ರಾಯಚೂರು: ಜಿಲ್ಲೆಯಾದ್ಯಂತ ಮಹಾಶಿವರಾತ್ರಿಯನ್ನು ಭಕ್ತಿ ಭಾವದಿಂದ ಆಚರಿಸಲಾಗುತ್ತಿದ್ದು, ಶಿವ ದೇವಸ್ಥಾನಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮುಂದುವರಿದಿವೆ.

ಶುಕ್ರವಾರ ಬೆಳಗಿನ ಜಾವದಿಂದಲೇ ಶಿವಲಿಂಗಕ್ಕೆ ಮಹಾರುದ್ರಾಭಿಷೇಕ, ಅರ್ಚನೆ, ಪುಷ್ಪಾಲಂಕಾರಗಳನ್ನು ನೆರವೇರಿಸಲಾಯಿತು. ಉಪವಾಸ ವ್ರತ ಅಚರಣೆ ಆರಂಭಿಸಿರುವ ಭಕ್ತರು ಶಿವ ದೇವಸ್ಥಾನಗಳಿಗೆ ಗುಂಪುಗುಂಪಾಗಿ ಕುಟುಂಬ ಸಮೇತರಾಗಿ ತೆರಳಿ ದರ್ಶನ ಪಡೆದು ಹೋಗುತ್ತಿರುವುದು ದಿನವಿಡೀ ಮುಂದುವರಿದಿತ್ತು. ಶಿವನ ಕೃಪೆಗೆ ಪಾತ್ರರಾಗಲು ಅನೇಕ ದೇವಸ್ಥಾನಗಳಲ್ಲಿ ಭಜನೆ ಮೂಲಕ ಜಾಗರಣೆ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಸಾವಿರ ವರ್ಷ ಪ್ರಾಚೀನ ದೇವಸ್ಥಾನವಾಗಿರುವ ರಾಯಚೂರಿನ ಮಂತ್ರಾಲಯ ಮಾರ್ಗದಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಶಿವಲಿಂಗಕ್ಕೆ ಪೂಜೆ, ಬಿಲ್ವಾರ್ಚನೆ, ಭಕ್ತರಿಗೆ ಫಲಾಹಾರ ವಿತರಣೆ ವ್ಯವಸ್ಥೆ ಇತ್ತು. ಭಕ್ತರ ಅನುಕೂಲಕ್ಕಾಗಿ ದೇವಸ್ಥಾನ ಆವರಣದಲ್ಲಿ ಶಾಮೀಯಾನ ಅಳವಡಿಸಿ ನೆರಳು ಮಾಡಲಾಗಿತ್ತು.

ನಂದೇಶ್ವರ ದೇವಸ್ಥಾನದಲ್ಲಿಯೂ ಬೆಳಗಿನ ಜಾವದಿಂದಲೇ ಭಕ್ತರ ದಂಡು ಮುಗಿಬಿದ್ದಿರುವುದು ಕಂಡುಬಂತು. ಭಕ್ತರನ್ನು ಹಾಗೂ ಭಕ್ತರಿಗೆ ಸಂಬಂಧಿಸಿದ ವಾಹನಗಳನ್ನು ನಿಯಂತ್ರಿಸುವುದಕ್ಕಾಗಿ ಬೆಳಗಿನ ಜಾವದಿಂದಲೇ ಪೊಲೀಸರನ್ನು ನಿಯೋಜಿಸಿದ್ದು ಗಮನ ಸೆಳೆಯಿತು. ಮಂತ್ರಾಲಯ ಹೆದ್ದಾರಿಯುದ್ದಕ್ಕೂ ವಾಹನಗಳನ್ನು ನಿಲುಗಡೆ ಮಾಡುವುದಕ್ಕೆ ಸೂಚಿಸಲಾಗಿತ್ತು. ದೇವಸ್ಥಾನದೊಳಗೆ ಸರದಿಯಲ್ಲಿ ಹೋಗಿ ದರ್ಶನ ಮಾಡುವುದಕ್ಕೆ ಏರ್ಪಾಡಾಗಿತ್ತು. ದೇವಸ್ಥಾನ ಆಡಳಿತ ಮಂಡಳಿ ನೇತೃತ್ವದಲ್ಲಿ ಭಕ್ತರಿಗೆ ಮಂಡಾಳ ವಗ್ಗರಣೆ ಮಾಡಿ ಹಂಚಲಾಯಿತು. ಜಾಗರಣೆಗಾಗಿ ಭಜನಾ ಮಂಡಳಿಗಳು ಭಾಗವಹಿಸಿದ್ದವು.

ನಗರೇಶ್ವರ ದೇವಸ್ಥಾನದಲ್ಲಿಯೂ ಭಕ್ತರು ಭಾರಿ ಸಂಖ್ಯೆಯಲ್ಲಿ ನೆರೆದಿದ್ದರು. ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರಿದಿದ್ದವು. ಸುಮಂಗಲಿಯರು ಸಾಮೂಹಿಕವಾಗಿ ಶಿವನ ಕುರಿತಾದ ಭಕ್ತಿಗೀತೆಗಳ ಗಾಯನ ಮಾಡಿದರು. ಶಿವಲಿಂಗಕ್ಕೆ ಅಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಷನೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ತಡರಾತ್ರಿವರೆಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ದೇವಸ್ಥಾನ ನೆಲಮಹಡಿಯಲ್ಲಿರುವ ಜ್ಯೋತಿರ್ಲಿಂಗಗಳ ದೇವಸ್ಥಾನಗಳ ಮಾದರಿಗಳನ್ನು ಜನರು ಕಣ್ತುಂಬಿಕೊಂಡರು.

ನಗರದ ಮಧ್ಯೆಭಾಗದಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನದ ಒಳಾಂಗಣ ಮತ್ತು ಹೊರಭಾಗದಲ್ಲಿ ಭಕ್ತರ ಸರದಿ ದಿನವಿಡೀ ಕಂಡುಬಂತು. ದರ್ಶನ ಪಡೆಯಲು ಕನಿಷ್ಠ ಒಂದು ತಾಸು ಕಾಯಬೇಕಿತ್ತು. ಲಿಂಗಕ್ಕೆ ವಿಶೇಷ ಪುಷ್ಪಾಲಂಕಾರ, ಬಿಲ್ವಾರ್ಚನೆ ಮಾಡಲಾಯಿತು. ದಟ್ಟಣೆ ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಲಾಗಿತ್ತು.

ಇವುಗಳಲ್ಲದೇ ಆಶಾಪೂರ ಮಾರ್ಗದಲ್ಲಿರುವ ಎನ್ಐಜಿ ಕಾಲೋನಿಯ ಕಾಶಿ ವಿಶ್ವನಾಥೇಶ್ವರ ಲಿಂಗುವಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಏಗನೂರು ಟೆಂಪಲ್, ರಾಜಾಮಾತಾ ದೇವಸ್ಥಾನ, ವೀರಭಧ್ರೇಶ್ವರ ದೇವಸ್ಥಾನ, ಮಾಣಿಕೇಶ್ವರ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ ಸೇರಿದಂತೆ ಬಹುತೇಕ ದೇವಸ್ಥಾನಗಳಲ್ಲಿ ಮಹಾಶಿವರಾತ್ರಿ ನಿಮಿತ್ತ ವಿಶೇಷ ಪೂಜೆಗಳು ನೆರವೇರಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.