ಲಿಂಗಸುಗೂರು: ಪಟ್ಟಣದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಘಟಕದಲ್ಲಿ ಹೊಸ ಬಸ್ಗಳಿಗಿಂತ ಗುಜರಿಗೆ ಹಾಕುವ ಬಸ್ಗಳು, ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ಬಸ್ಗಳ ಸಂಖ್ಯೆ ಯೇ ಹೆಚ್ಚು. ಇಂಥ ಬಸ್ಗಳಲ್ಲಿ ತಾಲ್ಲೂಕಿನ ಜನತೆ ನಿತ್ಯವೂ ಪ್ರಯಾಣಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣ ಸೇರಿ ತಾಲ್ಲೂಕಿನ ಹಟ್ಟಿ, ಮುದಗಲ್ ಬಸ್ ನಿಲ್ದಾಣಗಳ ಮುಖಾಂತರ ತಾಲ್ಲೂಕಿನ ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಗಳಿಗೆ ಒಟ್ಟು 131 ಮಾರ್ಗಗಳಲ್ಲಿ 131 ಬಸ್ಗಳು ಪ್ರತಿನಿತ್ಯ 47,500 ಕಿಲೊ ಮೀ ಟರ್ ಕಾರ್ಯಾಚರಣೆ ಮಾಡುತ್ತಿವೆ.

9 ಲಕ್ಷ ಕಿ.ಮೀಗೂ ಹೆಚ್ಚು ಸಂಚರಿಸಿದ 85 ಬಸ್ಗಳು: ಪಟ್ಟಣದ ಬಸ್ ಘಟಕದಲ್ಲಿರುವ 131 ಬಸ್ಗಳಲ್ಲಿ 85 ಬಸ್ಗಳು 9 ಲಕ್ಷಕ್ಕಿಂತ ಹೆಚ್ಚು ಕಿ.ಮೀ ಓಡಿವೆ. ಇದರಲ್ಲಿ 20 ಬಸ್ಗಳು 14-15 ಲಕ್ಷ ಕಿ.ಮೀ ಓಡಿವೆ. ಓಡುತ್ತಲೇ ಇವೆ. ಆದರೂ ಈ ಬಸ್ಗಳೇ ಘಟಕಕ್ಕೆ ಅನಿವಾರ್ಯವಾಗಿವೆ.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 131 ಬಸ್ಗಳಲ್ಲಿ 67 ಬಸ್ಗಳ ಆಯಸ್ಸು ಈಗಾಗಲೇ 8-15 ವರ್ಷ ಕಳೆದಿವೆ. ಈ ಬಸ್ಗಳನ್ನೇ ದುರಸ್ತಿ ಮಾಡಿ ಓಡಿಸಲಾಗುತ್ತಿದೆ. ಹಳೆಯ ಹಾಗೂ ಹೆಚ್ಚು ಕಿ.ಮೀ ಓಡಿದ ಬಸ್ಗಳು ತುಂಬಿರುವ ಘಟಕಕ್ಕೆ ಡಿಸೆಂಬರ್ 2023ರಿಂದ 2025ರ ಅವಧಿಯಲ್ಲಿ 34 ಹೊಸ ಬಸ್ ಮಂಜೂರಾಗಿವೆ. ಈ ಅವಧಿಯಲ್ಲಿ 15 ವರ್ಷ ಮೀರಿದ ಬಸ್ ಗಳನ್ನು ಗುಜರಿಗೆ ಹಾಕಲಾಗಿದೆ.

‘ಇಲ್ಲಿಯ ಸಾರಿಗೆ ಘಟಕದಲ್ಲಿ ಒಡೆದ ಗ್ಲಾಸ್, ಮುರಿದ ಕುರ್ಚಿ ಹೊಂದಿದ ಮತ್ತು ತುಕ್ಕು ಹಿಡಿದ ಬಸ್ಗಳೇ ಸಂಚರಿಸುತ್ತವೆ. ಬಸ್ಗಳು ರಸ್ತೆಯಲ್ಲಿ ಕೆಟ್ಟು ನಿಂತ ಉದಾಹರಣೆಗಳಿವೆ. ಈ ಬಸ್ಗಳನ್ನು ಹತ್ತಿ ಊರಿಗೆ ಹೋಗಲು ಹೆದರಿಕೆಯಾಗುತ್ತದೆ’ ಎಂದು ಪ್ರಯಾಣಿಕರು ತೀವ್ರ ಬೇಸರವನ್ನು ವ್ಯಕ್ತಪಡಿಸುತ್ತಾರೆ

‘ಗ್ರಾಮೀಣ ಪ್ರದೇಶದಿಂದ ಪಟ್ಟಣದ ಶಾಲಾ–ಕಾಲೇಜು ಬರುವ ವಿದ್ಯಾರ್ಥಿಗಳು ತೊಂದರೆ ಎದುರಿಸುತ್ತಿದ್ದಾರೆ. ಸರಿಯಾದ ಹಾಗೂ ಸುರಕ್ಷಿತ ಬಸ್ ಸಂಚಾರಕ್ಕೆ ಆದ್ಯತೆ ನೀಡಬೇಕು’ ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ನಿರ್ವಹಣೆ ಕೊರತೆ

ಒಂದು ಲಕ್ಷ ಕಿ.ಮೀ ಓಡಿದ ಬಸ್ಗಳಲ್ಲಿನ ಡಿಯಾನ್ ವಾಲ್, ಹೇರ್ ಕಂಪ್ರೆಸರ್ ಬದಲಾಯಿಸಿ ಹೊಸದಾಗಿ ಅಳವಡಿಸಬೇಕು. ಆದರೆ, ಒಂದೂವರೆ ಲಕ್ಷ ಕಿ.ಮೀ ಓಡಿದರೂ ಬಸ್ಗಳ ನಿರ್ವಹಣೆ ಕಾರ್ಯ ಸಮರ್ಪಕವಾಗಿ ಆಗುತ್ತಿಲ್ಲ ಎನ್ನಲಾಗಿದೆ. ಬಸ್ಗಳ ದುರಸ್ತಿಗೆ ಬಿಡಿ ಭಾಗಗಳು ಘಟಕಕ್ಕೆ ಸಕಾಲಕ್ಕೆ ಪೂರೈಕೆಯಾಗುತ್ತಿಲ್ಲ ಎನ್ನಲಾಗಿದೆ.

ಗಗನ ಕುಸುಮ

ಹೊಸ ಬಸ್ಗಳಿಗೆ ಬೇಡಿಕೆ ಸಲ್ಲಿಸಿದರೂ ಮಂಜೂರಾಗುತ್ತಿಲ್ಲ. ಬದಲಾಗಿ ಜಿಲ್ಲೆ ಹಾಗೂ ಬೇರೆ ಜಿಲ್ಲೆಗಳಲ್ಲಿ ಬಳಕೆ ಮಾಡಿದ ಬಸ್ಗಳನ್ನು ನೀಡುತ್ತಿರುವ ಕಾರಣ ಹಳೆ ಬಸ್ಗಳಲ್ಲಿಯೇ ತಾಲ್ಲೂಕಿನ ಜನ ಪ್ರಯಾಣ ಮಾಡಬೇಕಾದ ದುಸ್ಥಿತಿ ಇದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-32-973911191

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.