ಲಿಂಗಸುಗೂರು: ಕಡಿಮೆ ದಾಖಲಾತಿ ಹೊಂದಿರುವ ತಾಲ್ಲೂಕಿನ 36 ಸರ್ಕಾರಿ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿರುವ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ವಿಲೀನಗೊಳಿಸಲು ಸರ್ಕಾರ ಸಜ್ಜಾಗಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆಕೆಆರ್ಡಿಬಿ ಅನುದಾನ ನೆರವಿನೊಂದಿಗೆ 200 ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲು ಶಿಕ್ಷಣ ಇಲಾಖೆ ಆದೇಶ ಮಾಡಿದ್ದರಿಂದ ಕಡಿಮೆ ವಿದ್ಯಾರ್ಥಿಗಳು ಹೊಂದಿರುವ ಸಣ್ಣ ಸರ್ಕಾರಿ ಶಾಲೆಗಳನ್ನು ದೊಡ್ಡ ಹಾಗೂ ಸೌಲಭ್ಯವುಳ್ಳ ಕೆಪಿಎಸ್ ಶಾಲೆಗಳೊಂದಿಗೆ ವಿಲೀನಗೊಳಿಸುವ ಉದ್ದೇಶದಿಂದ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆಯಲಾಗಿದೆ.

ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ವ್ಯಾಪ್ತಿಯ ತಾಲ್ಲೂಕಿನ ಚಿಕ್ಕಹೆಸರೂರು ಉನ್ನತೀಕರಿಸಿದ ಆರ್ಎಂಎಸ್ಎ ಸರ್ಕಾರಿ ಪ್ರೌಢಶಾಲೆಗೆ ಅಮರಾವತಿಯ ಹಿರಿಯ ಹಾಗೂ ಹಿರೇಹೆಸರೂರು ಕಿರಿಯ ಪ್ರಾಥಮಿಕ ಶಾಲೆಗಳು, ರೋಡಲಬಂಡಾ ಯುಕೆಪಿ ಸರ್ಕಾರಿ ಪಿಯು ಕಾಲೇಜಿಗೆ ಅದೇ ಗ್ರಾಮದ ಸರ್ಕಾರಿ ಪ್ರೌಢಶಾಲೆ, ಗೋನವಾಟ್ಲ ತಾಂಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುಂತಗೋಳದ ಪ್ರೌಢಶಾಲೆ, ಗೋನವಾಟ್ಲದ ಪ್ರಾಥಮಿಕ ಶಾಲೆ, ಕಸಬಾಲಿಂಗಸುಗೂರು ಗ್ರಾಮದ ಪ್ರಾಥಮಿಕ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆ, ಕೋಠಾ ಆರ್ಎಂಎಸ್ಎ ಶಾಲೆಗೆ ಗೌಡೂರು ಸರ್ಕಾರಿ ಪ್ರೌಢಶಾಲೆ, ಗುರುಗುಂಟಾ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಅದೇ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ, ಆನ್ವರಿ ಗ್ರಾಮದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸೇರಿ ಒಟ್ಟು 36 ಶಾಲೆಗಳನ್ನು ವಿಲೀನಗೊಳಿಸಿ ಕೆಪಿಎಸ್ ಶಾಲೆಗಳನ್ನಾಗಿ ಉನ್ನತಿಕರಿಸಲು ಮೇಲಾಧಿಕಾರಿಗಳ ಸೂಚನೆ ಮೇರಿಗೆ ಸ್ಥಳೀಯ ಬಿಇಒ ಅವರು ಶಾಲೆಗಳ ನಡುವಿನ ಅಂತರ, ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿ ಸಲ್ಲಿಸಲಾಗಿದೆ.

ಕೆಪಿಎಸ್ನಲ್ಲಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆ ವಿಲೀನವಾದರೆ ಆ ಶಾಲಾ ಕಟ್ಟಡಗಳನ್ನು ಯಾವುದಕ್ಕೆ ಉಪಯೋಗಿಸುತ್ತಾರೆ ಎಂದು ಕೆಲ ಗ್ರಾಮಸ್ಥರಲ್ಲಿ ಕಾಡುತ್ತಿರುವ ಪ್ರಶ್ನೆಯಾಗಿದೆ.

ಅತಿಥಿ ಶಿಕ್ಷಕರೇ ಆಧಾರ..!!

ತಾಲ್ಲೂಕಿನ 315 ಪ್ರಾಥಮಿಕ ಶಾಲೆಗಳಿಗೆ 1,860 ಮಂಜೂರಾತಿ ಶಿಕ್ಷಕರ ಹುದ್ದೆಗಳಲ್ಲಿ 992 ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 868 ಹುದ್ದೆಗಳು ಖಾಲಿ ಇವೆ. ಪ್ರೌಢಶಾಲೆಗಳಲ್ಲಿ 473 ಮಂಜೂರಾತಿ ಶಿಕ್ಷಕರ ಹುದ್ದೆಗಳಲ್ಲಿ 326 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು 150 ಶಿಕ್ಷಕ ಹುದ್ದೆಗಳು ಖಾಲಿ ಇವೆ. ತಾಲ್ಲೂಕಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಸೇರಿ ಒಟ್ಟು 1026 ಶಿಕ್ಷಕ ಹುದ್ದೆಗಳು ಖಾಲಿಯಿವೆ. ಇದರಲ್ಲಿ 828 ಅತಿಥಿ ಶಿಕ್ಷಕ ನೇಮಕಾತಿ ಮಾಡಿಕೊಂಡು ಶಾಲೆಗಳನ್ನು ಮುನ್ನಡೆಸಲಾಗುತ್ತಿದೆ.

‘ಶಾಲೆಗಳನ್ನು ವಿಲೀನ ಮಾಡುವ ಬದಲು ಅವುಗಳ ಬಲಪಡಿಸಲು ಸರಿಯಾದ ಯೋಜನೆ ರೂಪಿಸಬೇಕಾಗಿದೆ’ ಎಂಬುದು ಶಿಕ್ಷಣ ಪ್ರೇಮಿ ಶಿವಪುತ್ರಗೌಡ ಅಭಿಪ್ರಾಯವಾಗಿದೆ.

ಯಾರು ಏನು ಹೇಳುತ್ತಾರೆ? ಕೆಪಿಎಸ್ ಶಾಲೆಗಳನ್ನು ಉನ್ನತಿಕರಿಸುವ ನೆಪದಲ್ಲಿ ಸರ್ಕಾರ ಗ್ರಾಮೀಣ ಭಾಗದ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸಿದೆ. ಕೆಪಿಎಸ್ ಚಿಂತನೆ ಕೈಬಿಟ್ಟು ಈಗಿರುವ ಶಾಲೆಗಳಲ್ಲಿ ಅಗತ್ಯ ಸೌಕರ್ಯ ಹಾಗೂ ಶಿಕ್ಷಕರನ್ನು ನೇಮಕ ಮಾಡಲು ಸರ್ಕಾರ ಮುಂದಾಗಬೇಕು ರಮೇಶ ವೀರಾಪುರ ಎಸ್ಎಫ್ಐ ಜಿಲ್ಲಾ ಘಟಕ ಅಧ್ಯಕ್ಷ ಕೆಪಿಎಸ್ ಶಾಲೆಗಳನ್ನು ಉನ್ನತಿಕರಿಸಲು ಅಭ್ಯಂತರವಿಲ್ಲ ಆದರೆ 5 ಕಿ.ಮೀ ಒಳಗಿನ ಶಾಲೆಗಳನ್ನು ವಿಲೀನಗೊಳಿಸುವುದರಿಂದ 5 ಕಿ.ಮೀ ದೂರವಿರುವ ಶಾಲೆಗೆ ಮಕ್ಕಳು ಬರಲು ಹಿಂದೇಟು ಹಾಕ್ತಾರೆ. ಸಮರ್ಪಕ ಸಾರಿಗೆ ವ್ಯವಸ್ಥೆ ಕಷ್ಟಕರವಾಗುತ್ತಿದೆ ಶಾಂತಕುಮಾರ ಪಟ್ಟೇದ್ ಅಧ್ಯಕ್ಷ ಎಸ್ಡಿಎಂಸಿ ಚಿಕ್ಕಹೆಸರೂರು ಪ್ರೌಢಶಾಲೆ ಕಡಿಮೆ ದಾಖಲಾತಿ ಇರುವ ಶಾಲೆಗಳ ಹಾಗೂ ಶಾಲೆಗಳ ಅಂತರದ ವಿವರಗಳನ್ನು ಮೇಲಧಿಕಾರಿಗಳಿಗೆ ಸಲ್ಲಿಸಲಾಗಿದೆ ಸುಜಾತ ಹೂನೂರು ಬಿಇಒ ಲಿಂಗಸುಗೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.