ಲಿಂಗಸುಗೂರು: ‘ಪಟ್ಟಣದ ಎಪಿಎಂಸಿ ಮಳಿಗೆಯಲ್ಲಿ ಸರ್ಕಾರ ಆರಂಭಿಸಿರುವ ತೊಗರಿ ಖರೀದಿ ಕೇಂದ್ರದಲ್ಲಿ ತೂಕದಲ್ಲಿ ಅನಗತ್ಯ ಸೂಟ್ ಕಡಿತಗೊಳಿಸಲಾಗುತ್ತಿದೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖರೀದಿ ಕೇಂದ್ರಕ್ಕಿಂತ ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಹೆಚ್ಚಿದ್ದ ಕಾರಣ ರೈತರು ಖರೀದಿ ಕೇಂದ್ರ ಬಿಟ್ಟು ಮಾರುಕಟ್ಟೆಯಲ್ಲಿ ತೊಗರಿ ಮಾರಾಟ ಮಾಡಿದ್ದರು. ಆದರೆ, ಮತ್ತೆ ಮಾರುಕಟ್ಟೆಯಲ್ಲಿ ತೊಗರಿ ದರ ₹7,800 ಗೆ ಇಳಿಕೆಯಾದ ಕಾರಣ ರೈತರು ಮತ್ತೆ ಖರೀದಿ ಕೇಂದ್ರದತ್ತ ಮುಖ ಮಾಡಿದ್ದಾರೆ. ತೊಗರಿ ಕೇಂದ್ರದಲ್ಲಿ ₹8 ಸಾವಿರಕ್ಕೆ ಕ್ವಿಂಟಲ್ ಖರೀದಿಸಲಾಗುತ್ತಿದೆ.

‘ಕ್ವಿಂಟಲ್ಗೆ 3 ಕೆ.ಜಿ ಕಡಿತ’: ತೊಗರಿ ಖರೀದಿ ಕೇಂದ್ರಗಳಲ್ಲಿ 50 ಕೆ.ಜಿಗೆ 500 ಗ್ರಾಂ ತೊಗರಿ ಸೂಟ್ ಕಡಿತಗೊಳಿಸುವ ನಿಯಮ ಇದೆ. ಆದರೆ, ಖರೀದಿ ಕೇಂದ್ರದವರು ಕ್ವಿಂಟಲ್ಗೆ ಒಟ್ಟು ಮೂರು ಕೆಜಿ ಸೂಟ್ ಕಡಿತಗೊಳಿಸುತ್ತಿದ್ದಾರೆ. ಇದಲ್ಲದೆ ರೈತರೊಬ್ಬರ ಒಟ್ಟು ಮಾರಾಟದ ತೊಗರಿಯಲ್ಲಿ 16-18 ಕೆಜಿ ತೊಗರಿಯನ್ನು ಸ್ಯಾಂಪಲ್ ಅಂತ ಹೇಳಿ ಕಡಿತ ಮಾಡಲಾಗುತ್ತಿದೆ ಇದು ರೈತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಮೊದಲೇ ತೊಗರಿಗೆ ಬೆಲೆ ಕಡಿಮೆಯಾಗು ತ್ತಿರುವ ಕಾರಣ ರೈತರು ಚಿಂತಾಕ್ರಾಂತರಾಗಿದ್ದಾರೆ. ಅಂಥದರಲ್ಲಿ ಅನಗತ್ಯ ಸೂಟ್ ಕಡಿತ ಮಾಡುತ್ತಿರುವುದು ಸರಿಯಲ್ಲ’ ಎಂದು ರೈತ ಶರಣಪ್ಪ ಹಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-32-2022402730

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.