ಲಿಂಗಸುಗೂರು: ವಿಚಾರಣಾಧೀನ ಕೈದಿಗಳಿಗೆ ಯೋಗ, ಕೌಶಲಾಭಿವೃದ್ಧಿ ತರಬೇತಿ ಸೇರಿದಂತೆ ಇಲಾಖೆ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಿ, ಅತ್ಯುತ್ತಮ ಕೆಲಸಗಳನ್ನು ಮಾಡಿದ್ದಕ್ಕಾಗಿ ಪಟ್ಟಣದ ತಾಲ್ಲೂಕು ಉಪ ಕಾರಾಗೃಹ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದುಕೊಂಡಿದೆ.

ಕಾರಾಗೃಹದಲ್ಲಿ ಅನಿ ರೀಕ್ಷಿತ ತಪಾಸಣೆ, ವಿಚಾರಣಾಧೀನ ಕೈದಿಗಳ ಕೈಯಲ್ಲಿ ನಿಷೇಧಿತ ವಸ್ತುಗಳು ಸಿಗದಂತೆ ಎಚ್ಚರಿಕೆ ವಹಿಸುವುದರ ಜೊತೆಗೆ ಕಾರಾಗೃಹಕ್ಕೆ ಬರುವ ಸಿಬ್ಬಂದಿ ಹಾಗೂ ಕೈದಿಗಳ ಭೇಟಿಗೆ ಬರುವವರನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗುತ್ತಿದೆ.

ಕಾರಾಗೃಹ ಎಂದರೆ ಕೈದಿಗಳನ್ನು ಬಂಧಿಸಿಡುವುದರ ಜೊತೆಗೆ ಕಾರಾಗೃಹದಲ್ಲಿ ಸ್ವಚ್ಛತೆ, ಉತ್ತಮ ಪರಿಸರ, ಶುದ್ಧ ಕುಡಿಯುವ ನೀರು, ಇಲಾಖೆ ಮೆನು ಪ್ರಕಾರ ಕೈದಿಗಳಿಗೆ ಊಟ-ಉಪಾಹಾರ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಕ್ಕೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಪೊಲೀಸ್ ಮಹಾನಿರ್ದೇಶಕ ಅಲೋಕಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಂಸನಾ ಪತ್ರ ನೀಡಿದ್ದಾರೆ.

ಕೈದಿಗಳ ಮನಪರಿವರ್ತನೆಯೇ ಗುರಿ: ಕೈದಿಗಳ ಮನಪರಿವರ್ತನೆಗಾಗಿ ನಿತ್ಯವೂ ಯೋಗ-ಧ್ಯಾನ, ನುರಿತ ಯೋಗ ಶಿಕ್ಷಕರಿಂದ ಶಿಬಿರಗಳನ್ನು ಆಯೋಜಿಸಲಾಗಿದೆ. ಕೈದಿಗಳು ಸದೃಢ ಆರೋಗ್ಯ ಹೊಂದಲಿ ಎಂಬ ಉದ್ದೇಶಕ್ಕಾಗಿ ಪ್ರತಿನಿತ್ಯ ಕಾರಾಗೃಹ ಆವರಣದಲ್ಲಿ ವಾಲಿಬಾಲ್, ಬ್ಯಾಂಡ್ಮಿಟನ್ ಸೇರಿ ಇತರೆ ಕ್ರೀಡಾಚಟುವಟಿಕೆಗಳನ್ನು ಏರ್ಪಡಿಸಲಾಗುತ್ತಿದೆ.

ಕೈದಿಗಳು ಕಾರಾಗೃ ಹದಿಂದ ಬಿಡುಗಡೆಯಾದ ನಂತರ ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗದೇ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲಿ ಎಂಬ ಉದ್ದೇಶದಿಂದ ಪ್ಲಂಬಿಂಗ್, ಎಲೆಕ್ಟ್ರಿಷಿಯನ್ ಸೇರಿ ಇತರ ಕೌಶಲ ತರಬೇತಿ ನೀಡಲಾಗುತ್ತಿದೆ. ವಾರಕ್ಕೊಮ್ಮೆ ಆರೋಗ್ಯ ತಪಾಸಣೆ ಶಿಬಿರ ನಡೆಸಿ, ಕೈದಿಗಳ ಆರೋಗ್ಯದ ಕಾಳಜಿವಹಿಸಲಾಗುತ್ತಿದೆ.

ತಾಲ್ಲೂಕು ಉಪ ಕಾರಾಗೃಹದಲ್ಲಿ ಗ್ರಂಥಾಲಯ ಮಾಡಲಾಗಿದೆ. 200ಕ್ಕೂ ಅಧಿಕ ಪುಸ್ತಕಗಳಿವೆ. ಪುಸ್ತಕ ಓದಲು ಕೈದಿಗಳಿಗೆ ಮುಕ್ತ ಅವಕಾಶ ನೀಡಲಾಗಿದೆ. ಬಂಧಿಗಳ ಮೂಲಕ ಪ್ರತಿವಾರ ಶ್ರಮದಾನ ಮಾಡಿಸಲಾಗುತ್ತಿದೆ. ನವಚೇತನ ಕಾರ್ಯಕ್ರಮದಡಿಯಲ್ಲಿ ಅನಕ್ಷರಸ್ಥ ಕೈದಿಗಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಇಲ್ಲಿನ ಜೈಲಿನ ಸಿಬ್ಬಂದಿ ಮಾದರಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಇದಕ್ಕಾಗಿ ವಾರಪೂರ್ತಿ ವೇಳಾಪಟ್ಟಿ ರೂಪಿಸಿದ್ದು, ಆ ಎಲ್ಲ ಅಂಶಗಳನ್ನು ಪರಿಗಣಿಸಿ ರಾಜ್ಯದ ಉಪ ಕಾರಾಗೃಹಗಳಲ್ಲಿಯೇ ರಾಜ್ಯಮಟ್ಟದ ದ್ವಿತೀಯ ಸ್ಥಾನದ ಪ್ರಶಸ್ತಿಯ ಗರಿಮೆ ಲಭಿಸಿದೆ. ಮೊದಲ ಸ್ಥಾನ ರಾಮನಗರಕ್ಕೆ ಲಭಿಸಿದೆ.

ತಾಲ್ಲೂಕು ಉಪ ಕಾರಾಗೃಹದಲ್ಲಿ ಇಲಾಖೆ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಹಾಗೂ ಕೈದಿಗಳ ಮನಪರಿವರ್ತನೆಗೆ ಕೈಗೊಂಡ ಕಾರ್ಯಗಳನ್ನು ನಮ್ಮ ಇಲಾಖೆ ಮೆಚ್ಚಿಕೊಂಡಿದ್ದು, ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ. ಮತ್ತಷ್ಟು ಕ್ರಿಯಾಶೀಲವಾಗಿ ಕರ್ತವ್ಯ ನಿಭಾಯಿಸಲು ಪ್ರಶಸ್ತಿ ಪ್ರೇರಣೆ ನೀಡಿದೆ ಎಂದು ಅಧೀಕ್ಷಕಿ ಯಲ್ಲಮ್ಮ ಹರವಿ ಅವರು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-32-1623866530

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.