ನಾಗರಾಜ ಗೊರೇಬಾಳ

ಲಿಂಗಸುಗೂರು: ಮಧ್ಯಪ್ರಾಚ್ಯದಲ್ಲಿ ಯುದ್ಧದ ಬಿಕ್ಕಟ್ಟಿನ ಪರಿಣಾಮ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಕೊರತೆಯಿಂದ ಹೋಟೆಲ್ ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ. ಹೋಟೆಲ್ಗಳಲ್ಲಿನ ಆಹಾರ ಪದಾರ್ಥಗಳ ದರ ಹೆಚ್ಚಿಸಿದ್ದು, ಗ್ರಾಹಕರ ಜೇಬಿಗೆ ಬಿಸಿ ತಟ್ಟಿದೆ.

ಇರಾನ್-ಇಸ್ರೇಲ್ ಯುದ್ಧ ಬಿಕ್ಕಟ್ಟಿನ ಪರಿಣಾಮದಿಂದಾಗಿ ಮಾ.11ರಿಂದ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಇದರಿಂದ ಹೋಟೆಲ್ಗಳು, ಬೀದಿ ಬದಿ ಹೋಟೆಲ್, ವಿವಿಧ ತಿಂಡಿ ತಯಾರಿಸುವ ಅಂಡಿಗಳು ಪರಿಣಾಮ ಎದುರಿಸುವಂತಾಗಿದೆ. ಹೋಟೆಲ್ ಮಾಲಿಕರು ವಾಣಿಜ್ಯ ಬಳಕೆ ಸಿಲಿಂಡರ್ ಬುಕ್ಕಿಂಗ್ ಮಾಡಿದರೂ ಸ್ಟಾಕ್ ಇಲ್ಲ ಎಂಬ ಉತ್ತರ ಏಜೆನ್ಸಿಗಳಿಂದ ಕೇಳಿ ಬರುತ್ತಿದೆ. ಆದರೆ, ಗೃಹ ಬಳಕೆ ಸಿಲಿಂಡರ್ಗಳಿಂದಲೇ ಹೋಟೆಲ್ಗಳನ್ನು ನಡೆಸಲಾಗುತ್ತಿದೆ.

ಕಾಳಸಂತೆಯಲ್ಲಿ ಮಾರಾಟ: ಹಲವು ಹೋಟೆಲ್ ಹಾಗೂ ಬೀದಿ ಬದಿ ಹೋಟೆಲ್ ಮಾಲೀಕರು ಗೃಹ ಬಳಕೆ ಸಿಲಿಂಡರ್ ಒಂದಕ್ಕೆ ನಿಗದಿತ ದರಕ್ಕಿಂತ ಹೆಚ್ಚುವರಿ ₹ 500 ನೀಡಿ, ಗ್ಯಾಸ್ ಖರೀದಿಸುತ್ತಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಹೆಚ್ಚುವರಿ ಖರ್ಚಿನ ಪರಿಣಾಮವಾಗಿ ಹೋಟೆಲ್ನಲ್ಲಿ ದೊರೆಯುವ ಆಹಾರ ಪದಾರ್ಥಗಳ ದರ ಏರಿಸುವ ಅನಿವಾರ್ಯ ಹೋಟೆಲ್ ಮಾಲೀಕರಿಗೆ ಎದುರಾಗಿದೆ. ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಸಿಲಿಂಡರ್ ಖರೀದಿಸಬೇಕಾದ ಅನಿವಾರ್ಯ ಎದುರಾಗಿದ್ದರಿಂದ ಹಲವು ಹೋಟೆಲ್ಗಳು ಆಹಾರ ಪದಾರ್ಥಗಳ ದರ ಹೆಚ್ಚಿಸಿದ್ದು, ಗ್ರಾಹಕರಿಗೂ ಬಿಸಿ ತಟ್ಟಿದಂತಾಗಿದೆ.

₹10-₹20 ದರ ಹೆಚ್ಚಳ: ಪಟ್ಟಣದ ಬಸ್ ನಿಲ್ದಾಣದ ಬಳಿ, ಗಡಿಯಾರ ಚೌಕ್ ಸೇರಿದಂತೆ ಇನ್ನಿತರ ಕಡೆಗಳಲ್ಲಿರುವ ಹೋಟೆಲ್ ಗಳಲ್ಲಿನ ಹಾಗೂ ಬೀದಿ ಬದಿಯಲ್ಲಿರುವ ಸಣ್ಣ ಪುಟ್ಟ ಹೋಟೆಲ್ಗಳಲ್ಲಿನ ಊಟ, ತಿಂಡಿಗಳ ಮೇಲೆ ಸುಮಾರು ₹10 ರಿಂದ ₹20 ಹೆಚ್ಚುವರಿ ದರ ವಿಧಿಸಲಾಗಿದೆ. ಕೆಲವು ಹೋಟೆಲ್ ಮಾಲೀಕರು ಹಳೆಯ ದರದ ಮಾಹಿತಿ ಪಕ್ಕದಲ್ಲೇ ಹೊಸ ದರದ ಫಲಕ ಅಳವಡಿಸಿದ್ದಾರೆ. ಗ್ಯಾಸ್ ಕೊರತೆ ಮತ್ತು ಹೆಚ್ಚುತ್ತಿರುವ ಖರ್ಚಿನ ಕಾರಣ ಆಹಾರ ಪದಾರ್ಥ ದರ ಏರಿಕೆ ಮಾಡಲಾಗಿದೆ ಎಂಬುದು ಹೋಟೆಲ್ ಮಾಲೀಕರ ವಾದವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-32-940468152

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.