ಲಿಂಗಸುಗೂರು: ‘ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ನೀವೇ ಸ್ವಯಂ ಪ್ರೇರಿತವಾಗಿ ಜಾಗ ಖಾಲಿ ಮಾಡಿ. ಇಲ್ಲದಿದ್ದರೆ ಅಮಾನತಿಗೆ ಶಿಫಾರಸು ಮಾಡುತ್ತೇನೆ’ ಎಂದು ಶಾಸಕ ಮಾನಪ್ಪ ವಜ್ಜಲ್ ಪುರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಪುರಸಭೆ ಕಚೇರಿಯಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ಅವರು,‘ಪುರಸಭೆ ವ್ಯಾಪ್ತಿಯ 128 ಬೋರ್ವೆಲ್, ನೀರಿನ ಟ್ಯಾಂಕ್, ಕೆರೆ ಭರ್ತಿಯಾಗಿದ್ದರೂ ಮೂರು ದಿನಗಳಿ ಗೊಮ್ಮೆ ಮನೆಗಳಿಗೆ ನೀರು ಸರಬರಾಜು ಮಾಡುತ್ತಿರುವುದು ಸರಿಯೇ? ಸಾರ್ವಜನಿಕರನ್ನು ನೀರಿಗಾಗಿ ಪರದಾಡಿಸುವುದರಿಂದ ನಿಮಗೆ ಖುಷಿ ಸಿಗುತ್ತಾ? ನೀರು ಕೊಡಿ ಎಂದು ಜನ ನಮ್ಮ ಮನೆಗೆ ಬರುತ್ತಿದ್ದಾರೆ. ಕೂಡಲೇ ಏನೇ ಸಮಸ್ಯೆಯಿದ್ದರೂ ಸರಿಪಡಿಸಿಕೊಂಡು ಪ್ರತಿದಿನವೂ ನೀರು ಸರಬರಾಜು ಮಾಡಬೇಕು’ ಎಂದು ಸಿಬ್ಬಂದಿಗೆ ತಾಕೀತು ಮಾಡಿದರು.

ಚರಂಡಿಯಲ್ಲಿ ಹೂಳು ತೆಗೆಯದಿರುವುದು, ವಾರ್ಡ್ಗಳಲ್ಲಿ ಸ್ವಚ್ಛತೆ ಕೊರತೆ, ಬೀದಿ ನಾಯಿ ಹಾಗೂ ಬಿಡಾಡಿ ದನಗಳ ಹಾವಳಿಯಿಂದ ಬೇಸತ್ತ ಜನರು ನಮಗೆ ದೂರು ನೀಡಿದ್ದಾರೆ. ನಿಮ್ಮ ಕೆಲಸ ನೀವು ಸರಿಯಾಗಿ ಮಾಡದೇ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವುದು ಸರಿಯಲ್ಲ. ನೀವು ನಿಮ್ಮ ಕೆಲಸದಲ್ಲಿ ಬೇಜವಾಬ್ದಾರಿ ತೋರುತ್ತಿರುವುದರಿಂದ ಪಟ್ಟಣದಕ್ಕೆ ಕೆಟ್ಟ ಹೆಸರು ಬಂದಂತಾಗಿದೆ ಎಂದು ಶಾಸಕ ವಜ್ಜಲ್ ಪರಿಸರ ಎಂಜಿನಿಯರ್ ಸುಜಾತ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಕರಡಕಲ್ ಕೆರೆ ದಡದಲ್ಲಿ ಬೀದಿ ದೀಪಗಳನ್ನು ಹಾಕಿಸಬೇಕು. ಪ್ರತಿ ವಾರ್ಡ್ನಲ್ಲಿ ಬೀದಿ ದೀಪಗಳು ಇಲ್ಲದೆ ಜನ ಕತ್ತಲಲ್ಲಿ ವಾಸ ಮಾಡುವಂತಾಗಿದೆ. ನೀವು ಪ್ರತಿದಿನ ಸಂಜೆ ಒಂದೊಂದು ವಾರ್ಡ್ನಲ್ಲಿ ಸಂಚಾರ ಮಾಡಿ ಎಲ್ಲಿ ಬೀದಿ ದೀಪಗಳು ಇಲ್ಲವೋ ಅಲ್ಲಿ ದೀಪಗಳ ವ್ಯವಸ್ಥೆ ಮಾಡಬೇಕು. ನೀವು ಇಲ್ಲಿ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ನೀವೇ ಜಾಗ ಖಾಲಿ ಮಾಡಿ. ನಿಮ್ಮ ವಿರುದ್ಧ ಸಾಕಷ್ಟು ದೂರುಗಳು ಬಂದಿವೆ. ಅಮಾನತಿಗೆ ಶಿಫಾರಸು ಮಾಡಲಾಗುವುದು’ ಎಂದು ಸಿಬ್ಬಂದಿ ಬಸವರಾಜ ಅವರಿಗೆ ಎಚ್ಚರಿಕೆ ನೀಡಿದರು.

ಪುರಸಭೆ ವ್ಯಾಪ್ತಿಯಲ್ಲಿರುವ 230 ಉದ್ಯಾನಗಳ ಜಾಗ ಒತ್ತುವರಿ ಮಾಡಲಾಗುತ್ತಿದೆ. ಕೆಲವರು ನಿವೇಶನ ಸಂಖ್ಯೆ ನೀಡಿ ಮಾರಾಟ ಮಾಡುತ್ತಿದ್ದಾರೆ ಎನ್ನುವ ದೂರುಗಳು ಬಂದಿವೆ. ಕೂಡಲೇ ಎಲ್ಲಾ ಉದ್ಯಾನಗಳನ್ನು ಹದ್ದುಬಸ್ತು ಮಾಡಿ ಅಭಿವೃದ್ಧಿ ಪಡಿಸುವಂತೆ ಮುಖ್ಯಾಧಿಕಾರಿ ನಟರಾಜ್ಗೆ ಸೂಚನೆ ನೀಡಿದರು.

ಆಡಳಿತಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ಬಸವಣೆಪ್ಪ ಕಲಶೆಟ್ಟಿ ಮಾತನಾಡಿ,‘ ಈಗಾಗಲೇ 25 ಉದ್ಯಾನಗಳ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ. ಜೂನ್ ತಿಂಗಳಿನಿಂದ ಅರಣ್ಯ ಇಲಾಖೆಯಿಂದ ಸಸಿ ನಡೆಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.