ಲಿಂಗಸುಗೂರು: ಪಟ್ಟಣದಲ್ಲಿ ಅನುಷ್ಠಾನಗೊಳ್ಳುತ್ತಿರುವ ಅಮೃತ್-2 ಕುಡಿಯುವ ನೀರಿನ ಯೋಜನೆಯ ಕಾಮಗಾರಿ ವೇಗ ಆಮೆ ಗತಿಯಲ್ಲಿ ಸಾಗಿದೆ.

ಪಟ್ಟಣಕ್ಕೆ 24X7 ಕುಡಿಯುವ ನೀರು ಪೂರೈಕೆಗಾಗಿ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತದ ಸಹಭಾಗಿತ್ವದಲ್ಲಿ ಅಮೃತ್-2 ಯೋಜನೆಯಡಿಯಲ್ಲಿ ₹93.76 ಕೋಟಿ ವೆಚ್ಚದಲ್ಲಿ ಕುಡಿಯಿವ ನೀರಿನ ಯೋಜನೆಗೆ 2023 ಫೆ.4ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ತುಮಕೂರು ಮೂಲದ ಕಂಪನಿಯೊಂದು 2024 ಮೇ 18ರಂದು ಗುತ್ತಿಗೆ ಪಡೆದು ಕಾಮಗಾರಿ ಆರಂಭಿಸಿದೆ. 5 ಲಕ್ಷ ಲೀಟರ್ನ 2, 10 ಲಕ್ಷ ಲೀಟರ್ನ 2, ಹಾಗೂ 15 ಲಕ್ಷ ಲೀಟರ್ ನೀರು ಸಾಮರ್ಥ್ಯ ಸೇರಿ ಒಟ್ಟು 5 ಹೊಸ ನೀರಿನ ಮೇಲ್ತೊಟ್ಟಿಗಳನ್ನು ನಿರ್ಮಾಣ ಮಾಡಬೇಕಿದೆ. ಪಟ್ಟಣದಲ್ಲಿ 149.17 ಕಿ.ಮೀ ಉದ್ದದ ವಿತರಣಾ ಪೈಪ್ಲೈನ್ ಅಳವಡಿಸುವ, ಪಟ್ಟಣದ 6,485 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸುವ ಮತ್ತು ಮುಂದಿನ 2,055ರಲ್ಲಿನ ಜನಸಂಖ್ಯೆ ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ಜಾರಿಗೊಳಿಸುವ ಮಹತ್ವದ ಯೋಜನೆಯಾಗಿದೆ. ಕಸಬಾಲಿಂಗಸುಗೂರು ಹೊರತು ಪಡಿಸಿ ಪ್ರತಿ ನಾಗರಿಕರಿಗೆ ಪ್ರತಿದಿನ 135 ಲೀಟರ್ ನೀರು ಒದಗಿಸುವ ಯೋಜನೆ ಇದಾಗಿದೆ.

ಮಂದಗತಿಯ ಕಾಮಗಾರಿ: ನೀರಿನ ಮೇಲ್ತೊಟ್ಟಿ ನಿರ್ಮಾಣ, ಮುಖ್ಯ ಪೈಪ್ಲೈನ್ ಮತ್ತು ಮನೆ ಮನೆಗೆ ಪೈಪ್ಲೈನ್ ಕಾಮಗಾರಿ ಮಂದಗತಿಯಲ್ಲಿ ನಡೆದಿದೆ. ಗುತ್ತಿಗೆ ಸಮಯ 24 ತಿಂಗಳು ನಿಗದಿ ಮಾಡಲಾಗಿದೆ. ಆದರೆ ಈಗಾಗಲೇ 23 ತಿಂಗಳು ಕಳೆದರೂ ಕಾಮಗಾರಿಯಲ್ಲಿ ಪ್ರಗತಿ ಕಂಡಿಲ್ಲ. ಹಲವು ಕಡೆಗಳಲ್ಲಿ ಪೈಪ್ಲೈನ್ ಅಳವಡಿಕೆಗೆ ಗುಂಡಿ ತೋಡಿದ್ದು, ಮುಚ್ಚದೇ ಇದ್ದುದರಿಂದ ನೀರು ಸಂಗ್ರಹಗೊಂಡು ಸಮಸ್ಯೆಯಾಗಿದೆ.

ಪಾವತಿಯಾಗದ ಬಿಲ್: ಕಾಮಗಾರಿ ಆರಂಭವಾಗಿ 23 ತಿಂಗಳು ಕಳೆಯುತ್ತಿದ್ದರೂ ಗುತ್ತಿಗೆ ಕಂಪನಿಗೆ ಒಂದೇ ಬಿಲ್ ಪಾವತಿಸಲಾಗಿದೆ. ಇನ್ನೂ ಎರಡು ಬಿಲ್ ಪಾವತಿ ಆಗಿಲ್ಲ. ಹೀಗಾಗಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸುವ ಚಿಂತನೆ ಮಾಡಲಾಗಿತ್ತು. ಆದರೆ ಕೆಲವು ಅಧಿಕಾರಿಗಳು ಗುತ್ತಿಗೆ ಕಂಪನಿ ಮನವೊಲಿಸಿ ಕಾಮಗಾರಿ ಆರಂಭಿಸಲಾಗಿತ್ತು. ಮಾರ್ಚ್ ಅಂತ್ಯದಲ್ಲಿ ಸರ್ಕಾರ ಬಿಲ್ ಪಾವತಿ ಮಾಡುತ್ತೆ ಎಂಬ ಭರವಸೆಯಿತ್ತು. ಆದರೆ ಬಿಲ್ ಪಾವತಿಯಾಗಿಲ್ಲ. ಹೀಗಾಗಿ ಕಾಮಗಾರಿ ಮಂದಗತಿಯಲ್ಲಿದೆ ಎನ್ನಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-32-640401376

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.