ವಿಚಾರಣಾಧೀನ ಕೈದಿ ಸಾವು: ಪಾಲಕರ ಆಕ್ರೋಶ

ಭಾನುವಾರ, ಜೂಲೈ 21, 2019
26 °C

ವಿಚಾರಣಾಧೀನ ಕೈದಿ ಸಾವು: ಪಾಲಕರ ಆಕ್ರೋಶ

Published:
Updated:

ರಾಯಚೂರು: ನಗರದ ಗೋಶಾಲಾ ಬಳಿ ನಡೆದ ಕೊಲೆ ಆರೋಪದಲ್ಲಿ ಕಳೆದ ತಿಂಗಳು ಬಂಧಿತನಾಗಿದ್ದ ಮೊಹ್ಮದ್‌ ಶಫಿ (30) ಆರೋಪಿಯು ಹೃದಯಾಘಾತದಿಂದ ಭಾನುವಾರ ಮಧ್ಯಾಹ್ನ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮೃತನ ಪಾಲಕರು, ಪೊಲೀಸರ ನಿರ್ಲಕ್ಷ್ಯದಿಂದ ಈ ಸಾವಾಗಿದೆ ಎಂದು ಆರೋಪಿಸಿದ್ದಾರೆ. ಅನಾರೋಗ್ಯಕ್ಕೀಡಾಗಿದ್ದ ಪುತ್ರನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಾಕಷ್ಟು ಸಲ ಮನವಿ ಮಾಡಿಕೊಳ್ಳಲಾಗಿತ್ತು. ಆದರೂ ಪೊಲೀಸರು ಕಿವಿಗೊಡಲಿಲ್ಲ ಎಂದು ಮಾಧ್ಯಮಗಳ ಮುಂದೆ ಪಾಲಕರು ಆಳಲು ತೋಡಿಕೊಂಡಿದ್ದಾರೆ.

‘ಹೊಟ್ಟೆನೋವಿನಿಂದ ಬಳಲುತ್ತಿದ್ದ ಮೊಹ್ಮದ್‌ ಶಫಿಯನ್ನು ಬೆಳಿಗ್ಗೆ 10 ಗಂಟೆಗೆ ರಿಮ್ಸ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕಳುಹಿಸಲಾಗಿತ್ತು. ಚಿಕಿತ್ಸೆ ಪಡೆದು ಕಾರಾಗೃಹಕ್ಕೆ ಮಧ್ಯಾಹ್ನ 1 ಗಂಟೆಗೆ ಮರಳಿ ಬಂದಿದ್ದ. ಆದರೆ 1.40 ಕ್ಕೆ ಮತ್ತೆ ಅಸ್ವಸ್ಥನಾಗಿದ್ದರಿಂದ ರಿಮ್ಸ್‌ಗೆ ದಾಖಲಿಸಲಾಗಿತ್ತು. ಅಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿದ್ದಾನೆ’ ಎಂದು ಜೈಲರ್‌ ಶಹಾಬುದ್ದಿನ್‌ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !