ಲಿಂಗಸುಗೂರು: ಶನಿವಾರ ರಾತ್ರಿಯಿಡೀ ಸುರಿದ ಮಳೆಗೆ ತಾಲ್ಲೂಕಿನ ಜಾಗಿರನಂದಿಹಾಳ ಹಳ್ಳ ತುಂಬಿ ಹರಿದ ಕಾರಣ ರಸ್ತೆ ಸಂಪರ್ಕ ಕಡಿತಗೊಂಡು ಗ್ರಾಮಸ್ಥರು ತೊಂದರೆ ಅನುಭವಿಸಿದರು.

ಶನಿವಾರ ರಾತ್ರಿ 8 ಗಂಟೆಗೆ ಗುಡುಗು-ಮಿಂಚು, ಬಿರುಗಾಳಿಯೊಂದಿಗೆ ಆರಂಭವಾದ ಮಳೆ ಭಾನುವಾರ ಬೆಳಗಿನ ಜಾವದವರೆಗೂ ಸುರಿದು ಅವಾಂತರ ಸೃಷ್ಟಿಸಿತು. ಹಲವೆಡೆ ಮರಗಳು ಧರೆಗುರುಳಿದ ಕಾರಣ ಶನಿವಾರ ರಾತ್ರಿಯಿಂದ ಭಾನುವಾರ ಮಧ್ಯಾಹ್ನದವರೆಗೆ ವಿದ್ಯುತ್ ವ್ಯತ್ಯಯ ಉಂಟಾಯಿತು.

ತಾಲ್ಲೂಕಿನ ಜಾಗಿರನಂದಿಹಾಳ ಗ್ರಾಮದ ಬಳಿ ಹಳ್ಳ ಭರ್ತಿಯಾಗಿ ಭಾನುವಾರ ಸಂಜೆಯವರೆಗೆ ಆನೆಹೊಸೂರು ಮಾರ್ಗದ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಜಾಗಿರನಂದಿಹಾಳ ಗ್ರಾಮಸ್ಥರು ಹಿರೇಜಾವೂರು ಮಾರ್ಗದ ಮೂಲಕ ಸಂಚರಿಸುವಂತಾಯಿತು. ಸಿಡಿಲು ಬಡಿದು ತಾಲ್ಲೂಕಿನ ಗುಂತಗೋಳ ಗ್ರಾಮದಲ್ಲಿ ಹನುಮಂತ ಅವರ ಎತ್ತು, ಶೀಲಹಳ್ಳಿ ಗ್ರಾಮದ ದುರಗಮ್ಮ ಅವರಿಗೆ ಸೇರಿದ ಆಕಳು, ಎತ್ತು ಸಾವನ್ನಪ್ಪಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-32-906899541

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.