಸಿತ್ತಾದರೂ ಅದರಲ್ಲಿ ಒಂದು ಘಟಕ ಕೆಟ್ಟು ನಿಂತು ಗುಜರಿ ಸೇರಿದೆ. ಮತ್ತೊಂದು ಇನ್ನೂ ಕಾರ್ಯಾರಂಭ ಮಾಡಿಲ್ಲ. ಹಂಚಿನಾಳ ಪಕ್ಕದಲ್ಲಿ ಕೃಷ್ಣಾ ನದಿ ಹರಿಯುತ್ತಿದ್ದರೂ ನೀರಿಗಾಗಿ ಪರದಾಡುವಂತಾಗಿದೆ.

ನದಿ ಮೂಲಕ ನದಿ ತೀರದ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ. ಹೊನ್ನಹಳ್ಳಿಯಲ್ಲಿ ನೀರುಗಂಟಿಗಳಿಗೆ ಸಮರ್ಪಕವಾಗಿ ವೇತನ ನೀಡಿಲ್ಲ. ಗ್ರಾಮಕ್ಕೆ ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ತಾಲ್ಲೂಕಿನ ಸರ್ಜಾಪುರ, ಕುಪ್ಪಿಗುಡ್ಡ ಗ್ರಾಮಗಳು ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತವಾಗುತ್ತಿಲ್ಲ. ಸರ್ಜಾಪುರ ಕೆರೆಯಲ್ಲಿ ನೀರಿದ್ದರೂ ಕೆಲ ವಾರ್ಡ್ಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡುವಲ್ಲಿ ಪಂಚಾಯಿತಿ ಆಡಳಿತ ವಿಫಲವಾಗಿದೆ.

ತಾಲ್ಲೂಕಿನಲ್ಲಿ 114 ಶುದ್ಧ ನೀರಿನ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಅದರಲ್ಲಿ 27 ಘಟಕಗಳು ಬಂದ್ ಆಗಿವೆ. ಕೆಕೆಆರ್ಡಿಬಿ ಯೋಜನೆಯಡಿ ಕೋಮನೂರು, ಮಲ್ಲಾಪುರ, ಆನ್ವರಿ, ಬೆಂಚಲದೊಡ್ಡಿ ತಾಂಡಾ, ಗೊರೇಬಾಳ ತಾಂಡಾ, ಯರಗುಂಟಿ, ಕಡ್ಡೋಣಾ, ಹಾಲಭಾವಿ ತಾಂಡಾದಲ್ಲಿ ಹೊಸದಾಗಿ ಶುದ್ಧ ನೀರಿನ ಘಟಕ ನಿರ್ಮಾಣ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ.

ಜಲಜೀವನ ಮಿಷನ್ನ(ಜೆಜೆಎಂ) ಒಟ್ಟು ಮೂರು ಹಂತಗಳಲ್ಲಿ 230 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 87 ಕಾಮಗಾರಿಗಳು ಪೂರ್ಣಗೊಂಡಿದ್ದರೆ, 112 ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿವೆ. 31 ಕಾಮಗಾರಿಗಳನ್ನು ನಾನಾ ಕಾರಣಗಳಿಂದಾಗಿ ಸ್ಥಗಿತಗೊಳಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-32-1042963529

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.