ಲಿಂಗಸುಗೂರು: ‘ಸೆ,18ರಂದು ನಡೆಯಬೇಕಾಗಿದ್ದ ಸ್ಥಳೀಯ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಗೆ ಕಲಬುರಗಿಯ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿದ್ದರಿಂದ ಮುಂದೂಡಲಾಗಿದೆ’ ಎಂದು ಚುನಾವಣಾಧಿಕಾರಿ ಶಂಶಾಲಂ ನಾಗಡದಿನ್ನಿ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ‘ಕಲಬುರಗಿಯ ಹೈಕೋರ್ಟ್ ಪೀಠ ಕೆಲ ಸದಸ್ಯರ ಅನರ್ಹತೆಗೆ ಸಂಬಂಧಿಸಿ ಸಲ್ಲಿಸಿದ ರಿಟ್‍ಗೆ ತಡೆಯಾಜ್ಞೆ ನೀಡಿ ಸೆ.19ಕ್ಕೆ ದಿನಾಂಕ ನಿಗದಿಪಡಿಸಿದೆ. ಹೈಕೋರ್ಟ್‍ನ ಮುಂದಿನ ಆದೇಶ ಆಧರಿಸಿ ಪುನಃ ಚುನಾವಣಾ ದಿನಾಂಕ ಪ್ರಕಟಿಸಲಾಗುವುದು’ ಎಂದು ಹೇಳಿದರು.