ಲಿಂಗಸುಗೂರು: ತಾಲ್ಲೂಕಿನ ಈಚನಾಳ ಗ್ರಾಮದಲ್ಲಿ ನರೇಗಾ ಕಾಮಗಾರಿ ಅಳತೆ ವಿಚಾರವಾಗಿ ಕಾರ್ಮಿಕರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು.

ಈಚನಾಳ ಗ್ರಾಮದ ಹೊರವಲಯದಲ್ಲಿ ನರೇಗಾದಡಿ ನಡೆಯುತ್ತಿದ್ದ ಸಣ್ಣ ನೀರಾವರಿ ಇಲಾಖೆಯ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ನರೇಗಾ ತಾಂತ್ರಿಕ ಸಂಯೋಜಕ ಹನುಮಗೌಡ, ಪಿಡಿಒ ಬಸಯ್ಯ, ಸರಿಯಾದ ಅಳತೆ ಪ್ರಮಾಣದಲ್ಲಿ ಕೆಲಸ ಮಾಡುವಂತೆ ಕೂಲಿಕಾರರಿಗೆ ಸೂಚಿಸಿದರು.

ಅಧಿಕಾರಿಗಳ ವಿರುದ್ಧ ಗರಂ ಆದ ಕೂಲಿಕಾರರು, ‘ನರೇಗಾ ಯೋಜನೆ ನಿಯಮಗಳನ್ನು ಮೊದಲು ನೀವು ಪಾಲಿಸಿ, ಕಾಮಗಾರಿ ಸ್ಥಳದಲ್ಲಿ ಟೆಂಟ್, ಪ್ರಥಮ ಚಿಕಿತ್ಸಾ ಸೌಲಭ್ಯ, ನೀರಿನ ವ್ಯವಸ್ಥೆ ಮಾಡಬೇಕೆಂಬ ನಿಯಮ ಇದ್ದರೂ ಅದನ್ನು ನೀವು ಪಾಲಿಸುತ್ತಿಲ್ಲ. ಅದು ಬಿಟ್ಟು ನಮಗೆ ನಿಯಮ ಹೇಳಲು ಬರಬೇಡಿ’ ಎಂದು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

ನಂತರ ಅಧಿಕಾರಿಗಳು ಅಗತ್ಯ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದರಿಂದ ಕೂಲಿಕಾರರು ಕೆಲಸದತ್ತ ಮರಳಿದರು.

ಈ ಸಂದರ್ಭದಲ್ಲಿ ನರೇಗಾ ಯೋಜನೆಯ ತಾಂತ್ರಿಕ ಸಹಾಯಕ ವಿರೇಶ, ಬಿಎಫ್ಟಿಒ ದುರಗಣ್ಣ ನಾಯಕ, ತಾಂಡಾ ರೋಜ್ಗಾರ್ ಅಮರೇಶ, ಸೇರಿದಂತೆ ನೂರಾರು ಜನ ಕೂಲಿಕಾರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-32-1453980939

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.