ಲಿಂಗಸುಗೂರು: ಪುರಸಭೆ ವ್ಯಾಪ್ತಿಯ ಡಬ್ಬಾ ಅಂಗಡಿಗಳನ್ನು ತೆರವು ಮಾಡದಂತೆ ಒತ್ತಾಯಿಸಿ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದ ನೇತೃತ್ವದಲ್ಲಿ ವ್ಯಾಪಾರಿಗಳು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಗಡಿಯಾರ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಕಾರರು, ಅಲ್ಲಿಂದ ಮೆರವಣಿಗೆ ಆರಂಭಿಸಿದರು. ಪ್ರಮುಖ ರಸ್ತೆಗಳ ಮುಖಾಂತರ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು.

‘20-25 ವರ್ಷಗಳಿಂದ ಪಟ್ಟಣದ ಬಸ್ ನಿಲ್ದಾಣ ಸುತ್ತಮುತ್ತ ಸೇರಿ ಪ್ರಮುಖ ಬೀದಿಗಳಲ್ಲಿ ತಳ್ಳುವ ಬಂಡಿ ಇಟ್ಟುಕೊಂಡು ವಿವಿಧ ವ್ಯಾಪಾರ–ವಹಿವಾಟು ಮಾಡುತ್ತಾ ಬಂದಿದ್ದೇವೆ. ಹಣ್ಣಿನ ವ್ಯಾಪಾರಿಗಳಿಗಾಗಿ ಯಾವುದೇ ಮಾರುಕಟ್ಟೆ ಇಲ್ಲದಾಗಿದೆ. ಬಸ್ ನಿಲ್ದಾಣ ಸುತ್ತಮುತ್ತ ಹೊರತು ಪಡಿಸಿ ಬೇರೆ ಕಡೆಗೆ ವ್ಯಾಪಾರವಾಗುವುದಿಲ್ಲ. ಈ ವ್ಯಾಪಾರವನ್ನು ನೆಚ್ಚಿಕೊಂಡೇ ಪಿಎಂ ಸ್ವನಿಧಿ ಯೋಜನೆಯಡಿ ಪುರಸಭೆಯಿಂದ ಸಾಲ ಪಡೆದಿದ್ದೇವೆ’ ಎಂದು ತಿಳಿಸಿದರು.

‘ಪುರಸಭೆ ಆಡಳಿತ, ಸುಗಮ ಸಂಚಾರದ ನೆಪವೊಡ್ಡಿ ಪುರಸಭೆ ವ್ಯಾಪ್ತಿಯ ಎಲ್ಲಾ ಬೀದಿ ಬದಿ ಅಂಗಡಿಗಳನ್ನು ತೆರವುಗೊಳಿಸುವಂತೆ ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗಿದೆ. ಇದರಿಂದ ನಮ್ಮ ಬದುಕೇ ಅಕ್ಷರಶಃ ಬೀದಿಗೆ ಬರುತ್ತದೆ. ಮಾನವೀಯತೆ ದೃಷ್ಟಿಯಿಂದ ಮತ್ತೊಂದು ಅವಕಾಶ ನೀಡಿದರೆ, ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಹಾಗೂ ಸ್ವಚ್ಛತೆ ಕಾಪಾಡಿಕೊಂಡು ವ್ಯಾಪಾರ ಮಾಡುತ್ತೇವೆ. ಹೀಗಾಗಿ ಬೀದಿ ಬದಿ ಅಂಗಡಿಗಳನ್ನು ತೆರವುಗೊಳಿಸಬಾರದು’ ಎಂದು ಒಕ್ಕೂಟದ ಶಾಖಾ ಅಧ್ಯಕ್ಷ ಮಹಿಬೂಬು ಪಾಷಾ ಒತ್ತಾಯಿಸಿದ್ದಾರೆ.

ಅಸ್ಮತ್, ಸಾಬಣ್ಣ ಗುತ್ತೇದಾರ, ರಜಬಲಿ, ರಹೀಂಪಾಷಾ, ಶರಣಪ್ಪ ಹುನಕುಂಟಿ, ಮಹಾಂತೇಶ, ದುರ್ಗಾ ಪ್ರಸಾದ, ನಾಗರಾಜ ತಿಪ್ಪಣ್ಣ, ಫೀರ್ಸಾಬ್, ನಾಗಮ್ಮ, ರೇಣುಕಮ್ಮ, ದೊಡ್ಡ ಬಸ್ಸಮ್ಮ, ಹನುಮವ್ವ ಕರಡಕಲ್, ಲಕ್ಷ್ಮಮ್ಮ, ಗದ್ದೆಮ್ಮ ಗೊರೆಬಾಳ, ಯಲ್ಲಮ್ಮ, ನಿಂಗಮ್ಮ, ಗುಂಡಪ್ಪ ಕೋಳಕುಂದಿ, ಮಹಾಂತೇಶ ಹೋಟೆಲ್, ಶರಣಪ್ಪ ಇಡ್ಲಿಬಂಡಿ, ಅಮರೇಶ ಅಡವಿಬಾವಿ, ಮಹಿಬೂಬು ಗನ್ನ, ಖಾಸಿಂ, ಮಹ್ಮದ್ ಖುರೇಷಿ, ವಿಜಯ ಸಿಂಗ್ ಹಾಗೂ ಮಹಾಂತೇಶ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-32-202645311

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.