ಲಿಂಗಸುಗೂರು: ಸರ್ಕಾರದ ನಿಯಮ ಖಾಸಗಿ ಉಲ್ಲಂಘಿಸುವ ಟ್ರಾವೆಲ್ಸ್ಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಶನಿವಾರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ರಾತ್ರಿ ಸಂಚರಿಸುವ ಖಾಸಗಿ ಬಸ್ಗಳಲ್ಲಿ ಸರ್ಕಾರಿ ನಿಯಮದ ಪ್ರಕಾರ ಇಬ್ಬರು ಚಾಲಕರು ಹಾಗೂ ಒಬ್ಬರು ಕ್ಲಿನರ್ ಇರಬೇಕು. ಆದರೆ ಕೆಲ ಖಾಸಗಿ ಬಸ್ಗಳಲ್ಲಿ ಒಬ್ಬರೇ ಚಾಲಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಚಾಲಕನ ನಿದ್ರೆ ಮಂಪರಿನಲ್ಲಿ ಅಪಘಾತ ಸಂಭವಿಸಿ ಪ್ರಯಾಣಿಕರು ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ. ಖಾಸಗಿ ಬಸ್ಗಳಲ್ಲಿ ಬೆಂಕಿ ನಂದಕ (ಫೈಯರ್ ಸೇಫ್ಟಿ) ಇಲ್ಲದೆ ಪ್ರಯಾಣಿಕರ ಸುರಕ್ಷತೆ ಇಲ್ಲದಂತಾಗಿದೆ. ಅತಿವೇಗವಾಗಿ ಚಲಾಯಿಸುವುದು, ತಾಂತ್ರಿಕ ದೋಷಗಳು ಇರುವ ವಾಹನಗಳನ್ನು ರಸ್ತೆ ಇಳಿಸುವುದು, ಅನೇಕ ನಿಯಮ ಉಲ್ಲಂಘಿಸಿ ಅಮಾಯಕರ ಪ್ರಾಣಕ್ಕೆ ಕುತ್ತು ತರುತ್ತಿರುವ ಖಾಸಗಿ ಟ್ರಾವೆಲ್ಸ್ಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಪುತ್ರಗೌಡ ಜಾಗಿರನಂದಿಹಾಳ, ತಾಲ್ಲೂಕು ಘಟಕದ ಅಧ್ಯಕ್ಷ ದುರ್ಗಾಪ್ರಸಾದ, ಬಸಣ್ಣ ಕೋಠಾ, ಮಹ್ಮದ್ ಸಾಬ, ದುರಗಪ್ಪ ಗುಡಿಸಲಮನಿ, ಲಕ್ಷ್ಮಣ ನಾಯಕ, ಹುಲಗಪ್ಪ, ಹನುಮಗೌಡ, ಹನುಮಂತ ಹಳ್ಳಿ, ಲಾಲಸಾಬ ಇನ್ನಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-32-1893392282

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.