ಲಿಂಗಸುಗೂರು: ಪುರಸಭೆ ವ್ಯಾಪ್ತಿಯ ಕಸಬಾಲಿಂಗಸುಗೂರು ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು, ಮಂಗವೊಂದು ಶನಿವಾರ ಮಹಿಳೆಯೊಬ್ಬರ ಕೈಗೆ ಕಚ್ಚಿ ಗಾಯಗೊಳಿಸಿದೆ.

ಕಸಬಾಲಿಂಗಸುಗೂರಿನ ಚಲುವಾದಿ ಓಣಿಯಲ್ಲಿನ ಮನೆಗಳಿಗೆ ಮಂಗಗಳು ನುಗ್ಗುತ್ತಿರುವ ಕಾರಣ ಗ್ರಾಮಸ್ಥರು ಕಂಗಲಾಗಿದ್ದಾರೆ. ಶನಿವಾರ ಗದ್ದೆಮ್ಮ ಕುಪ್ಪಣ್ಣ ಎಂಬುವವರಿಗೆ ಮಂಗ ಕಚ್ಚಿ ಗಾಯಗೊಳಿಸಿದ್ದರಿಂದ ಅವರನ್ನು ಕೂಡಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ.

ಮಂಗಗಳ ಹಾವಳಿಯಿಂದ ಒಬ್ಬರೇ ತಿರುಗಾಡುವಂತಿಲ್ಲ. ಮಹಿಳೆಯರು, ಮಕ್ಕಳನ್ನು ಕಂಡರೆ ಮಂಗಗಳು ಅವರ ಮೇಲೆರಗಿ ಕಚ್ಚುತ್ತವೆ. ಗ್ರಾಮದಲ್ಲಿ ಅನೇಕ ಮಂಗಗಳಿದ್ದು, ಇದರಿಂದ ನಿವಾಸಿಗಳು ಭಯಭೀತರಾಗಿದ್ದಾರೆ. ಮಂಗಗಳನ್ನು ಬೇರೆ ಕಡೆ ಬಿಟ್ಟು ಬರಬೇಕು ಎಂದು ಚಿದಾನಂದ ಚಲುವಾದಿ ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-32-1330356871

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.