ಲಿಂಗಸುಗೂರು: ತಾಲ್ಲೂಕಿನ ರೋಡಲಬಂಡಾ(ಯುಕೆಪಿ) ಗ್ರಾಮದಲ್ಲಿ ಮುಸ್ಲಿಂ ಯವತಿಯೊಬ್ಬರು ಗೋವುಗಳ ಸೇವೆ ಜೊತೆ ಪಂಚಗವ್ಯ ಉತ್ಪಾದನೆಯಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಜೀವನ ಸಾಗಿಸುತ್ತ ಇತರೆ ಮಹಿಳೆಯರಿಗೆ ಮಾದರಿಯಾಗಿದ್ದಾರೆ.

ಗ್ರಾಮದ ಸಿರಿನ್ ಬಾನು ತಮ್ಮ ತಂದೆ ಅಗಲಿಕೆಯಿಂದಾಗಿ ಸ್ಟಾಫ್ ನರ್ಸ್ ಕೆಲಸ ಬಿಡುವಂತಾಯಿತು. ಚಿಕ್ಕಂದಿನಿಂದಲೂ ಗೋವುಗಳ ಮೇಲೆ ಪ್ರೀತಿ, ಸಾಕಾಣಿಕೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರಿಂದ ಅವರು ಯುಟ್ಯೂಬ್ ಮೂಲಕ ಕನ್ಹೇರಿ ಮಠದಲ್ಲಿ ಗೋವುಗಳಿಂದ ತಯಾರಿಸುವ ಉತ್ಪನ್ನಗಳ ಹಾಗೂ ವಿವಿಧೆಡೆ ಪರಿಣಿತರನ್ನು ಸಂಪರ್ಕಿಸಿ ಪಂಚಗವ್ಯ ಉತ್ಪನ್ನಗಳ ತಯಾರಿಕೆಗೆ ಮಾಹಿತಿ ಪಡೆದುಕೊಂಡು ತಮ್ಮ ಮನೆಯಲ್ಲಿ ಜವಾರಿ ಹಸು ಹಾಗೂ ಮಲೆನಾಡು ಗಿಡ್ಡ ಹಸುಗಳನ್ನು ಸಾಕಾಣಿಕೆ ಮಾಡಿ ಹಸುವಿನಿಂದ ದೊರೆಯುವ ಹಾಲು, ಮೊಸರು, ತುಪ್ಪ, ಗೋಮೂತ್ರ ಮತ್ತು ಸಗಣಿ ಪದಾರ್ಥಗಳಿಂದ ಆಯುರ್ವೇದ ಆರೋಗ್ಯದ, ಧಾರ್ಮಿಕ ಆಚರಣೆಗಳು, ಸಾವಯವ ಕೃಷಿ, ಮತ್ತು ಆರೋಗ್ಯವರ್ಧಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ.

ಅವರಲ್ಲಿದ್ದ ನಾಲ್ಕು ಹಸುಗಳನ್ನು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಗೋಶಾಲೆಗೆ ನೀಡಿದ್ದಾರೆ.

12 ಉತ್ಪನ್ನ ತಯಾರಿಕೆ: ಸಂಗಮೇಶ್ವರ ದೇಸಿ ಉತ್ಪನ್ನಗಳ ಕೇಂದ್ರ ಹಾಗೂ ರಾಘವೇಂದ್ರ ಸ್ವಾಮಿ ಗೋಶಾಲೆ ಹೆಸರಿನಲ್ಲಿ ಗೋಮಯ ಸಾಬೂನು, ಪಂಚಗವ್ಯ ಸಾಬೂನು, ಅಗ್ನಿಹೋತ್ರ ಕುಳ್ಳು, ಪಾತ್ರೆ ತೊಳೆಯುವ ಪುಡಿ, ಗಣೇಶ ಮತ್ತು ದೇವಿ ವಿಗ್ರಹಗಳು, ಧೂಪದ ಬತ್ತಿಗಳು, ಮೊಳಕಾಲು ನೋವಿಗೆ ಎಣ್ಣೆ, ತಲೆ ಕೂದಲಿಗೆ ಎಣ್ಣೆ ಮತ್ತು ಶಾಂಪೂ, ದಂತ ಮಂಜನ, ವಿಭೂತಿ, ಗೋಮಯ ಚೂರ್ಣ,ಗೋಮೂತ್ರ ಅರ್ಕ, ಗೋಮಯ ಆಲಂಕಾರಿಕ ವಸ್ತುಗಳು, ಹೀಗೆ ಹತ್ತು ಹಲವು ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಕೆಲವೆಡೆ ಉತ್ಸವ, ಜಾತ್ರೆ ಸಂದರ್ಭಗಳಲ್ಲಿ ಮಳಿಗೆಗಳನ್ನು ಹಾಕಿ ಪಂಚಗವ್ಯ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ ಹಾಗೂ ಕೋರಿಯರ್ ಮೂಲಕ ಬರುವ ಆರ್ಡರ್ಗಳನ್ನು ಕಳಿಸಲಾಗುತ್ತಿದೆ.

‘ಗೋ ಸೇವೆ ತೃಪ್ತಿ ತಂದಿದೆ’

ಮಹಿಳೆಯರು ಒಬ್ಬರ ಕೈಕೆಳಗೆ ಕೆಲಸ ಮಾಡಬೇಕಾದರೆ ಹಲವಾರು ಒತ್ತಡಗಳು ಇರುತ್ತವೆ. ಮನಸ್ಸಿಲ್ಲದಿದ್ದರೂ ಪರಿಸ್ಥಿತಿಗೆ ಮಣಿದು ದುಡಿಯಬೇಕಾಗುತ್ತದೆ. ಅದರ ಬದಲು ನಾವೇ ಸ್ವಂತ ಉದ್ಯೋಗ ಮಾಡಿದರೆ ಹೇಗೆ ಎಂಬ ಚಿಂತನೆ ಇಟ್ಟುಕೊಂಡು ಗೋವುಗಳಿಂದ ವಿವಿಧ ಉತ್ಪನ್ನ ತಯಾರಿಸಿ ಮಾರಾಟ ಮಾಡುತ್ತಿದ್ದೇನೆ. ಗೋವುಗಳ ಸೇವೆ ನನಗೆ ತೃಪ್ತಿ ತಂದಿದೆ’ ಎಂದು ಸಿರಿನ್ ಬಾನು ಹೇಳುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-32-1452057088

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.