ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ಪ್ರಾಧಿಕಾರದ ಅನುದಾನಕ್ಕೆ ಕತ್ತರಿ

Last Updated 1 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ):ಕ್ರೀಡೆಗೆ ಹೆಚ್ಚುವರಿವಾಗಿ ₹258.2 ಕೋಟಿ ಹಣ ತೆಗೆದಿಡಲಾಗಿದೆ.

ಕ್ರೀಡಾ ಸಚಿವಾಲಯಕ್ಕೆ ₹2196.36 ಕೋಟಿ ಮೀಸಲಾಗಿ ಇಡಲಾಗಿದ್ದು, ಕಳೆದ ಬಾರಿ ಇದು ₹1938.16 ಕೋಟಿಯಷ್ಟಿತ್ತು.

ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್‌ಎಐ) ಅನುದಾನವನ್ನು ₹495.73 ಕೋಟಿಯಿಂದ ₹429.56 ಕೋಟಿಗೆ ಇಳಿಸಲಾಗಿದ್ದು, ₹66 ಕೋಟಿ ಕಡಿತ ಮಾಡಲಾಗಿದೆ.

ಸರ್ಕಾರದ ನೆಚ್ಚಿನ ‘ಖೇಲೊ ಇಂಡಿಯಾ’ ಯೋಜನೆಯ ಅನುದಾನ ₹350 ಕೋಟಿಯಿಂದ ₹520.09 ಕೋಟಿಗೆ ಏರಿಕೆಯಾಗಿದೆ. ಕ್ರೀಡಾ ಬಜೆಟ್‌ನ ಶೇ 23.67ರಷ್ಟು ಹಣವನ್ನು ಈ ಯೋಜನೆಗೆ ಮೀಸಲಾಗಿಡಲಾಗಿದೆ.

ಕ್ರೀಡಾ ಕ್ಷೇತ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಯೋಜನೆಯ ಅನುದಾನವನ್ನು ₹10 ಕೋಟಿಯಿಂದ ₹5 ಕೋಟಿಗೆ ಇಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT